ETV Bharat / sports

ವಿಶ್ವಕಪ್ ಕ್ರಿಕೆಟ್​: ಹ್ಯಾಟ್ರಿಕ್​ ಜಯ ದಾಖಲಿಸಿದ ಭಾರತಕ್ಕೆ ಪುಣೆಯಲ್ಲಿ ಬಾಂಗ್ಲಾ ಸವಾಲು.. ಈ ಆಟಗಾರರ ಮೇಲಿದೆ ಎಲ್ಲರ ಕಣ್ಣು! - ಭಾರತಕ್ಕೆ ಪುಣೆಯಲ್ಲಿ ಬಾಂಗ್ಲಾ ಸವಾಲು

ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿರುವ ಭಾರತಕ್ಕೆ ಬಾಂಗ್ಲಾದೇಶ ನಾಲ್ಕನೇ ಸಾವಾಲಾಗಿದೆ. ಈ ಪಂದ್ಯದಲ್ಲಿ ಹೆಚ್ಚಿನ ನಿರೀಕ್ಷೆ ಇರುವ ಆಟಗಾರರಿವರು.

World Cup 2023
World Cup 2023
author img

By ETV Bharat Karnataka Team

Published : Oct 17, 2023, 7:11 PM IST

Updated : Oct 17, 2023, 7:53 PM IST

ಪುಣೆ (ಮಹಾರಾಷ್ಟ್ರ): ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಭಾರತ ತಂಡ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದು, ಈ ಜಯವನ್ನು ಅಜೇಯವಾಗಿ ಮುಂದುವರೆಸುವ ಚಿಂತನೆಯಲ್ಲಿದೆ. ವಿಶ್ವಕಪ್​ಗೂ ಮುನ್ನ ನಡೆದ ಏಷ್ಯಾಕಪ್​ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್​ ಆಗಿತ್ತು. ಅದರ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ಸರಣಿಯನ್ನು ಗೆದ್ದು ಬೀಗಿತ್ತು. ಈ ವೇಳೆ, ತಂಡ ತನ್ನ ಎಲ್ಲ ಕ್ಷೇತ್ರಗಳಲ್ಲಿ ಸುಧಾರಿತ ಪ್ರದರ್ಶನವನ್ನು ನೀಡಿತ್ತು. ವಿಶ್ವಕಪ್​ನಲ್ಲಿ ಕೂಡಾ ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿದ್ದು ಸತತ ಮೂರು ಗೆಲುವುಗಳನ್ನು ಪಡೆದುಕೊಂಡಿದೆ.

ಮೆನ್​ ಇನ್ ಬ್ಲೂ ಗುರುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಮೂರು ಪಂದ್ಯವನ್ನು ಆಡಿರುವ ಬಾಂಗ್ಲಾ ಟೈಗರ್ಸ್​ ಅಫ್ಘಾನಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಗೆದ್ದು, ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ವಿರುದ್ಧ ಸೋಲು ಕಂಡಿದೆ. ವಿಶ್ವಕಪ್​ನ ಪ್ಲೇ ಆಫ್​ ಪ್ರವೇಶದ ಕನಸು ಕಾಣುತ್ತಿರುವ ಬಾಂಗ್ಲಾಕ್ಕೆ ನಾಳಿನ ಪಂದ್ಯದ ಗೆಲುವು ಅತಿ ಪ್ರಮುಖವಾಗಿದೆ.

ಭಾರತ ತಂಡದ ಎಲ್ಲ ಆಟಗಾರರು, ಎಲ್ಲ ವಿಭಾಗಗಲ್ಲಿ ಸದೃಢವಾಗಿದ್ದು, ತಾನಾಡಿರುವ ಮೂರೂ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದೆ. ಹೀಗಿರುವಾಗ ಭಾರತಕ್ಕೆ ಬಾಂಗ್ಲಾ ದೊಡ್ಡ ಸವಾಲಾಗಿ ಕಾಣುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಶಕೀಬ್​ ಅಲ್​ ಹಸನ್​ ಪಡೆಯನ್ನು ಕೇವಲವಾಗಿ ಕಡೆಗಣಿಸುವಂತೆಯೂ ಇಲ್ಲ. ತಂಡವಾಗಿ ಬಾಂಗ್ಲಾ ಕೂಡ ಬಲಿಷ್ಠವಾಗಿದೆ. ವಿಶ್ವಕಪ್​ ವೇದಿಕೆಯಲ್ಲಿ ಉಭಯ ತಂಡಗಳು 4 ಬಾರಿ ಮುಖಾಮುಖಿ ಆಗಿದ್ದು, ಭಾರತ 3 ಬಾರಿ ಗೆದ್ದು, ಒಮ್ಮೆ ಮಾತ್ರ ಮುಗ್ಗರಿಸಿದೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಘರ್ಜಿಸುವ ಐದು ಪ್ರಮುಖ ಆಟಗಾರರು ಇವರು:

