ETV Bharat / sports

ಮೊದಲ ಜಯ ದಾಖಲಿಸಿದ ಗುಜರಾತ್​ ಜೈಂಟ್ಸ್ : ಆರ್​ಸಿಬಿಗೆ ಸತತ ಮೂರನೇ ಸೋಲು - ರಾಯಲ್ ಚಾಲೆಂಜರ್ಸ್ ಬೆಂಗಳೂರು

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತಂಡ ಸತತ ಮೂರನೇ ಸೋಲು ಕಂಡಿದೆ. ಗುಜರಾತ್​ ಜೈಂಟ್ಸ್ ತಂಡ ಮೊದಲ ಜಯ ದಾಖಲಿಸಿದೆ.

Etv Bharat
Etv Bharat
author img

By

Published : Mar 8, 2023, 11:12 PM IST

ಮುಂಬೈ (ಮಹಾರಾಷ್ಟ್ರ): ವುಮೆನ್ಸ್ ಪ್ರೀಮಿಯರ್ ಲೀಗ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಂದು ಸೋಲು ಕಂಡಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಸ್ಮೃತಿ ಮಂಧಾನ ಪಡೆ 11 ರನ್​ಗಳಿಂದ ಸೋಲು ಅನುಭವಿಸಿದೆ. ಟೂರ್ನಿಯಲ್ಲಿ ಗುಜರಾತ್​ ತಂಡ ಮೊದಲ ಗೆಲುವು ದಾಖಲಿಸಿದೆ.

ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಸಬ್ಬಿನೇನಿ ಮೇಘನಾ ಮತ್ತು ಸೋಫಿಯಾ ಡಂಕ್ಲಿ ಉತ್ತಮ ಆರಂಭ ಒದಗಿಸಲು ಸಾಧ್ಯವಾಗಲಿಲ್ಲ. ತಂಡದ ಮೊತ್ತ 21 ರನ್​ ಆಗುವಷ್ಟರಲ್ಲಿ ಮೇಘನಾ (8) ವಿಕೆಟ್​ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಹರ್ಲೀನ್ ಡಿಯೋಲ್ ಹಾಗೂ ಸೋಫಿಯಾ ಡಂಕ್ಲಿ ಅದ್ಭುತವಾಗಿ ಬ್ಯಾಟ್​ ಬೀಸಿದರು. ಇಬ್ಬರು ಕೂಡ ತಮ್ಮ ಸ್ಫೋಟಕ ಆಟದ ಮೂಲಕ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆದ ರಶ್ಮಿಕಾ - ಗಿಲ್​ ಸುದ್ದಿ..! ಕಾರಣ ಇಲ್ಲಿದೆ

ಕೇವಲ 18 ಎಸೆತಗಳಲ್ಲಿ ತಮ್ಮ ಡಂಕ್ಲಿ ಅರ್ಧಶತಕ ಪೂರೈಸಿದರು. ಒಟ್ಟಾರೆ 28 ಎಸೆತಗಳಲ್ಲಿ ಮೂರು ಸಿಕ್ಸರ್​ ಮತ್ತು 11 ಬೌಂಡರಿಗಳ ಸಮೇತವಾಗಿ 65 ಬಾರಿಸಿ ಔಟಾದರು. ನಂತರ ಬಂದ ಆಶ್ಲೇ ಗಾರ್ಡ್ನರ್ (19), ಹೇಮಲತಾ (16) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (14) ರನ್​ಗಳನ್ನು ಮಾತ್ರ ಕಲೆ ಹಾಕಿದರು. ವಿಕೆಟ್​ ಬೀಳುತ್ತಿದ್ದರೂ ಮತ್ತೊಂದೆಡೆ, ಹರ್ಲೀನ್ ಡಿಯೋಲ್ ತಮ್ಮ ಬಿರುಸಿನ ಆಟ ಪ್ರದರ್ಶಿಸಿದರು. 45 ಬಾಲ್​ಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಮೇತ 67 ರನ್‌ ಸಿಡಿಸಿ ಬೌಲ್ಡ್​ ಆದರು. ನಾಯಕಿ ಸ್ನೇಹಾ ರಾಣಾ ಕೇವಲ 2 ರನ್ ಸಿಡಿಸಿ ರನೌಟ್‌ಗೆ ಬಲೆಗೆ ಸಿಲುಕಿದರು. ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ ಗುಜರಾತ್ ತಂಡ ಏಳು ವಿಕೆಟ್​ ನಷ್ಟಕ್ಕೆ 201 ರನ್​ಗಳನ್ನು ಪೇರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಹೀದರ್ ನೈಟ್, ಶ್ರೇಯಾಂಕಾ ಪಾಟೀಲ್ ತಲಾ ಎರಡು ವಿಕೆಟ್​ ಮತ್ತು ಮೇಗನ್ ಶುಟ್, ರೇಣುಕಾ ಸಿಂಗ್​ ತಲಾ ಒಂದು ವಿಕೆಟ್​ ಪಡೆದರು.

202 ರನ್​ಗಳ ಸವಾಲಿನ ಗುರಿ ಬೆನ್ನಿಟ್ಟ ಆರ್​ಸಿಬಿ ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಉತ್ತಮ ಆರಂಭವನ್ನೇ ಒದಗಿಸಿದರು. ಆದರೆ, ತಂಡದ 51 ರನ್​ಗಳು ಆಗಿದ್ದಾಗ ಸ್ಮೃತಿ ಮಂಧಾನ ಆಶ್ಲೀ ಗಾರ್ಡ್ನರ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. 14 ಎಸೆತಗಳಲ್ಲಿ ಮೂರು ಬೌಂಡರಿಗಳ ಸಮೇತವಾಗಿ 18 ರನ್​ಗಳನ್ನು ಮಂಧಾನ ಬಾರಿಸಿದರು. ಮತ್ತೊಂದೆಡೆ, ಆಶ್ಲೀ ಗಾರ್ಡ್ನರ್ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು. 45 ಎಸತೆಗಳಲ್ಲಿ ಎರಡು ಸಿಕ್ಸರ್​ ಮತ್ತು ಎಂಟು ಬೌಂಡರಿಗಳೊಂದಿಗೆ 66 ರನ್​ಗಳನ್ನು ಸಿಡಿಸಿದರು.

ನಂತರದಲ್ಲಿ ಎಲ್ಲಿಸ್ ಪೆರ್ರಿ 32 ರನ್​ ಮತ್ತು ರಿಚಾ ಘೋಷ್ 10 ರನ್​ ಮತ್ತು ಹೀದರ್ ನೈಟ್ 30 ರನ್​ (ಅಜೇಯ), ಕನಿಕಾ ಅಹುಜಾ 10 ಬಾರಿಸಿದರು. ಕೊನೆಗೆ 20 ಓವರ್​ಗಳಲ್ಲಿ ಆರ್​ಸಿಬಿ ತಂಡಕ್ಕೆ 190 ರನ್​ಗಳನ್ನು ಮಾತ್ರ ಬಾರಿಸಲು ಸಾಧ್ಯವಾಯಿತು. ಇದರಿಂದ 11 ರನ್​ಗಳಿಂದ ಆರ್​ಸಿಬಿ ಸೋಲು ಕಂಡಿತ್ತು.

ಇದನ್ನೂ ಓದಿ: ಐಸಿಸಿ ಟೆಸ್ಟ್​ ರ್‍ಯಾಂಕಿಂಗ್​: ಅಶ್ವಿನ್​ - ಜೇಮ್ಸ್ ಆಂಡರ್ಸನ್ ಅಗ್ರಸ್ಥಾನಕ್ಕಾಗಿ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.