ETV Bharat / sports

ಮೀರಾ, ಮೇರಿ, ಸಿಂಧೂ, ಮಿಥಾಲಿ.. ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಮಹಿಳಾ ಸಾಧಕರು!

author img

By

Published : Mar 8, 2022, 4:58 PM IST

ಮಾರ್ಚ್​ 8. ಇಂದು ಇಡೀ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ದೇಶ ಹೆಮ್ಮೆ ಪಡುವಂತೆ ಮಾಡಿದ ಪ್ರತಿಭಾನ್ವಿತ, ಸಾಹಸಿ ಮಹಿಳೆಯರ ಅದ್ಭುತ ಪ್ರಯತ್ನ ಮತ್ತು ಅಪರೂಪದ ಸಾಧನೆಗಳನ್ನು ಗೌರವಿಸಲು ಭಾರತವೂ ಈ ದಿನವನ್ನು ಸಂಭ್ರಮದಿಂದಲೇ ಆಚರಿಸುತ್ತದೆ.

Women's Day 2022
ಮಹಿಳಾ ದಿನಾಚಾರಣೆ 2022

ನವದೆಹಲಿ: ಭಾರತದ ಕೀರ್ತಿ ಹೆಚ್ಚಿಸಿದ ಮಹಿಳಾ ರತ್ನಗಳ ಪ್ರಯತ್ನ ಮತ್ತು ಸಾಧನೆಗಳನ್ನು ಗೌರವಿಸಲು ಭಾರತ ಕೂಡಾ ಪ್ರತೀ ವರ್ಷ ಮಹಿಳಾ ದಿನ ಆಚರಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಪ್ರದರ್ಶನದ ಮೂಲಕ ದೇಶ ಹೆಮ್ಮೆ ಪಡುವಂತೆ ಮಾಡಿದ ಅಗ್ರ ಮಹಿಳಾ ಸಾಧಕರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಮಿಥಾಲಿ ರಾಜ್: ಮಿಥಾಲಿ ರಾಜ್​ ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ಮಹಿಳಾ ಬ್ಯಾಟರ್​. ರಾಜಸ್ಥಾನದ ಜೋಧ್​ಪುರದಲ್ಲಿ ಬೆಳೆದ ಇವರು 2 ದಶಕಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಪಯಣದಲ್ಲಿ ಹಲವು ಮೈಲುಗಲ್ಲುಗಳನ್ನು ತಲುಪಿದ್ದಾರೆ. 39 ವರ್ಷದ ಬ್ಯಾಟರ್ ಎರಡು 50 ಓವರ್​ಗಳ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಏಕೈಕ ನಾಯಕಿ (ಪುರುಷರ ಕ್ರಿಕೆಟ್ ಸೇರಿದಂತೆ) ಆಗಿದ್ದಾರೆ.

ಮಿಥಾಲಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಹೆಚ್ಚು ರನ್ ಸಿಡಿಸಿರುವ ಹಾಗೂ ಏಕದಿನ ಕ್ರಿಕೆಟ್​ನಲ್ಲಿ 7000 ರನ್​ ಗಡಿ ದಾಟಿರುವ ವಿಶ್ವದ ಏಕೈಕ ಬ್ಯಾಟರ್ ಕೂಡಾ ಹೌದು. ಏಕದಿನ ಕ್ರಿಕೆಟ್​ನಲ್ಲಿ ಸತತ 7 ಅರ್ಧಶತಕ ದಾಖಲಿಸಿದ ವಿಶ್ವದ ಏಕೈಕ ಬ್ಯಾಟರ್​ ಎಂಬ ದಾಖಲೆಯೂ ರಾಜ್ ಹೆಸರಲ್ಲಿದೆ.