World Cup 2023
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ: 2022ರ ಅಂತ್ಯದಲ್ಲಿ ಫಾರ್ಮ್​ಗೆ ಮರಳಿರುವ ವಿರಾಟ್​ ಕೊಹ್ಲಿ ವಿಶ್ವಕಪ್​ ವರ್ಷದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಅವರ ಬ್ಯಾಟ್​ನಿಂದ ಅರ್ಧಶತಕ ದಾಖಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 85 ರನ್‌ಗಳಿಗೆ ಔಟಾದರೆ, ಅಫ್ಘಾನಿಸ್ತಾನ ವಿರುದ್ಧ 55 ರನ್ ಗಳಿಸಿದರು. ಆದರೆ, ಪಾಕಿಸ್ತಾನದ ವಿರುದ್ಧ ದೊಡ್ಡ ಮೊತ್ತಗಳಿಸುವಲ್ಲಿ ವಿಫಲರಾದರು. ಬಾಂಗ್ಲಾ ವಿರುದ್ಧ ಪುಣೆ ಮೈದಾನದಲ್ಲಿ ಕೊಹ್ಲಿ ಅಮೋಘ ಆಟವಾಡುವ ನಿರೀಕ್ಷೆಯಿದೆ.

World Cup 2023:
ರೋಹಿತ್ ಶರ್ಮಾ

ರೋಹಿತ್ ಶರ್ಮಾ: 2019 ರಲ್ಲಿ ಟಾಪ್​ ಸ್ಕೋರರ್ ಆಗಿದ್ದ​ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ತಮ್ಮ ವಿಶ್ವಕಪ್​ ಪ್ರದರ್ಶನದ ಗುಣಮಟ್ಟವನ್ನು ನಾಲ್ಕು ವರ್ಷಗಳ ನಂತರವೂ ಹಾಗೇ ಕಾಯ್ದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ವಿಫಲತೆ ಕಂಡರೂ ಮತ್ತೆರಡು ಪಂದ್ಯಗಳಲ್ಲಿ ಘರ್ಜಿಸಿದ ಅವರು ಪ್ರಸ್ತುತ ಭಾರತ ಪರ ಅತಿ ಹೆಚ್ಚು ರನ್ ಗಳಿಸಿ ಆಟಗಾರ ಎನಿಸಿಕೊಂಡಿದ್ದಾರೆ. ನಾಯಕ ರೋಹಿತ್​ ಶರ್ಮಾ ದೆಹಲಿಯಲ್ಲಿ ಆಫ್ಘನ್​ ವಿರುದ್ಧ 131 ರನ್‌ಗಳ ಇನ್ನಿಂಗ್ಸ್​ ಆಡಿದರೆ, ನಂತರ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 86 ರನ್​ಗಳ ಅಮೋಘ ಕೊಡುಗೆ ನೀಡಿದ್ದಾರೆ. ಬಾಂಗ್ಲಾ ವಿರುದ್ಧವೂ ಅವರ ಗೋಲ್ಡನ್​ ಫಾರ್ಮ್​ ಪ್ರದರ್ಶನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

