ETV Bharat / sports

ಮಹಿಳಾ ಪ್ರೀಮಿಯರ್​ ಲೀಗ್​: ಮುಂಬೈಗೆ 9 ವಿಕೆಟ್​ ಸೋಲು, ಅಗ್ರಸ್ಥಾನಿ ಡೆಲ್ಲಿಗೆ ಫೈನಲ್​ ಗುರಿ - DC thrash MI by nine wickets

ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ವಾರಿಯರ್ಸ್​ 9 ವಿಕೆಟ್​ಗಳಿಂದ ಗೆಲುವು ಸಾಧಿಸಿದ್ದು, ಪಾಯಿಂಟ್​ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.

ಮಹಿಳಾ ಪ್ರೀಮಿಯರ್​ ಲೀಗ್​
ಮಹಿಳಾ ಪ್ರೀಮಿಯರ್​ ಲೀಗ್​
author img

By

Published : Mar 21, 2023, 7:07 AM IST

ಮುಂಬೈ: ಮಹಿಳಾ ಪ್ರೀಮಿಯರ್​ ಲೀಗ್​ನ(WPL) ಫೈನಲ್​ ತಲುಪುವ ಗುರಿಯೊಂದಿಗೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್​ ನಾರಿಯರಿಗೆ, ಡೆಲ್ಲಿ ಕ್ಯಾಪಿಟಲ್ಸ್​ ವನಿತೆಯರು ಶಾಕ್ ನೀಡಿದ್ದಾರೆ. 9 ವಿಕೆಟ್​ಗಳಿಂದ ಗೆಲುವು ಸಾಧಿಸುವ ಮೂಲಕ ಡೆಲ್ಲಿ ತಂಡ ಅಗ್ರಸ್ಥಾನಕ್ಕೇರಿತು. ಉಭಯ ತಂಡಗಳಿಗೆ ತಲಾ ಒಂದು ಲೀಗ್​ ಪಂದ್ಯ ಬಾಕಿ ಉಳಿದಿದ್ದು ಗೆದ್ದು ಅಗ್ರಸ್ಥಾನ ಪಡೆದವರು ಫೈನಲ್​ ತಲುಪಲಿದ್ದಾರೆ.

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ಗೆ ಅವಕಾಶ ಪಡೆದ ಮುಂಬೈ ಮಹಿಳೆಯರಿಗೆ ಡೆಲ್ಲಿಯ ಸ್ಟಾರ್ ಆಟಗಾರ್ತಿ ಮರಿಜಾನ್ನೆ ಕಾಪ್​ ಡಬಲ್​ ಸ್ಟ್ರೋಕ್​ ನೀಡಿದರು. ಯಾಸ್ಟಿಕಾ ಬಾಟಿಯಾ, ನ್ಯಾಟ್ ಸೀವರ್​ ಬ್ರಂಟ್​ರ ವಿಕೆಟ್ ಪಡೆದು ಅದ್ಭುತ ಆರಂಭ ಒದಗಿಸಿದರು. ಇದಾದ ಬಳಿಕವೂ ತಂಡ ರನ್ ಕಲೆ ಹಾಕುವಲ್ಲಿ ವಿಫಲವಾಗಿ 8 ವಿಕೆಟ್​ಗೆ 109 ರನ್​ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ನಾಯಕಿ ಮೆಗ್​ ಲ್ಯಾನಿಂಗ್​, ಶೆಫಾಲಿ ವರ್ಮಾ, ಅಲಿಸ್​ ಕ್ಯಾಪ್ಸಿ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಕೇವಲ 9 ಓವರ್​ಗಳಲ್ಲಿ 110 ರನ್​ ಬಾರಿಸಿ ಪಂದ್ಯ ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.

ತ್ರಿಮೂರ್ತಿಗಳಿಂದ ಮುಗಿದ ಆಟ: ಮುಂಬೈ ಇಂಡಿಯನ್ಸ್​ ನೀಡಿದ ಅಲ್ಪ ಮೊತ್ತವನ್ನು ಸಲೀಸಾಗಿ ಮುಟ್ಟಲು ಡೆಲ್ಲಿಯ ನಾಯಕಿ ಮೆಗ್​ ಲ್ಯಾನಿಂಗ್​, ಡ್ಯಾಶಿಂಗ್​ ಬ್ಯಾಟರ್​ ಶೆಫಾಲಿ ವರ್ಮಾ, ಅಲಿಸಾ ಕ್ಯಾಪ್ಸಿ ಕಾರಣರಾದರು. ಆರಂಭದಿಂದಲೇ ಮುಂಬೈ ಬೌಲಿಂಗ್​ ಪಡೆ ಮೇಲೆ ಮುಗಿಬಿದ್ದರು. ಮೆಗ್ ಲ್ಯಾನಿಂಗ್ 22 ಎಸೆತಗಳಲ್ಲಿ ಔಟಾಗದೆ 32, ಶೆಫಾಲಿ ವರ್ಮಾ 15 ಎಸೆತಗಳಲ್ಲಿ 33 ರನ್​ ಬಾರಿಸಿ ಮೊದಲ ವಿಕೆಟ್​ಗೆ 56 ರನ್​ಗಳ ಜೊತೆಯಾಟ ನೀಡಿದರು. ಇಬ್ಬರೂ ಸೇರಿ 10 ಬೌಂಡರಿ 2 ಸಿಕ್ಸರ್​ ಸಿಡಿಸಿದರು.

