ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಹಲವಾರು ಜನರಿಗೆ ಸ್ಪೂರ್ತಿ ಆಗಿದ್ದಾರೆ. ಅದರಲ್ಲೂ ಭಾರತದ ಆಟಗಾರರಿಗೆ ಸಚಿನ್ ಓರ್ವ ಕ್ರಿಕೆಟ್ ದಂತಕಥೆ. ಅವರು ಕ್ರಿಕೆಟ್ನಲ್ಲಿ ಮಾಡದ ದಾಖಲೆ, ಸಾಧನೆಗಳಿಲ್ಲ ಎಂದೇ ಹೇಳಬಹುದು. ಶತಕಗಳ ಸಂಖೆ, ದ್ವಿಶತಕ ಸಿಡಿಸಿದ ಮೊದಲಿಗ, ಒಟ್ಟಾರೆ ಅಂತಾರಾಷ್ಟ್ರೀಯ ಮೊತ್ತ, ಫಾರ್ಮ್ ಇಲ್ಲಾ ಎಂಬ ಕಾರಣದಿಂದ ಈ ವ್ಯಕ್ತಿ ಒಮ್ಮೆಯೂ ತಂಡದಿಂದ ಹೊರಗುಳಿದಿರಲಿಲ್ಲ. ಇಂತಹ ಆಟಗಾರ ಯಾರಿಗೆ ಪ್ರೇರಣೆ ಆಗದಿರಲು ಸಾಧ್ಯವಿಲ್ಲ ಹೇಳಿ.
ಈ ಎಲ್ಲಾ ಕಾರಣಗಳಿಂದ ವಿರಾಟ್ ಕೊಹ್ಲಿಗೆ ಸಚಿನ್ ಸ್ಪೂರ್ತಿ ಆಗಿದ್ದರು. ಬಾಲ್ಯದಲ್ಲಿ ಸಚಿನ್ ಆಟವನ್ನು ವಿರಾಟ್ ಟಿವಿಯಲ್ಲಿ ನೋಡಿ ಪ್ರೇರಣೆ ಪಡೆದಿದ್ದರು. ಇಂದು ಕೊಹ್ಲಿ ಅವರ ದಾಖಲೆಗಳಲ್ಲಿ ಕೆಲವನ್ನು ಬ್ರೇಕ್ ಮಾಡಿದರೆ, ಇನ್ನೂ ಕೆಲವನ್ನು ಸರಿಗಟ್ಟಿದ್ದಾರೆ. ವಿಶ್ವಕಪ್ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ವಿರಾಟ್ ಸಚಿನ್ರ ಒಂದು ಮೈಲಿಗಲ್ಲನ್ನು ತಲುಪಿ ಸಮನಾಗಿಸಿಕೊಂಡಿದ್ದಾರೆ. ವಿರಾಟ್ರ ಈ ಬೆಳವಣಿಗೆಗೆ ಸ್ವತಃ ಸಚಿನ್ ಶುಭಕೋರಿ ಹಾರೈಸಿದ್ದಾರೆ.
-
🗣️🗣️ 𝙄𝙩’𝙨 𝙖 𝙫𝙚𝙧𝙮 𝙚𝙢𝙤𝙩𝙞𝙤𝙣𝙖𝙡 𝙢𝙤𝙢𝙚𝙣𝙩 𝙛𝙤𝙧 𝙢𝙚.
— BCCI (@BCCI) November 5, 2023 " class="align-text-top noRightClick twitterSection" data="
- Virat Kohli on appreciation from the legendary Sachin Tendulkar after his 4⃣9⃣th ODI Ton 👏👏#TeamIndia | #CWC23 | #MenInBlue | #INDvSA | @sachin_rt | @imVkohli pic.twitter.com/jsVukcsY5k
">🗣️🗣️ 𝙄𝙩’𝙨 𝙖 𝙫𝙚𝙧𝙮 𝙚𝙢𝙤𝙩𝙞𝙤𝙣𝙖𝙡 𝙢𝙤𝙢𝙚𝙣𝙩 𝙛𝙤𝙧 𝙢𝙚.
— BCCI (@BCCI) November 5, 2023
- Virat Kohli on appreciation from the legendary Sachin Tendulkar after his 4⃣9⃣th ODI Ton 👏👏#TeamIndia | #CWC23 | #MenInBlue | #INDvSA | @sachin_rt | @imVkohli pic.twitter.com/jsVukcsY5k🗣️🗣️ 𝙄𝙩’𝙨 𝙖 𝙫𝙚𝙧𝙮 𝙚𝙢𝙤𝙩𝙞𝙤𝙣𝙖𝙡 𝙢𝙤𝙢𝙚𝙣𝙩 𝙛𝙤𝙧 𝙢𝙚.
