ನವದೆಹಲಿ: 'ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೂರನೇ ಕ್ರಿಕೆಟಿಗ, ವಿಶ್ವಕಪ್ನಲ್ಲಿ ಅತಿಹೆಚ್ಚು ಶತಕ, ವಿಶ್ವಕಪ್ನಲ್ಲಿ ವೇಗದ 6ನೇ ಶತಕ, ಆರಂಭಿಕನಾಗಿ ಅತಿಹೆಚ್ಚು ಹಂಡ್ರೆಡ್ ಬಾರಿಸಿದ ವಿಶ್ವದ 2ನೇ ಆಟಗಾರ'..! ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಅಫ್ಘನ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಸಿದ ಒಂದು ಶತಕ ಇಷ್ಟೆಲ್ಲಾ ದಾಖಲೆಗಳನ್ನು ಬರೆದಿದೆ.
-
Topping The Charts! 🔝
— BCCI (@BCCI) October 11, 2023 " class="align-text-top noRightClick twitterSection" data="
Most Hundreds (7️⃣) in ODI World Cups 🤝 Rohit Sharma
Take a bow! 🙌 #CWC23 | #TeamIndia | #INDvAFG | #MeninBlue pic.twitter.com/VlkIlXCwvA
">Topping The Charts! 🔝
— BCCI (@BCCI) October 11, 2023
Most Hundreds (7️⃣) in ODI World Cups 🤝 Rohit Sharma
Take a bow! 🙌 #CWC23 | #TeamIndia | #INDvAFG | #MeninBlue pic.twitter.com/VlkIlXCwvATopping The Charts! 🔝
— BCCI (@BCCI) October 11, 2023
Most Hundreds (7️⃣) in ODI World Cups 🤝 Rohit Sharma
Take a bow! 🙌 #CWC23 | #TeamIndia | #INDvAFG | #MeninBlue pic.twitter.com/VlkIlXCwvA
ಅಫ್ಘನ್ನರ ವಿರುದ್ಧ ವೀರಾವೇಷದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 63 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಇದು ವಿಶ್ವಕಪ್ನಲ್ಲಿ ರೋಹಿತ್ ದಾಖಲಿಸಿದ 7ನೇ ಶತಕ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (6 ಶತಕ) ಹೆಸರಿನಲ್ಲಿದ್ದ ದಾಖಲೆ ಮುರಿದರು.
ಏಕದಿನದಲ್ಲಿ ಮೂರನೇ ಅತ್ಯಧಿಕ ಶತಕ: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರಲ್ಲಿ ರೋಹಿತ್ ಮೂರನೇ ಸ್ಥಾನ ಪಡೆದರು. 31 ಹಂಡ್ರೆಡ್ ಸಿಡಿಸಿರುವ ಹಿಟ್ಮ್ಯಾನ್, ಆಸ್ಟ್ರೇಲಿಯಾದ ದಂತಕಥೆ ರಿಕ್ಕಿ ಪಾಂಟಿಂಗ್ ಶತಕಗಳನ್ನು ಮೀರಿದರು. ಪಾಂಟಿಂಗ್ 30 ಶತಕ ಬಾರಿಸಿದ್ದರು. ರೋಹಿತ್ಗೂ ಮುನ್ನ ಸಚಿನ್ ತೆಂಡೂಲ್ಕರ್ 49, ವಿರಾಟ್ ಕೊಹ್ಲಿ 47 ಶತಕ ಬಾರಿಸಿದ್ದಾರೆ.
-
Milestones in plenty for Captain Rohit Sharma 🫡
— BCCI (@BCCI) October 11, 2023 " class="align-text-top noRightClick twitterSection" data="
👉Most sixes in international cricket 🙌
👉Most sixes in ODI World Cups for India 💥#CWC23 | #TeamIndia | #INDvAFG | #MeninBlue pic.twitter.com/FEuJI0yTsW
">Milestones in plenty for Captain Rohit Sharma 🫡
— BCCI (@BCCI) October 11, 2023
👉Most sixes in international cricket 🙌
👉Most sixes in ODI World Cups for India 💥#CWC23 | #TeamIndia | #INDvAFG | #MeninBlue pic.twitter.com/FEuJI0yTsWMilestones in plenty for Captain Rohit Sharma 🫡
— BCCI (@BCCI) October 11, 2023
👉Most sixes in international cricket 🙌
👉Most sixes in ODI World Cups for India 💥#CWC23 | #TeamIndia | #INDvAFG | #MeninBlue pic.twitter.com/FEuJI0yTsW
ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್: ವಿಶ್ವಕಪ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮಾ ಮೂರನೇ ಸ್ಥಾನ ಪಡೆದರು. ಸಚಿನ್ 2,278 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 1115, ರೋಹಿತ್ ಶರ್ಮಾ 1009 ರನ್ ಗಳಿಸಿದರು. ಇದಾದ ಬಳಿಕ ಸೌರವ್ ಗಂಗೂಲಿ 1006, ರಾಹುಲ್ ದ್ರಾವಿಡ್ 860 ರನ್ ಮಾಡಿದ್ದಾರೆ.
