ETV Bharat / sports

ಆಸ್ಟ್ರೇಲಿಯಾಗೆ ಆರು, ದಕ್ಷಿಣ ಆಫ್ರಿಕಾಗೆ ಮೊದಲ ಪ್ರಶಸ್ತಿ ಗುರಿ: ಯಾರಾಗ್ತಾರೆ ವಿಶ್ವ ಚಾಂಪಿಯನ್​? - ಆಸೀಸ್​ ಮಹಿಳಾ ತಂಡ

ಮಹಿಳಾ ಟಿ20 ವಿಶ್ವಕಪ್​ನಲ್ಲಿ ತವರು ತಂಡವಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಇಂದು ನಡೆಯುವ ಅಂತಿಮ ಪಂದ್ಯದಲ್ಲಿ ಆಸೀಸ್​ ಗೆದ್ದರೆ, 6ನೇ ಬಾರಿಗೆ ಚಾಂಪಿಯನ್​ ಆಗಲಿದೆ. ಆಫ್ರಿಕಾ ವಿಜಯ ಸಾಧಿಸಿದಲ್ಲಿ ಹೊಸ ಚಾಂಪಿಯನ್ ಉದಯವಾಗಲಿದೆ.

womens-t20-world-cup
ಮಹಿಳಾ ಟಿ20 ವಿಶ್ವಕಪ್
author img

By

Published : Feb 26, 2023, 2:42 PM IST

ಕೇಪ್​ಟೌನ್​(ದಕ್ಷಿಣ ಆಫ್ರಿಕಾ): ಮಹಿಳಾ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದೆ. ಇಂದು ಸಂಜೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಪ್ರಶಸ್ತಿಗಾಗಿ ಸೆಣಸಾಡಲಿದೆ. 5 ಬಾರಿಯ ವಿಶ್ವಚಾಂಪಿಯನ್​ ಆಸೀಸ್​ ಸವಾಲನ್ನು ಗೆದ್ದು ಆಫ್ರಿಕಾ ವನಿತೆಯರು ಇತಿಹಾಸ ರಚನೆ ಮಾಡುತ್ತಾರಾ? ಅಥವಾ 6ನೇ ಕಪ್​ ಎತ್ತಿ ಹಿಡಿದು ಆಸೀಸ್​ ನಾರಿಯರು ಶಕ್ತಿ ಪ್ರದರ್ಶನ ಮುಂದುವರಿಸುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

ಸವಾಲಾಗದ ಆಫ್ರಿಕಾ ಮಹಿಳೆಯರು: ಆಸೀಸ್​ ಮಹಿಳಾ ತಂಡ ಸದ್ಯದ ಮಟ್ಟಿಗೆ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಾರಣ ಈವರೆಗೂ ಆಫ್ರಿಕಾ ವಿರುದ್ಧ ಕಾಂಗರೂ ಪಡೆ ಸೋಲೇ ಕಂಡಿಲ್ಲ. ಆಡಿರುವ 6 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಅದರಲ್ಲೂ ಈ ಎಲ್ಲ ಗೆಲುವು ವಿಶ್ವಕಪ್​ನಲ್ಲಿಯೇ ದಾಖಲಾಗಿವೆ ಎಂಬುದು ವಿಶೇಷ. ಹೀಗಾಗಿ ಆಫ್ರಿಕಾ ವನಿತೆಯರನ್ನು ಮಟ್ಟಹಾಕಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಭರವಸೆ ಆಸೀಸ್​ ತಂಡದಲ್ಲಿದೆ.

ಸತತ ಏಳನೇ ಬಾರಿ ಟಿ20 ವಿಶ್ವಕಪ್ ಫೈನಲ್ ಆಡುತ್ತಿರುವ ಆಸ್ಟ್ರೇಲಿಯಾ ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಕೊನೆಯ ಎಸೆತದವರೆಗೂ ಹೋರಾಟ ನಡೆಸುವ ತಂಡವನ್ನು ಉಳಿದ ತಂಡಗಳು ಹಿಮ್ಮೆಟ್ಟುವುದು ಕಷ್ಟವೇ ಸರಿ.

