ETV Bharat / sports

WPLನಲ್ಲಿಂದು..: ಕ್ವಾಲಿಫೈಗಾಗಿ ಯುಪಿ ಹೋರಾಟ​​; ನೇರ ಫೈನಲ್​ ಪ್ರವೇಶಕ್ಕೆ ಮುಂಬೈ ಪ್ರಯತ್ನ - ETV Bharath Kannada news

ಮಹಿಳಾ​ ಪ್ರೀಮಿಯರ್ ​ಲೀಗ್ ಕ್ರಿಕೆಟ್‌ನ ಕೊನೆಯ ನಾಲ್ಕು ಪಂದ್ಯಗಳು ಬಾಕಿ ಇದ್ದು, ಈಗಾಗಲೇ ಎರಡು ತಂಡಗಳು ಪ್ಲೇ-ಆಫ್​ ಪ್ರವೇಶ ಪಡೆದುಕೊಂಡಿವೆ. ಇದೀಗ ಪಾಯಿಂಟ್‌ ಪಟ್ಟಿಯ ಮೂರನೇ ಸ್ಥಾನಕ್ಕೆ ಮೂರು ತಂಡಗಳ ನಡುವೆ ಪೈಪೋಟಿ ಇದೆ. ​

Womens Premier League today match
ನೇರ ಫೈನಲ್​ ಪ್ರವೇಶಕ್ಕೆ ಮುಂಬೈ ಪ್ರಯತ್ನ
author img

By

Published : Mar 20, 2023, 1:15 PM IST

ಮುಂಬೈ: ವಿಮೆನ್ಸ್​​ ಪ್ರೀಮಿಯರ್​ ಲೀಗ್​ನ ಚೊಚ್ಚಲ ಆವೃತ್ತಿಯಲ್ಲಿ ಈಗಾಗಲೇ ಎರಡು ತಂಡಗಳಿಗೆ ಪ್ಲೇ-ಆಫ್​ ಪ್ರವೇಶ ಖಾತ್ರಿಯಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಮತ್ತು ಗುಜರಾತ್ ಜೈಂಟ್ಸ್​ ನಡುವೆ ಪೈಪೋಟಿ ನಡೆಯಲಿದ್ದು, ವಾರಿಯರ್ಸ್​ ಗೆದ್ದರೆ ಪ್ಲೇ-ಆಫ್​ ಪ್ರವೇಶ ಪಡೆಯಲಿದೆ.

ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವು ದಾಖಲಿಸಿದ ಹುಮ್ಮಸ್ಸಿನಲ್ಲಿ ಯುಪಿ ಇದ್ದರೆ ಬೆಂಗಳೂರಿನೆದುರು ಸೋಲಿನ ಕಹಿಯಲ್ಲಿ ಸ್ನೇಹಾ ರಾಣಾ ಪಡೆ ಇದೆ. ಇಂದಿನ ಗೆಲುವು ಯುಪಿ ವಾರಿಯರ್ಸ್​ಗೆ ಪ್ಲೇ-ಆಫ್​ ಪ್ರವೇಶ ದೊರಕಿಸಿಕೊಡಲಿದೆ. ಇಂದು ಗುಜರಾತ್​ ಯುಪಿಯನ್ನು ಮಣಿಸಿದರೆ, ಗುಜರಾತ್​ ಹಾಗೂ ಬೆಂಗಳೂರಿನ ಪ್ಲೇ-ಆಫ್ ಕನಸು ಜೀವಂತವಾಗಿರಲಿದೆ. ನಾಳೆ ನಡೆಯುವ ಮುಂಬೈ- ಬೆಂಗಳೂರು ಪಂದ್ಯದಲ್ಲಿ ಯಾರು ಕ್ವಾಲಿಫೈ ಆಗುತ್ತಾರೆ ಎಂಬುದು ಫೈನಲ್​ ಆಗಲಿದೆ. ಇಂದು ಯುಪಿ ಗೆದ್ದಲ್ಲಿ ಆರ್​ಸಿಬಿ ಮತ್ತು ಜಿಜಿಯ ಪ್ರಯಾಣ ಲೀಗ್​ನಲ್ಲೇ ಅಂತ್ಯವಾಗುತ್ತದೆ.

ಸಂಭಾವ್ಯ ತಂಡಗಳು: ಗುಜರಾತ್ ಜೈಂಟ್ಸ್​: ಲಾರಾ ವೊಲ್ವಾರ್ಡ್ಟ್, ಸೋಫಿಯಾ ಡಂಕ್ಲೆ, ಎಸ್ ಮೇಘನಾ, ಆಶ್ಲೇ ಗಾರ್ಡನರ್, ಡಿ ಹೇಮಲತಾ, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಅಶ್ವಿನಿ ಕುಮಾರಿ, ಸುಷ್ಮಾ ವರ್ಮಾ (ವಿಕೆಟ್​ ಕೀಪರ್​), ಕಿಮ್ ಗಾರ್ತ್, ತನುಜಾ ಕನ್ವರ್

ಯುಪಿ ವಾರಿಯರ್ಸ್​: ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ಕೀಪರ್), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶ್ವಿ ಚೋಪ್ರಾ, ಅಂಜಲಿ ಸಾರ್ವಾನಿ, ಅಂಜಲಿ ಸಾರ್ವಾನಿ.