— BCCI (@BCCI) November 5, 2023
- Virat Kohli on appreciation from the legendary Sachin Tendulkar after his 4⃣9⃣th ODI Ton 👏👏#TeamIndia | #CWC23 | #MenInBlue | #INDvSA | @sachin_rt | @imVkohli pic.twitter.com/jsVukcsY5k
ದಕ್ಷಿಣ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 101 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 49ನೇ ಶತಕ ಗಳಿಸಿದ ದಾಖಲೆ ಮಾಡಿದರು. ಜಾಗತಿಕ ಕ್ರಿಕೆಟ್ನಲ್ಲೂ ವಿರಾಟ್ ಮತ್ತು ಸಚಿನ್ ಜಂಟಿಯಾಗಿ ಅತಿಹೆಚ್ಚು ಶತಕ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿಯ ಈ 'ವಿರಾಟ' ಇನ್ನಿಂಗ್ಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿದೆ.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ವಿರಾಟ್ ಕೊಹ್ಲಿ,"ನನ್ನ ಹೀರೋ (ಸಚಿನ್ ತೆಂಡೂಲ್ಕರ್) ದಾಖಲೆಯನ್ನು ಸರಿಗಟ್ಟುವುದು ನನಗೆ ಈಗ ತುಂಬಾ ದೊಡ್ಡ ವಿಚಾರವಾಗಿದೆ. ಸಚಿನ್ ತೆಂಡೂಲ್ಕರ್ ಪರಿಪೂರ್ಣರಾಗಿದ್ದಾರೆ. ಅವರ ದಾಖಲೆಯನ್ನು ಸಮನಾಗಿಸಿದ್ದೇನೆ ಎಂಬುದು ನನಗೆ ಹೆಮ್ಮೆಯ ವಿಚಾರ. ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ, ನಾನು ಎಲ್ಲಿಂದ ಬಂದಿದ್ದೇನೆ ಎಂದು ನನಗೆ ತಿಳಿದಿದೆ, ನಾನು ಅವರನ್ನು (ಸಚಿನ್ ತೆಂಡೂಲ್ಕರ್) ಟಿವಿಯಲ್ಲಿ ನೋಡಿದ ದಿನಗಳು ನನಗೆ ತಿಳಿದಿದೆ. ಅವರಿಂದ ಆ ಮೆಚ್ಚುಗೆಯನ್ನು ಪಡೆಯುವುದು ನನಗೆ ಬಹಳಷ್ಟು ಅರ್ಥವಾಗಿದೆ" ಎಂದು ಹೇಳಿದ್ದಾರೆ.
"ಇದು ನನ್ನ ಜನ್ಮದಿನದಂದು ಸಂಭವಿಸಿದ ಕಾರಣ, ವಿಶೇಷವಾಗುತ್ತದೆ ಮತ್ತು ಜನರು ಅದನ್ನು ನನಗೆ ಹೆಚ್ಚು ವಿಶೇಷವಾಗಿಸಿದರು. ನಾನು ಇಂದು ಈ ಪಂದ್ಯವನ್ನು ಎಂದಿನಂತೆ ಆಡಿದ್ದೇನೆ. ಆದರೆ ಇದು ಹೊರಗಿನವರಿಗೆ ಬೇರೆ ರೀತಿ ಕಾಣುತ್ತದೆ. ಆರಂಭಿಕರು ಹಾಕಿಕೊಟ್ಟ ಬುನಾದಿ ಪಂದ್ಯವನ್ನು ಮುಂದೆ ಕೊಂಡೊಯ್ಯಲು ಹೆಚ್ಚು ನೆರವಾಗುತ್ತದೆ" ಎಂದಿದ್ದಾರೆ.
ಬಾಲ್ ಹಳೆಯದಾಗುತ್ತಿದಂತೆ ಸ್ಪಿನ್ನರ್ಗಳಿಗೆ ಹೆಚ್ಚು ಸಹಕಾರಿಯಾಗಿ ಕಂಡು ಬಂತು ಇದರಿಂದ ರನ್ ಗಳಿಕೆ ನಿಧಾನ ಆಗಿತ್ತು. ಇದು ನನ್ನ ಆತಂಕಕ್ಕೂ ಕಾರಣವಾಗಿತ್ತು. 315ರ ಗಡಿ ದಾಟಿದ ನಂತರ ಉತ್ತಮ ಹಂತ ತಲುಪಿದ್ದೇವೆ ಎಂಬ ನಂಬಿಕೆ ಬಂತು. ಹಾಗೇ ಗೆಲ್ಲುವ ವಿಶ್ವಾಸವೂ ಹೆಚ್ಚಾಯಿತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
"ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ, ಮತ್ತೆ ಕ್ರಿಕೆಟ್ ಆಡುತ್ತಿದ್ದೇನೆ, ಅದು ನನಗೆ ಎಲ್ಲಕ್ಕಿಂತ ಮುಖ್ಯವಾಗಿದೆ. ದೇವರು ನನಗೆ ಆ ಸಂತೋಷವನ್ನು ಅನುಗ್ರಹಿಸಿದ್ದಾನೆ ಎಂದು ನನಗೆ ಸಂತೋಷವಾಗಿದೆ. ನಾನು ಏನು ಮಾಡಲು ಸಾಧ್ಯವಾಗುತ್ತದೋ ಅದನ್ನು ಕಳೆದ ಕೆಲ ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ ಎಂಬುದೇ ನನಗೆ ತೃಪ್ತಿ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಭಾರತದ ಜೈತ್ರಯಾತ್ರೆಗಿಲ್ಲ ತಡೆ; ಆಫ್ರಿಕಾ ಮಣಿಸಿದ ಭಾರತಕ್ಕೆ ಸತತ 8ನೇ ಜಯ