ಆಕ್ರಮಣಕಾರಿ ಆಟದಿಂದಲೇ ಎದುರಾಳಿಗಳ ಮೇಲೆ ಸವಾರಿ ಮಾಡುವ ಕಾಂಗರೂ ಪಡೆ ಇಂದಿನ ಫೈನಲ್ ಪಂದ್ಯದಲ್ಲೂ ಆಫ್ರಿಕಾ ತಂಡವನ್ನು ಸೋಲಿಸುವ ಗುರಿಯೊಂದಿಗೆ ಅಭ್ಯಾಸ ನಡೆಸಿದೆ. ನಾಯಕಿ ಮೆಗ್ ಲ್ಯಾನಿಂಗ್ ಆಸ್ಟ್ರೇಲಿಯಾವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರೆ, ಅಲಿಸಾ ಹೀಲಿ, ಬೆತ್ ಮೂನಿ ಮತ್ತು ಆಶ್ಲೇ ಗಾರ್ಡ್ನರ್ ಬ್ಯಾಟಿಂಗ್​ ಬಲ ನೀಡಿದ್ದಾರೆ. ಆಲ್​ರೌಂಡರ್​ ಗಾರ್ಡ್ನರ್ ಚೆಂಡಿನೊಂದಿಗೂ ಅಂಗಳದಲ್ಲಿ ಕಮಾಲ್​ ಮಾಡಿದ್ದಾರೆ. ಅವರ ಜೊತೆಗೆ ಡಾರ್ಸಿ ಬ್ರೌನ್ ಮತ್ತು ಮೇಗನ್ ಶಟ್ ಬೌಲಿಂಗ್‌ನಲ್ಲಿ ನಿರ್ಣಾಯಕರಾಗಿದ್ದಾರೆ.

ಇತಿಹಾಸ ಬರೆಯುತ್ತಾ ತವರು ತಂಡ : ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಫೈನಲ್​ ತಲುಪಿರುವ ತವರು ತಂಡವಾದ ದಕ್ಷಿಣ ಆಫ್ರಿಕಾ ಮಹಿಳೆಯರು ಆಸೀಸ್​ ಸವಾಲು ಗೆದ್ದು ಇತಿಹಾಸ ರಚನೆ ಮಾಡುವ ತವಕದಲ್ಲಿದ್ದಾರೆ. ಹಾಗೊಂದು ವೇಳೆ ಪವಾಡ ನಡೆದದ್ದೇ ಆದಲ್ಲಿ ದಕ್ಷಿಣ ಆಫ್ರಿಕಾ ಸಾಧನೆ ವಿಶ್ವಮಾನ್ಯವಾಗಲಿದೆ. ಇಂಗ್ಲೆಂಡ್ ವಿರುದ್ಧ ಸೆಮೀಸ್ ಗೆದ್ದಿರುವ ಆಫ್ರಿಕಾ ವನಿತೆಯರು ಇದೇ ಉತ್ಸಾಹದಲ್ಲಿ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬೇಕಾಗಿದೆ.

ಕಳೆದೊಂದು ವರ್ಷದಿಂದ ದಕ್ಷಿಣ ಆಫ್ರಿಕಾ ನಾರಿಯರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಲಯದಲ್ಲಿದ್ದಾರೆ. ಇದರ ಪ್ರತಿಬಿಂಬವಾಗಿ ವಿಶ್ವಕಪ್​ನ ಫೈನಲ್​ ಪ್ರವೇಶಿಸಿದ್ದಾರೆ. ಇದಕ್ಕೆ ಅಂತಿಮ ರೂಪ ನೀಡಬೇಕಾದರೆ ತಂಡ ಬಲಿಷ್ಠ ಆಸೀಸ್​ ಬಳಗವನ್ನು ಗೆಲ್ಲಬೇಕಿದೆ.