ನೇರ ಫೈನಲ್​ಗೆ ಪ್ರವೇಶ ಪಡೆಯುತ್ತಾ ಎಂಐ?: ಇಂದಿನ ಎರಡನೇ ಪಂದ್ಯ ಅಂಕಪಟ್ಟಿಯ ಅಗ್ರಸ್ಥಾನದದಲ್ಲಿರುವ ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ ನಡೆಯಲಿದೆ. ಉಭಯ ತಂಡಗಳು ಪ್ಲೇ-ಆಫ್​ ಅರ್ಹತೆ ಪಡೆದುಕೊಂಡಿದೆ. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಗೆಲುವು ದಾಖಲಿಸಿದರೆ ನೇರ ಫೈನಲ್​ ಪ್ರವೇಶ ಪಡೆಯುತ್ತದೆ.

ಕಳೆದ ಪಂದ್ಯದಲ್ಲಿ ಸೋಲುಂಡ ಮುಂಬೈ: ಮುಂಬೈ ಇಂಡಿಯನ್ಸ್​ ತಂಡ 5 ಪಂದ್ಯದಲ್ಲಿ ಸೋಲನ್ನೇ ಕಂಡಿರಲಿಲ್ಲ. 5 ಪಂದ್ಯ ಗೆದ್ದು 10 ಅಂಕದಿಂದ ಪ್ಲೇ-ಆಫ್​ಗೆ ಕ್ವಾಲಿಫೈ ಆಗಿತ್ತು. 6ನೇ ಪಂದ್ಯ ಗೆದ್ದು ನೇರ ಫೈನಲ್​ ಪ್ರವೇಶಿಸುವ ಕೌರ್​ ಪಡೆಯ ಕನಸಿಗೆ ಮಾರ್ಚ್​ 18 ರಂದು ಯುಪಿ ವಾರಿಯರ್ಸ್​ ಮುಳುವಾಯಿತು. ಮುಂಬೈಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಸುಲಭ ಜಯ ಸಾಧಿಸಿತು. ಹಾಗೆಯೇ ಪ್ಲೇ-ಆಫ್​ ಆಯ್ಕೆಗೆ ಹಾದಿ ಸುಗಮ ಮಾಡಿಕೊಂಡಿತು.

ಡೆಲ್ಲಿಗೂ ಗುಜರಾತ್​ ವಿರುದ್ಧ ಸೋಲು: ಡೆಲ್ಲಿಯೂ ಕೊನೆಯ ಪಂದ್ಯದಲ್ಲಿ ಗುಜರಾತ್​ ಲಯನ್ಸ್​ ವಿರುದ್ಧ ಸೋಲನುಭವಿಸಿತ್ತು. ಆದರೂ ಪ್ಲೇ-ಆಫ್​ಗೆ ಪ್ರವೇಶ ಪಡೆದುಕೊಂಡಿದೆ. ಇಂದು ಎರಡು ಸೋತ ತಂಡಗಳು ಮುಖಾಮುಖಿಯಾಗುತ್ತಿವೆ. ಡೆಲ್ಲಿ ಈ ಪಂದ್ಯವನ್ನೂ ಸೇರಿಸಿ ಎರಡು ಮ್ಯಾಚ್​ನಲ್ಲಿ ಹೆಚ್ಚು ರನ್​ ರೇಟ್​ನಿಂದ ಗೆಲುವು ದಾಖಲಿಸಿದರೆ ನೇರ ಫೈನಲ್​ ಪ್ರವೇಶ ಪಡೆಯುವ ಅವಕಾಶ ಹೊಂದಿದೆ.

ಸಂಭಾವ್ಯ ತಂಡಗಳು: ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ನೇಟ್ ಸ್ಕೈವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್ / ಕ್ಲೋಯ್ ಟ್ರಿಟಾನ್, ಅಮನ್‌ಜೋತ್ ಕೌರ್, ಹುಮೈರಾ ಖಾಜಿ, ಧಾರಾ ಗುರ್ಜರ್, ಕಲಿತ, ಜಿನ್ತಿಮಾನಿ, ಸೈಕಾ ಇಶಾಕ್

ಡೆಲ್ಲಿ ಕ್ಯಾಪಿಟಲ್ಸ್‌: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಮರಿಜನ್ ಕಪ್, ಎಲ್ಲಿಸ್ ಕ್ಯಾಪ್ಸೆ / ಲಾರಾ ಹ್ಯಾರಿಸ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ / ಜಸಿಯಾ ಅಖ್ತರ್, ತಾನ್ಯಾ ಭಾಟಿಯಾ (ವಿಕೆಟ್​ ಕೀಪರ್​), ರಾಧಾ ಯಾದವ್, ಪಾಂಡೆ, ಪೂನಂ ಯಾದವ್/ತಾರಾ ನಾರ್ರಿಸ್.

ಇದನ್ನೂ ಓದಿ: ಧೋನಿಗೆ ಕೊನೆಯ ಐಪಿಎಲ್​ ಅಲ್ಲ, ಇನ್ನೂ ಮೂರ್ನಾಲ್ಕು ವರ್ಷ ಆಡ್ತಾರೆ: ಶೇನ್​ ವ್ಯಾಟ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.