ಚೆನ್ನೈ: ಆಸ್ಟ್ರೇಲಿಯ ವಿರುದ್ಧದ ಆರಂಭಿಕ ವಿಶ್ವಕಪ್ ಪಂದ್ಯಕ್ಕೆ ಮುಂಚಿತವಾಗಿ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಫಾರ್ಮ್ ನಲ್ಲಿರುವ ಯುವ ಆಟಗಾರ ಶುಬ್ಮನ್ ಗಿಲ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಈ ಯಂಗ್ ಅಂಡ್ ಎರ್ಜೆಟಿಕ್ ಬ್ಯಾಟರ್ ಭಾನುವಾರದ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ. ಒಂದು ವೇಳೆ ಗಿಲ್ ಅನಾರೋಗ್ಯದಿಂದ ಪಂದ್ಯ ಆಡಲು ವಿಫಲರಾದರೆ, ಅವರ ಬದಲಿಗೆ ಇನ್ನೊಬ್ಬ ಯುವ ಆಟಗಾರ ಇಶಾನ್ ಕಿಶನ್ ಓಪನರ್ ಆಗಬಹುದು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಪರವಾಗಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಗಿಲ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು ಡೆಂಘೀ ಪರೀಕ್ಷೆಗೆ ಒಳಗಾಗಲಿದ್ದಾರೆ. ಪರೀಕ್ಷೆ ಬಳಿಕ ಅವರು ಭಾನುವಾರ ಅಂಗಳಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಗೊತ್ತಾಗಲಿದೆ.
"ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರ ಇದ್ದಿದ್ದು ಕಂಡುಬಂದಿದೆ. ತೀವ್ರ ಜ್ವರದ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಶುಕ್ರವಾರ ಅವರಿಗೆ ಹೆಚ್ಚುವರಿ ಪರೀಕ್ಷೆಗಳು ನಡೆಯಲಿವೆ ಮತ್ತು ಆರಂಭಿಕ ಪಂದ್ಯದಲ್ಲಿ ಭಾಗವಹಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಬಿಸಿಸಿಐ ಗೌಪ್ಯ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಗಿಲ್‌ಗೆ ಡೆಂಘೀ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಡೆಂಘಿ ಹಿನ್ನೆಯಲ್ಲಿ ಅವರು ಒಂದೆರಡು ಪಂದ್ಯಗಳಿಂದ ದೂರ ಉಳಿಯಬೇಕಾಗಬಹುದು . ಡೆಂಘೀಯಿಂದ ಬಳಲುತ್ತಿರುವವರ ಶಾರೀರಿಕ ಚೇತರಿಕೆ ತ್ವರಿತವಾಗಿ ಆಗುವುದು ತುಸು ಕಷ್ಟ. ಇದು ಗುಣಮಖವಾಗಲು ಸಾಮಾನ್ಯವಾಗಿ ಸುಮಾರು 7-10 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹೋಗಲ್ಲ. ಇದು ಕಾಮನ್ ವೈರಲ್ ಫೀವರ್ ಆಗಿದ್ದರೆ, ಆ್ಯಂಟಿ ಬಯೋಟಿಕ್ ನೀಡಿ, ಆಟ ಆಡಿಸಬಹುದು. ಆದರೆ ಈ ಬಗ್ಗೆ ವೈದ್ಯಕೀಯ ತಂಡ ನಿರ್ಧರಿಸುತ್ತದೆ. ವೈದ್ಯರು ಏನು ಹೇಳುತ್ತಾರೋ ಅದರ ಮೇಲೆ ಶುಬ್ಮನ್ ಗಿಲ್ ಭಾನುವಾರ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಗೊತ್ತಾಗುತ್ತದೆ ಎಂದು ಮೂಲಗಳು ತಿಳಿಸಿವೆ. ( ಪಿಟಿಐ)
ಭಾನುವಾರ ಚೈನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಬಹು ನಿರೀಕ್ಷಿತ ಮಹತ್ವದ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ 2023ರ ವಿಶ್ವಕಪ್ನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ.
ಇದನ್ನುಓದಿ: ವಿಶ್ವಕಪ್ ಅಖಾಡದಲ್ಲಿರುವ ತಂಡಗಳ ಹಿರಿಯ, ಕಿರಿಯ ಆಟಗಾರರು ಇವರು..