ಕಡಿಮೆ ಇನ್ನಿಂಗ್ಸ್‌ನಲ್ಲಿ ಸಾವಿರ ರನ್: ವಿಶ್ವಕಪ್ ಇತಿಹಾಸದಲ್ಲಿ ಕಡಿಮೆ ಇನ್ನಿಂಗ್ಸ್‌ನಲ್ಲಿ 1 ಸಾವಿರ ರನ್ ಪೂರೈಸಿದವರಲ್ಲಿ ರೋಹಿತ್ ಜಂಟಿ ಅಗ್ರ ಸ್ಥಾನ ಪಡೆದರು. 19 ಇನಿಂಗ್ಸ್ನಲ್ಲಿ ಶರ್ಮಾ ಸಾವಿರ ರನ್ ಪೂರೈಸಿದರು. ಇದಕ್ಕೂ ಮೊದಲು ಆಸೀಸ್ನ ಡೇವಿಡ್ ವಾರ್ನರ್ ಇಷ್ಟೇ ಇನ್ನಿಂಗ್ಸ್‌ನಲ್ಲಿ ಸಾವಿರ ರನ್ ಕಲೆ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್, ಎಬಿ ಡಿವಿಲಿಯರ್ಸ್ 20 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಆರಂಭಿಕನಾಗಿ ಎರಡನೇ ಅತಿ ಹೆಚ್ಚು ಶತಕ: ಏಕದಿನದಲ್ಲಿ ಆರಂಭಿಕ ಆಟಗಾರರ ಪೈಕಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆಗೂ ರೋಹಿತ್ ಪಾತ್ರರಾದರು. ಈವರೆಗೂ 29 ಮೂರಂಕಿ ಮೊತ್ತವನ್ನು ದಾಟಿದ್ದಾರೆ. ಸಚಿನ್ ತೆಂಡೂಲ್ಕರ್ 45 ಬಾರಿ ಶತಕ ಬಾರಿಸಿದ್ದಾರೆ. ಇದಲ್ಲದೇ, ಶ್ರೀಲಂಕಾದ ಸನತ್ ಜಯಸೂರ್ಯ 28 ಹಂಡ್ರೆಡ್ ಗಳಿಸಿದ್ದಾರೆ.
ಇದರ ಜೊತೆಗೆ ಬಿರುಸಿನ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಅತಿವೇಗದ ಶತಕ ಗಳಿಸಿದ 6ನೇ ಆಟಗಾರನಾಗಿಯೂ ಗುರುತಿಸಿಕೊಂಡರು. 63 ಎಸೆತಗಳಲ್ಲಿ ಮೂರಂಕಿ ದಾಟಿದರು. ದಕ್ಷಿಣ ಆಫ್ರಿಕಾದ ಐಡನ್ ಮಾರ್ಕರಮ್ ಕೇವಲ 49 ಎಸೆತಗಳಲ್ಲಿ ಲಂಕಾ ವಿರುದ್ಧ ಇದೇ ವಿಶ್ವಕಪ್ನಲ್ಲಿ ಶತಕ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದ್ದಾರೆ. ಭಾರತ ಪರವಾಗಿ ವೇಗದ ಶತಕದ ಸಾಲಿನಲ್ಲಿ 6 ನೇ ಸ್ಥಾನ ಪಡೆದರು.
ಇದನ್ನೂ ಓದಿ: 556 ಸಿಕ್ಸರ್ಸ್! ವಿಶ್ವ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಹೊಸ ಮೈಲುಗಲ್ಲು, ಕ್ರಿಸ್ಗೇಲ್ ವಿಶ್ವದಾಖಲೆ ದಾಖಲೆ ಪುಡಿ