ಜೂನ್​ 2018ರ ಮಹಿಳಾ ಟಿ20 ವಿಶ್ವಕಪ್​ ವೇಳೆ ಮಿಥಾಲಿ ರಾಜ್​ ಮಹಿಳಾ ಟಿ20 ಕ್ರಿಕೆಟ್​ನಲ್ಲಿ 2000 ರನ್​ ಗಡಿ ದಾಟಿದ ವಿಶ್ವದ ಮೊದಲ ಕ್ರಿಕೆಟರ್​ ಎನಿಸಿಕೊಂಡಿದ್ದರು. 2019ರ ಸೆಪ್ಟೆಂಬರ್​ನಲ್ಲಿ ಅವರು 50 ಓವರ್​ಗಳ ಕ್ರಿಕೆಟ್​ನಲ್ಲಿ ಹೆಚ್ಚಿನ ಗಮನ ನೀಡಲು ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಇದೀಗ 6ನೇ ಏಕದಿನ ವಿಶ್ವಕಪ್​ನಲ್ಲಿ ಆಡಿದ ವಿಶ್ವದ 3ನೇ ಕ್ರಿಕೆಟರ್ ಎನಿಸಿಕೊಂಡಿದ್ದು, ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಮಿಥಾಲಿ ರಾಜ್ 2003ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಪದ್ಮಶ್ರೀ, 2017ರಲ್ಲಿ ವಿಸ್ಡನ್ ವಿಶ್ವದ ಮಹಿಳಾ ಕ್ರಿಕೆಟರ್​ ಪ್ರಶಸ್ತಿ, 2021ರಲ್ಲಿ ಮೇಜರ್​ ಧ್ಯಾನ್​ಚಂದ್ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಿ.ವಿ.ಸಿಂಧು: ಸಿಂಧು ಭಾರತ ಕಂಡ ಶ್ರೇಷ್ಠ ಅಥ್ಲೀಟ್​ಗಳಲ್ಲಿ ಒಬ್ಬರಾಗಿದ್ದು, ಒಲಿಂಪಿಕ್ಸ್​ ಸೇರಿದಂತೆ ವಿಶ್ವ ಮಟ್ಟದ ಟೂರ್ನಮೆಂಟ್​​ಗಳಲ್ಲಿ ಅತೀ ಹೆಚ್ಚು ಬಾರಿ ಭಾರತದ ತ್ರಿವರ್ಣ ಧ್ವಜವನ್ನು ​ಹಾರಿಸಿ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಸಿಂಧು ವಿಶ್ವ ಬ್ಯಾಡ್ಮಿಂಟನ್​ನಲ್ಲಿ ಚಾಂಪಿಯನ್​ ಆಗಿರುವ ಭಾರತದ ಏಕೈಕ ಶಟ್ಲರ್ ಮತ್ತು ಒಲಿಂಪಿಕ್ಸ್​ ವೈಯಕ್ತಿಕ ವಿಭಾಗದಲ್ಲಿ 2 ಪದಕ ಪಡೆದಿರುವ 2ನೇ ಅಥ್ಲೀಟ್​ ಎನಿಸಿಕೊಂಡಿದ್ದಾರೆ.

ಹೈದಾರಾಬಾದ್​ನ ಈ ಶಟ್ಲರ್​, 2018ರ ಕಾಮನ್​ವೆಲ್ತ್ ಗೇಮ್ಸ್ ಮತ್ತು 2018 ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ, ಉಬರ್​ ಕಪ್​ನಲ್ಲಿ 2 ಕಂಚಿನ ಪದಕ ಪಡೆದಿದ್ದಾರೆ.

ಸಿಂಧು ಅವರು ಅರ್ಜುನ ಪ್ರಶಸ್ತಿ, ಮೇಜರ್ ಧ್ಯಾನ್​ಚಂದ್ ಖೇಲ್​ ರತ್ನ ಪ್ರಶಸ್ತಿ, ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮೇರಿ ಕೋಮ್: ಮೇರಿಕೋಮ್ ಭಾರತದ ಬಾಕ್ಸಿಂಗ್​ನ ದಂತಕತೆ. ಕ್ರೀಡೆಯನ್ನು ದೇಶದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಮುಖ ಪಾತ್ರವಹಿಸಿದ್ದಾರೆ. ಇವರು 2001ರಲ್ಲಿ ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಬಾಕ್ಸಿಂಗ್​ಗೆ ಧುಮುಕಿದ ಬಾಕ್ಸರ್​, 6 ಬಾರಿ ವಿಶ್ವಚಾಂಪಿಯನ್​ ಪಟ್ಟ ಅಲಂಕರಿಸುವ ಮೂಲಕ ವಿಶ್ವ ಮಹಿಳಾ ಬಾಕ್ಸಿಂಗ್​ನ ಲೆಜೆಂಡ್​ ಅಂದರೆ ಉತ್ಪ್ರೇಕ್ಷೆಯಲ್ಲ.