ಆಫ್ರಿಕಾ ತಂಡ ಲಾರಾ ವೊಲ್ವಾರ್ಟ್ ಮತ್ತು ತಜ್ಮಿನ್ ಬ್ರಿಟ್ಸ್ ಅವರಂತಹ ಅತ್ಯುತ್ತಮ ಆರಂಭಿಕರನ್ನು ಹೊಂದಿದೆ. ಈ ಸೂಪರ್ ಜೋಡಿ ಉತ್ತಮ ಫಾರ್ಮ್‌ನಲ್ಲಿದ್ದು, ಸೆಮಿಸ್‌ನಲ್ಲಿ ಅರ್ಧಶತಕ ಬಾರಿಸಿರುವುದು ತಂಡದ ಪ್ಲಸ್​ ಪಾಯಿಂಟ್​ ಆಗಿದೆ. ಆಲ್​ರೌಂಡರ್ ಮರಿಜನ್ ಕಪ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸೆಮೀಸ್​ನಲ್ಲಿ ಸಿಡಿದೆದ್ದ ವೇಗಿಗಳಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಅಯಾಬೊಂಗಾ ಖಾಕಾ ಕೂಡ ಫೈನಲ್​ನಲ್ಲಿ ಕರಾಮತ್ತಿಗೆ ರೆಡಿಯಾಗಿದ್ದಾರೆ.

ತಂಡಗಳು: ಆಸ್ಟ್ರೇಲಿಯಾ ಮಹಿಳೆಯರು: ಅಲಿಸ್ಸಾ ಹೀಲಿ, ಮೆಗ್ ಲ್ಯಾನಿಂಗ್ (ನಾಯಕಿ), ಬೆತ್ ಮೂನಿ, ಆಶ್ಲೀಗ್ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಎಲ್ಲಿಸ್ ಪೆರ್ರಿ, ತಾಲಿಯಾ ಮೆಕ್‌ಗ್ರಾತ್, ಜಾರ್ಜಿಯಾ ವೇರ್‌ಹ್ಯಾಮ್, ಜೆಸ್ ಜೊನಾಸೆನ್, ಮೇಗನ್ ಶುಟ್, ಡಾರ್ಸಿ ಬ್ರೌನ್, ಅನ್ನಾಬೆಲ್ ಸದರ್‌ಲ್ಯಾಂಡ್, ಅಲಾನಾ ಕಿಂಗ್, ಕಿಮ್ ಗಾರ್ತ್ ಗ್ರಹಾಂ.

ದಕ್ಷಿಣ ಆಫ್ರಿಕಾ ನಾರಿಯರು: ಸುನೆ ಲೂಸ್ (ನಾಯಕಿ), ಸಿನಾಲೊ ಜಾಫ್ತಾ, ಲಾರಾ ವೊಲ್ವಾರ್ಡ್ಟ್, ತಜ್ಮಿನ್ ಬ್ರಿಟ್ಸ್, ಮರಿಜಾನ್ನೆ ಕಪ್, ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಅನ್ನೆಕೆ ಬಾಷ್, ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಕಾ, ನಾನ್‌ಕುಲುಲೆಕೊ ಮ್ಲಾಬಾ, ಮಸಾಬಟಾ ಕ್ಲಾಸ್, ಲಾರಾ ಗುಡಾಲ್, ಡೆಲ್ಮಿ ಟಿ ಡೆರ್ಕ್ಸೆನ್.

ಪಂದ್ಯದ ಸಮಯ- ಸಂಜೆ 6:30 ಕ್ಕೆ, ಕೇಪ್​ಟೌನ್​ನ ನ್ಯೂಲ್ಯಾಂಡ್ಸ್​ ಮೈದಾನ.

ಓದಿ: ಅನಿಲ್​ ಕುಂಬ್ಳೆ ದಾಖಲೆ ಮೇಲೆ ಅಶ್ವಿನ್​, ನಾಥನ್​ ಲಿಯಾನ್​ ಕಣ್ಣು: ಏನದು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.