World Cup 2023:
ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ: ಗಾಯಗೊಂಡಿದ್ದ ಬುಮ್ರಾ ವಿಶ್ವಕಪ್​ಗೂ ಎರಡು ತಿಂಗಳ ಮೊದಲು ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಹಿಂದಿನ ಲಯಕ್ಕೆ ಮರಳಿದ ಸ್ಟಾರ್​ ವೇಗಿ, ವಿಶ್ವಕಪ್​ನಲ್ಲೂ ತಮ್ಮ ಚಾರ್ಮ್​ ಅನ್ನು ಮುಂದುವರೆಸಿದ್ದಾರೆ. ಹೊಸ ಶೈನ್​ ಬಾಲ್​ನಲ್ಲಿ ಎದುರಾಳಿಗೆಳಿಗೆ ಸಿಂಹಸ್ವಪ್ನವಾಗಿರುವ ಬುಮ್ರಾ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾದ ಇಮಾಮ್-ಉಲ್-ಹಕ್ ಮತ್ತು ಅಬ್ದುಲ್ಲಾ ಶಫೀಕ್ ಅವರನ್ನು ಕಟ್ಟಿಹಾಕಿದರು. 19 ರನ್​ ಕೊಟ್ಟು 2 ವಿಕೆಟ್​ ಪಡೆದು ಪರಿಣಾಮಕಾರಿ ಬೌಲಿಂಗ್ ಮಾಡಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

World Cup 2023:
ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್: ಏಷ್ಯಾಕಪ್​ ಫೈನಲ್​​ನಲ್ಲಿ ಆರು ವಿಕೆಟ್​ ಪಡೆದು ಜಾದು ರೀತಿ ಬೌಲಿಂಗ್​ ಮಾಡಿ ಲಂಕಾವನ್ನು 50ರನ್​ಗಳಿಗೆ ಕಟ್ಟಿಹಾಕಿದ ಸಿರಾಜ್​ ವಿಶ್ವಕಪ್​ನ ಭರವಸೆಯ ಬೌಲರ್​. ವಿಶ್ವಕಪ್​ ಪಂದ್ಯಗಳಲ್ಲಿ ರನ್​ ಬಿಟ್ಟುಕೊಡುತ್ತಿದ್ದರೂ ವಿಕೆಟ್​ ಪಡೆಯುವುದರಲ್ಲಿ ಹಿಂದೆ ಬೀಳುವುದಿಲ್ಲ. ಡೆತ್ ಓವರ್​ಗಳಲ್ಲಿ ಪರಿಣಾಮಕಾರಿ ಬೌಲರ್​ ಆಗಿದ್ದು, ಬಾಲ್​ ಹಳೆಯದಾದ ನಂತರವೂ ಎದುರಾಳಿಗಳನ್ನು ಕಾಡುತ್ತಿದ್ದಾರೆ. ಪಾಕ್​ ವಿರುದ್ಧ ಆರಂಭದಲ್ಲಿ ರನ್​ ಬಿಟ್ಟುಕೊಟ್ಟರೂ ನಂತರ ಪ್ರಮುಖ ಎರಡು ವಿಕೆಟ್​ ಪಡೆದು ತಂಡಕ್ಕೆ ನೆರವಾದರು.

World Cup 2023:
ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್: ಬೆನ್ನು ನೋವಿಗೆ ತುತ್ತಾಗಿದ್ದ ಅಯ್ಯರ್​ ವಿಶ್ವಕಪ್​ಗೂ ಮುನ್ನ ತವರು ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಯಿಂದ ತಂಡಕ್ಕೆ ಸೇರ್ಪಡೆ ಆದರು. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್​ ಆಸರೆ ಆಗಿದ್ದಾರೆ ಈ ಯುವ ಬ್ಯಾಟರ್​. ಆಸಿಸ್​ ವಿರುದ್ಧ ಶೂನ್ಯಕ್ಕೆ ವಿಕೆಟ್​ ಕೊಟ್ಟರೂ, ನಂತರ ಆಫ್ಘನ್​​ ವಿರುದ್ಧ ಅಜೇಯ 25 ಮತ್ತು ಪಾಕಿಸ್ತಾನ ವಿರುದ್ಧ ಅಮೂಲ್ಯ 53 ರನ್​ನ ಇನ್ನಿಂಗ್ಸ್​​ ಆಡಿದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇವರಿಂದ ದೊಡ್ಡ ಮೊತ್ತದ ನಿರೀಕ್ಷೆ ಇದೆ.

ಇದನ್ನೂ ಓದಿ: ಐಸಿಸಿ ನಿಯಮ ಉಲ್ಲಂಘನೆ: ಅಫ್ಘಾನಿಸ್ತಾನ​ ಆರಂಭಿಕ ಆಟಗಾರ ಗುರ್ಬಾಜ್​ಗೆ ವಾಗ್ದಂಡನೆ

Last Updated : Oct 17, 2023, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.