ವಿಶ್ವಚಾಂಪಿಯನ್​ಶಿಪ್​ನಲ್ಲಿ ಒಂದು ಕಂಚು ಸೇರಿದಂತೆ ಒಟ್ಟು 8 ಪದಕ ಗೆದ್ದಿದ್ದಾರೆ. ಬಾಕ್ಸಿಂಗ್ ಇತಿಹಾಸದಲ್ಲೇ (ಪುರುಷ ಅಥವಾ ಮಹಿಳಾ ವಿಭಾಗ) ಗರಿಷ್ಠ ಪದಕ ಪಡೆದಿರುವ ಬಾಕ್ಸರ್ ಎನಿಸಿಕೊಂಡಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಪಡೆದಿರುವ ಕೋಮ್​, 2014ರ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ, 2018ರ ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕ ಹಾಗೂ 5 ಬಾರಿ ಏಷ್ಯನ್​ ಚಾಂಪಿಯನ್ ಆಗಿದ್ದಾರೆ.

ಮೂರು ಮಕ್ಕಳ ತಾಯಿಯಾಗಿದ್ದರೂ ಬಾಕ್ಸಿಂಗ್​​ನಲ್ಲಿ ಸಕ್ರಿಯರಾಗಿರುವ 39 ವರ್ಷದ ಮೇರಿ ಕೋಮ್​ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಅರ್ಜುನ ಪ್ರಶಸ್ತಿ ಮತ್ತು ಖೇಲ್​ ರತ್ನ ಪ್ರಶಸ್ತಿಗಳು ಸಂದಿವೆ.

ಅವನಿ ಲೇಖಾರ: ಅವನಿ ಲೇಖಾರ ಭಾರತದ ಶ್ರೇಷ್ಠ ಪ್ಯಾರಾಲಿಂಪಿಯನ್‌ಗಳಲ್ಲಿ ಒಬ್ಬರು, ಪ್ರಸ್ತುತ ವಿಶ್ವದ 2ನೇ ಶ್ರೇಯಾಂಕದಲ್ಲಿರುವ ಇವರು ಹಲವಾರು ಸ್ಪರ್ಧೆಯಲ್ಲಿ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರು 2022ರ ಪ್ಯಾರಾಲಿಂಪಿಕ್ಸ್​ನಲ್ಲಿ 10 ಮೀಟರ್​ ರೈಫಲ್​ ವಿಭಾಗದಲ್ಲಿ ಚಿನ್ನದ ಪದಕ ಮತ್ತು 50 ಮೀಟರ್​ ರೈಫಲ್ 3 ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಅವನಿ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮತ್ತು ಏಕೈಕ ಪ್ಯಾರಾ ಅಥ್ಲೀಟ್​ ಆಗಿದ್ದಾರೆ. ಅವರಿಗೆ 2021ರಲ್ಲಿ ಖೇಲ್​ ರತ್ನ, 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮೀರಾ ಬಾಯಿ ಚಾನು: ಚಾನು 22 ವರ್ಷಗಳ ನಂತರ ಒಲಿಂಪಿಕ್ಸ್​ನಲ್ಲಿ ವೇಯ್ಟ್​ಲಿಫ್ಟಿಂಗ್ ವಿಭಾಗದಲ್ಲಿ ಭಾರತದಕ್ಕೆ ಪದಕ ತಂದುಕೊಟ್ಟಿದ್ದರು. ಇದು 2022ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬಂದ ಮೊದಲ ಪದಕವಾಗಿತ್ತು. ಪಿವಿ ಸಿಂಧು ಬಳಿಕ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ 2ನೇ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದರು.

27 ವರ್ಷದ ಭರವಸೆಯ ಕ್ರೀಡಾಪಟು 2014ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿ ಪದಕ, 2017ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ, 2018ರಲ್ಲಿ ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಚಾನು ಅವರಿಗೆ ಮೇಜರ್ ಧ್ಯಾನ್​ಚಂದ್​ ಖೇಲ್​ ರತ್ನ, ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.