ಅಹಮದಾಬಾದ್: ನಂಬಿಕಸ್ಥ ಬ್ಯಾಟರ್ ಜೋ ರೂಟ್ ಅರ್ಧಶತಕ, ನಾಯಕ ಜೋಸ್ ಬಟ್ಕರ್ ಅವರ ಉಪಯುಕ್ತ ಕಾಣಿಕೆಯಿಂದಾಗಿ ಏಕದಿನ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್ ನಷ್ಟಕ್ಕೆ 282 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. 2019 ರ ವಿಶ್ವಕಪ್ ಫೈನಲ್ನಲ್ಲಿ ಟೈ ಆಗಿದ್ದ ಪಂದ್ಯದಲ್ಲಿ ಬೌಂಡರಿ ಕಟ್ ಆಧಾರದ ಮೇಲೆ ಇಂಗ್ಲೆಂಡ್ ಎದುರು ಸೋತಿದ್ದ ಕಿವೀಸ್ ಆರಂಭಿಕ ಪಂದ್ಯದಲ್ಲಿ ಬಿಗಿ ಬೌಲಿಂಗ್ ದಾಳಿ ನಡೆಸಿತು.
ಆರಂಭಿಕರಾದ ಜಾನಿ ಬೈರ್ಸ್ಟೋವ್ ಮತ್ತು ಹೊಡಿಬಡಿ ಆಟಗಾರ ಡೇವಿಡ್ ಮಲಾನ್ ಸಾಧಾರಣ ಆರಂಭ ನೀಡಿದರು. ತಂಡ 40 ರನ್ ಗಳಿಸಿದ್ದಾಗ ಮಲಾನ್ (14) ಔಟಾದರು. ಇದಾದ ಬಳಿಕ ಜಾನಿ ಕೂಡ 33 ರನ್ಗೆ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಬಲ ನೀಡಬೇಕಿದ್ದ ಹ್ಯಾರಿ ಬ್ರೂಕ್ಸ್ (25) ಮತ್ತು ಮೊಯೀನ್ ಅಲಿ (11) ಅಲ್ಪ ಮೊತ್ತಕ್ಕೆ ವಿಕೆಟ್ ನೀಡಿದರು. ಇದರಿಂದಾಗಿ ತಂಡ 118 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
-
We've completed our innings and have set New Zealand 2️⃣8️⃣3️⃣ to win.
— England Cricket (@englandcricket) October 5, 2023 " class="align-text-top noRightClick twitterSection" data="
📍 Narendra Modi Stadium#EnglandCricket | #CWC23 pic.twitter.com/9DX5jjQpDD
">We've completed our innings and have set New Zealand 2️⃣8️⃣3️⃣ to win.
— England Cricket (@englandcricket) October 5, 2023
📍 Narendra Modi Stadium#EnglandCricket | #CWC23 pic.twitter.com/9DX5jjQpDDWe've completed our innings and have set New Zealand 2️⃣8️⃣3️⃣ to win.
— England Cricket (@englandcricket) October 5, 2023
📍 Narendra Modi Stadium#EnglandCricket | #CWC23 pic.twitter.com/9DX5jjQpDD
ಜೋ ರೂಟ್ ಅರ್ಧಶತಕ: ತಂಡ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ನೆರವಾದ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ನಿಧಾನಗತಿಯಲ್ಲಿ ರನ್ ಕಲೆಹಾಕಿದರು. ಇನ್ನೊಂದು ತುದಿಯಲ್ಲಿ ನಾಯಕ ಜೋಸ್ ಬಟ್ಲರ್ ಕೂಡ ರೂಟ್ಗೆ ಸಾಥ್ ನೀಡಿದರು. ಇಬ್ಬರೂ ಸೇರಿ 60 ರನ್ಗಳ ಜೊತೆಯಾಟ ನೀಡಿದರು. ಬಟ್ಲರ್ 43 ಗಳಿಸಿದ್ದಾಗ ಮ್ಯಾಟ್ ಹೆನ್ರಿಗೆ ವಿಕೆಟ್ ನೀಡಿದರು. ಅತ್ತ ರೂಟ್ 37 ನೇ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ 20, ಸ್ಯಾಮ್ ಕರ್ರನ್ 14, ಅದಿಲ್ ರಶೀದ್ 15 ರನ್ಗಳಿಂದ ತಂಡ ಒಟ್ಟಾರೆ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿತು.
ಕಿವೀಸ್ ಬಿಗುವಿನ ದಾಳಿ: ಕಳೆದ ವಿಶ್ವಕಪ್ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ರೀತಿಯಲ್ಲಿ ದಾಳಿ ಮಾಡಿದ ನ್ಯೂಜಿಲೆಂಡ್ ಬೌಲಿಂಗ್ ಪಡೆ, ಇಂಗ್ಲೆಂಡ್ ಬ್ಯಾಟರ್ಗಳನ್ನು ದೊಡ್ಡ ಮೊತ್ತ ಗಳಿಸದಂತೆ ಕಟ್ಟಿ ಹಾಕಿದರು. ವೇಗಿ ಮ್ಯಾಟ್ ಹೆನ್ರಿ 10 ಓವರ್ಗಳ ಕೋಟಾದಲ್ಲಿ ಕೇವಲ 48 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಿತ್ತರು. ಸ್ಪಿನ್ನರ್ಗಳಾದ ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಭಾರತೀಯ ಮೂಲದ ರಚಿನ್ ರವೀಂದ್ರ ತಲಾ 1 ವಿಕೆಟ್ ಗಳಿಸಿದರು.