ಶೆಫಾಲಿ ವರ್ಮಾ ಔಟಾದ ಬಳಿಕ ಬಂದ ಆಲಿಸಾ ಕ್ಯಾಪ್ಸಿ ಬಿರುಸಿನ ಬ್ಯಾಟ್​ ಮಾಡಿ 5 ಸಿಕ್ಸರ್​, 1 ಬೌಂಡರಿಸಮೇತ 17 ಎಸೆತಗಳಲ್ಲಿ 38 ರನ್ ಬಾರಿಸಿ ಗೆಲುವು ತಂದುಕೊಟ್ಟರು. ಇದರಿಂದ ತಂಡವು 66 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ, ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಟೂರ್ನಿಯ ಹಾಟ್​ ಫೇವರೆಟ್​ ತಂಡ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ತಂಡದ ಅಗ್ರ ಕ್ರಮಾಂಕ ಕುಸಿದ ಕಾರಣ ತಂಡ ಅಲ್ಪಮೊತ್ತ ಗಳಿಸಿತು. ಮೂರನೇ ಓವರ್‌ನಲ್ಲಿ ಮರಿಜನ್ನೆ ಕಾಪ್​ ದಾಳಿಗೆ ತುತ್ತಾಗಿ ಸತತ 2 ವಿಕೆಟ್​ ಕಳೆದುಕೊಂಡಿತು. 3.3 ಓವರ್‌ಗಳಲ್ಲಿ 10 ರನ್​ಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು. ಇದಾದ ಬಳಿಕ ಚೇತರಿಸಿಕೊಳ್ಳದ ತಂಡ ಕುಸಿತ ಕಾಣುತ್ತಾ ಸಾಗಿತು.

ಪೂಜಾ ವಸ್ತ್ರಾಕರ್ 26, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಇಸ್ಸಿ ವಾಂಗ್ ತಲಾ 23 ರನ್ ಗಳಿಸಿದರು. ಕೌರ್ ಮತ್ತು ವಸ್ತ್ರಾಕರ್ ನಡುವೆ ಐದನೇ ವಿಕೆಟ್‌ಗೆ 37 ರನ್‌ಗಳ ಜೊತೆಯಾಟವೇ ಮುಂಬೈ ಪರ ಗರಿಷ್ಠವಾಗಿತ್ತು. ಡೆಲ್ಲಿಯ ಪರವಾಗಿ ಮರಿಜಾನ್ನೆ ಕಾಪ್​, ಶಿಖಾ ಪಾಂಡೆ, ಜೆಸ್​ ಜೊನಾಸ್ಸೆನ್​ ತಲಾ ವಿಕೆಟ್​ ಪಡೆದರೆ, ಅರುಂಧತಿ ರೆಡ್ಡಿ 1 ವಿಕೆಟ್​ ಕಿತ್ತರು.

ಇಂದಿನ ಪಂದ್ಯಗಳು: ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಅಗ್ರಸ್ಥಾನ ಪಡೆಯಲು ಹಣಾಹಣಿ ನಡೆಸಲಿವೆ. ಇಂದು ಉಭಯ ತಂಡಳಿಗೆ ತಲಾ ಒಂದು ಪಂದ್ಯ ಬಾಕಿ ಇದೆ. ಡೆಲ್ಲಿ ಮಹಿಳೆಯರು ಯುಪಿ ವಾರಿಯರ್ಸ್​ ಜೊತೆ ಕಾದಾಡಿದರೆ, ಮುಂಬೈ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಆರ್​ಸಿಬಿಯನ್ನು ಎದುರಿಸಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ ತಲುಪಲಿದೆ. 2 ಮತ್ತು 3 ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್​ ಪಂದ್ಯವಾಡಿ ಫೈನಲ್​ ತಲುಪಿದೆ. ಲೀಗ್​ ಹಂತ ಇಂದು ಕೊನೆಯಾಗಲಿದ್ದು, ಡೆಲ್ಲಿ ಮತ್ತು ಮುಂಬೈ ತಂಡಗಳು ತಲಾ 7 ಪಂದ್ಯಗಳಿಂದ 10 ಅಂಕಗಳನ್ನು ಹೊಂದಿವೆ. ಮುಂಬೈ +1.725 ರನ್​ ರೇಟ್​ ಹೊಂದಿದ್ದರೆ, ಡೆಲ್ಲಿ +1.978 ಹೊಂದಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಮೂರು ವಿಕೆಟ್​ಗಳ ರೋಚಕ ಜಯ: ಪ್ಲೇ-ಆಫ್​ ಪ್ರವೇಶಿಸಿದ ಯುಪಿ ವಾರಿಯರ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.