ಬೆಂಗಳೂರು: ಕ್ರಿಕೆಟ್ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿರುವ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಅವರಿಗೆ ಬೆಂಗಳೂರಿನ ಮನೆಯಲ್ಲಿ ಅಜ್ಜಿ ದೃಷ್ಟಿ ತೆಗೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕರ್ನಾಟಕದ ಮೂಲದ ರಚಿನ್ ಪೋಷಕರು ನ್ಯೂಜಿಲೆಂಡ್ನಲ್ಲಿ ನೆಲೆಸಿದ್ದರೂ, ಅವರ ಅಜ್ಜ - ಅಜ್ಜಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಮನೆಗೆ ಭೇಟಿ ನೀಡಿದಾಗ ಅಜ್ಜ-ಅಜ್ಜಿ ರಚಿನ್ ಅವರ ದೃಷ್ಟಿ ತೆಗೆದಿದ್ದಾರೆ.
ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಕ್ರಿಕೆಟಿಗ ರಚಿನ್ ರವೀಂದ್ರ ಭಾರತದ ಪ್ರವಾಸದಲ್ಲಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯಕ್ಕಾಗಿ ಬೆಂಗಳೂರಿಗೆ ನ್ಯೂಜಿಲೆಂಡ್ ತಂಡ ಆಗಮಿಸಿತ್ತು. ರಚಿನ್ ರವೀಂದ್ರ ಅವರ ಅಜ್ಜ ಟಿಎ ಬಾಲಕೃಷ್ಣ ಅಡಿಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈ ವೇಳೆ, ತನ್ನ ಅಜ್ಜ-ಅಜ್ಜಿಯ ಮನೆಗೆ ಕಿವೀಸ್ ಆಲ್‌ರೌಂಡರ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಜ್ಜಿ ಪೂರ್ಣಿಮಾ ಅಡಿಗ ಅವರು ಮೊಮ್ಮಗ ರಚಿನ್ ರವೀಂದ್ರ ಅವರಿಗೆ ದೃಷ್ಟಿ ತೆಗೆದಿದ್ದಾರೆ.
-
जय श्री राम 🕉
— Rachin Ravindra (@RachinRavindra_) November 10, 2023 " class="align-text-top noRightClick twitterSection" data="
Blessed to have such an amazing family. Grandparents are angels whose memories and blessings stay with us forever. pic.twitter.com/haX8Y54Sfm
">जय श्री राम 🕉
— Rachin Ravindra (@RachinRavindra_) November 10, 2023
Blessed to have such an amazing family. Grandparents are angels whose memories and blessings stay with us forever. pic.twitter.com/haX8Y54Sfmजय श्री राम 🕉
— Rachin Ravindra (@RachinRavindra_) November 10, 2023
Blessed to have such an amazing family. Grandparents are angels whose memories and blessings stay with us forever. pic.twitter.com/haX8Y54Sfm
ಇದನ್ನೂ ಓದಿ: ಭಾರತದ ಎದುರು ರಚಿನ್ ವಿಶ್ವಕಪ್ ಫೈನಲ್ನಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ: ಅಜ್ಜ ಬಾಲಕೃಷ್ಣ
ಮನೆಯಲ್ಲಿ ರಚಿನ್ ರವೀಂದ್ರ ಸೋಫಾದಲ್ಲಿ ಕುಳಿತಿದ್ದು, ಅಜ್ಜಿ ಪೂರ್ಣಿಮಾ ನಿಂಬೆ, ಸಾಸಿವೆ ಮತ್ತು ಉಪ್ಪಿನಂತಹ ಪದಾರ್ಥಗಳ ಹಿಡಿದು ಮಂತ್ರಗಳ ಪಠಿಸುತ್ತಾ, ದೃಷ್ಟಿ ತೆಗೆಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದುಷ್ಟ ಹಾಗೂ ಕೆಟ್ಟ ಕಣ್ಣುಗಳು ಬಿದ್ದಿವೆ ಹಾಗೂ ಮುಂದೆ ಬೀಳಬಾರದು ಎಂಬ ಕಾರಣಕ್ಕೆ ಹಿರಿಯು ದೃಷ್ಟಿ ತೆಗೆಯುವ ವಾಡಿಕೆ ಇದೆ.
ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್ನ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ದೊಡ್ಡ ಅಭಿಮಾನಿಯಾಗಿದ್ದಾರೆ. ಹೀಗಾಗಿ ತಮ್ಮ ಮಗನಿಗೆ ರಾಹುಲ್ ಹೆಸರಿನ 'ರಾ' ಮತ್ತು ಸಚಿನ್ ಹೆಸರಿನ 'ಚಿನ್' ಸೇರಿ ರಚಿನ್ ಎಂದು ಹೆಸರಿಟ್ಟಿದ್ದಾರೆ.
ರಚಿನ್ ರವೀಂದ್ರ ಪ್ರಸ್ತುತ ಕ್ರಿಕೆಟ್ ವಿಶ್ವಸಮರದಲ್ಲಿ ತಮ್ಮ ಬ್ಯಾಟಿಂಗ್ನಿಂದಲೇ ಮಿಂಚುತ್ತಿದ್ದಾರೆ. ಈ ಹಿಂದೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಲ್‌ರೌಂಡರ್, ಈಗ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 123 ರನ್ ಕಲೆ ಹಾಕುವ ಮೂಲಕ ರಚಿನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದರು.
ಇದೇ ಟೂರ್ನಿಯಲ್ಲಿ ಪಾಕಿಸ್ತಾನ, ಒಟ್ಟು ಇದುವರೆಗೆ 21 ಏಕದಿನ ಪಂದ್ಯಗಳಲ್ಲಿ 17 ಇನ್ನಿಂಗ್ಸ್‌ಗಳನ್ನು ಆಡಿರುವ ಅವರು, ಮೂರು ಶತಕಗಳು ಹಾಗೂ ಮೂರು ಅರ್ಧಶತಕಗಳೊಂದಿಗೆ 754 ರನ್ ಬಾರಿಸಿದ್ದಾರೆ. 123 ರನ್ ಅತ್ಯಧಿಕ ಸ್ಕೋರ್ ಆಗಿದ್ದು, 109.28 ಸ್ಟ್ರೈಕ್ ರೇಟ್ ಮತ್ತು 47.12ರ ಸರಾಸರಿ ಹೊಂದಿದ್ಧಾರೆ.
ಇದನ್ನೂ ಓದಿ: ಸಚಿನ್ ದಾಖಲೆ ಮೀರುತ್ತೇನೆಂದು ಕನಸಿನಲ್ಲೂ ಊಹಿಸಿರಲಿಲ್ಲ, ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ರಚಿನ್ ರವೀಂದ್ರ