ETV Bharat / sports

ICC ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್​: ಕಾಂಗರೂ ವಿರುದ್ಧ ಗೆದ್ದ ಲಂಕಾ 3ನೇ ಸ್ಥಾನಕ್ಕೆ ಲಗ್ಗೆ; 5ಕ್ಕೆ ಕುಸಿದ ಭಾರತ - ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್​ ಪಟ್ಟಿ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ದಾಖಲು ಮಾಡಿದೆ. ಈ ಮೂಲಕ ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಪ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

World Test Championship Points Table
World Test Championship Points Table
author img

By

Published : Jul 11, 2022, 9:47 PM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ ಶ್ರೀಲಂಕಾ ಸರಣಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್​ ಪಟ್ಟಿಯಲ್ಲಿ ಏರಿಕೆ ಕಂಡಿದ್ದು, 3ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್​ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಕಾಂಗರೂ ವಿರುದ್ಧ ಶ್ರೀಲಂಕಾ ಗೆದ್ದು 12 ಪಾಯಿಂಟ್​​ಗಳಿಕೆ ಮಾಡಿರುವ ಕಾರಣ ಇದೀಗ ಪಾಕಿಸ್ತಾನ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಸದ್ಯ ಪಾಕ್​ 4ನೇ ಸ್ಥಾನದಲ್ಲಿದ್ದು, ಭಾರತ 5ನೇ ಕ್ರಮಾಂಕದಲ್ಲಿದೆ.

ಇದನ್ನೂ ಓದಿರಿ: ಡೆಬ್ಯು ಟೆಸ್ಟ್​ನಲ್ಲೇ 12 ವಿಕೆಟ್ ಪಡೆದು ಮಿಂಚಿದ ಜಯಸೂರ್ಯ.. ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಗೆದ್ದ ಶ್ರೀಲಂಕಾ

ಮುಂದಿನ ಕೆಲ ದಿನಗಳಲ್ಲಿ ಪಾಕಿಸ್ತಾನ - ಶ್ರೀಲಂಕಾ ನಡುವೆ ಟೆಸ್ಟ್​ ಸರಣಿ ನಡೆಯಲಿದ್ದು, ಇಲ್ಲಿ ಲಂಕಾ ಗೆಲುವು ದಾಖಲು ಮಾಡಿದ್ರೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕುವ ಸಾಧ್ಯತೆ ಇದೆ. ಸದ್ಯ ಶ್ರೀಲಂಕಾ 54.17 ಶೇಕಡಾ ಅಂಕ ಹೊಂದಿದ್ದು, ಪಾಕಿಸ್ತಾನ 52.38 ಶೇಕಡಾ ಪಾಯಿಂಟ್​ ಹಾಗೂ ಭಾರತ ಶೇ. 52.08 ಪಾಯಿಂಟ್​ ಹೊಂದಿದೆ. ಉಳಿದಂತೆ ವೆಸ್ಟ್ ಇಂಡೀಸ್​​ 6ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್​​ 7ನೇ ಸ್ಥಾನದಲ್ಲಿ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.