ಬಹುನಿರೀಕ್ಷಿತ ವುಮೆನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಪ್ರಕ್ರಿಯೆಯು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಸೋಮವಾರ ನಡೆದಿದ್ದು, ದುಬಾರಿ ಮೊತ್ತಕ್ಕೆ ಸ್ಮೃತಿ ಮಂಧನಾ ಆರ್ಸಿಬಿ ಪಾಲಾಗಿದ್ದಾರೆ. ಮಹಿಳಾ ಐಪಿಎಲ್ನ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಭಾರತದ ಉಪನಾಯಕಿ, ತಾರಾ ಬ್ಯಾಟರ್ ಸ್ಮೃತಿ ಮಂದಾನ ಹೊರಹೊಮ್ಮಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 3.4 ಕೋಟಿ ರೂಪಾಯಿಗೆ, ಸ್ಮೃತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಪಾಲಾಗಿದ್ದಾರೆ.
ಹರಾಜಿನ ಅಂತಿಮ ಪಟ್ಟಿಯಲ್ಲಿ 448 ಆಟಗಾರ್ತಿಯರು ಸ್ಥಾನ ಪಡೆದಿದ್ದರು. ಭಾರತೀಯ 5 ತಂಡಗಳು 30 ವಿದೇಶಿಗರು ಸೇರಿ ಒಟ್ಟು 87 ಆಟಗಾರ್ತಿಯರನ್ನು ಖರೀದಿಸಿದೆ. ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ತಲಾ 18 ಆಟಗಾರ್ತಿಯರನ್ನು ಖರೀಸಿದರೆ, ಮುಂಬೈ ಇಂಡಿಯನ್ಸ್ 17, ಯುಪಿ ವಾರಿಯರ್ಸ್ 16 ಆಟಗಾರ್ತಿಯರನ್ನು ಖರೀದಿಸಿದೆ. ಹರ್ಮನ್ ಪ್ರೀತ್ ಕೌರ್ ಮುಂಬೈಗೆ ಮತ್ತು ಜೆಮಿಮಾ ರೋಡ್ರಿಗ್ಸ್ ಡೆಲ್ಲಿ ತಂಡವನ್ನು ಸೇರಿದ್ದಾರೆ. ಅಲ್ಲದೇ ದಿಗ್ಗಜ ಅಂತಾರಾಷ್ಟ್ರೀಯ ಆಟಗಾರ್ತಿಯರನ್ನು ಆರ್ಸಿಬಿ ಖರೀದಿಸಿದೆ. ಎಲ್ಲಾ ತಂಡದ ಆಟಗಾರ್ತಿಯರ ಪಟ್ಟಿ ಈ ಕೆಳಗಿನಂತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ): ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೆನ್ ವ್ಯಾನ್ ನಿಕೆರ್ಕ್, ಪ್ರೀತಿ ಕೆ ಬೊಹ್ಸೆಮ್, ಕೋಮಲ್ ಜಂಜಾದ್, ಮೇಗನ್ ಶುಟ್, ಸಹನಾ ಪವಾರ್ ಸೇರಿ 18 ಹೆಸರಾಂತ ಆಟಗಾರ್ತಿಯರಿದ್ದಾರೆ.
ಇದನ್ನೂ ಓದಿ: ಇಂದು ಮುಂಬೈನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಶೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಝೀ, ಸೋನಂಕಾ ಬಾಲಾ, ಪ್ರಿಯಾಂಕಾ ಬಾಲಾ ಜಿಂತಾಮಣಿ ಕಲಿತಾ, ನೀಲಂ ಬಿಷ್ಟ್ ಇದ್ದಾರೆ.
ಗುಜರಾತ್ ಜೈಂಟ್ಸ್: ಇನ್ನು ಗುಜರಾತ್ ತಂಡದಲ್ಲಿ ಆಶ್ಲೇ ಗಾರ್ಡ್ನರ್, ಬೆತ್ ಮೂನಿ, ಸೋಫಿಯಾ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ ರಾಣಾ, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನಸಿ ಜೋಶಿ, ಡಿ ಹೇಮಲತಾ, ತನುಜಾ ಕನ್ವರ್, ಮೋನಿಕಾ ಪಟೇಲ್, ಸುಷ್ಮಾ ವರ್ಮಾ, ಅಶ್ವಿನಿ ಕುಮಾರಿ ಗಾಲಾ, , ಪರುನಿಕಾ ಸಿಸೋಡಿಯಾ, ಶಬ್ನಮ್ ಇದ್ದಾರೆ.
ಯುಪಿ ವಾರಿಯರ್ಸ್: ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಶಬ್ನಮ್ ಇಸ್ಮಾಯಿಲ್, ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಪಾರ್ಶ್ವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಎಸ್ ಯಶಶ್ರೀ, ಕಿರಣ್ ನವಗಿರೆ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಲಾರೆನ್ ಬೆಲ್, ಲಕ್ಷೀ ಯಾದವ್, ಸಿಮ್ರಾನ್ ಶೇಕ್ ಯುಪಿ ವಾರಿಯರ್ಸ್ ತಂಡವನ್ನು ಸೇರಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ತಂಡದಲ್ಲಿ ಜೆಮಿಮಾ ರಾಡ್ರಿಗಸ್, ಮೆಗ್ ಲ್ಯಾನಿಂಗ್, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ಮರಿಜಾನ್ನೆ ಕಪ್, ಟೈಟಾಸ್ ಸಾಧು, ಎಲ್ಲಿಸ್ ಕ್ಯಾಪ್ಸಿ, ತಾರಾ ನಾರ್ರಿಸ್, ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ತಾನ್ಯಾ ಭಾಟಿಯಾ, ಜೆಸ್ ಜೊನಾಸೆನ್, ಸ್ನೇಹಾ ದೀಪ್ತಿ, ಪೂನಮ್ ಯಾದವ್, ಅರುಂಧತಿ ರೆಡ್ಡಿ ಮತ್ತು ಅಪರ್ಣಾ ಮೊಂಡಲ್ ಇದ್ದಾರೆ.
ಇದನ್ನೂ ಓದಿ: WPL 2023 Auction LIVE: ಮಂಧಾನ, ರೇಣುಕಾ ಆರ್ಸಿಬಿಗೆ, ಮುಂಬೈ ಪಾಲಾದ ಹರ್ಮನ್‌ಪ್ರೀತ್