ಮುಂಬೈ: ಭಾರತ-ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ 6 ವಿಕೆಟ್ಗಳಿಂದ ಗೆದ್ದು ಬೀಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 283 ರನ್‌ಗಳ ಗುರಿ ನೀಡಿತ್ತು. ಇದಕ್ಕುತ್ತರವಾಗಿ ಆಸೀಸ್ 46.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 285 ರನ್ ಬಾರಿಸುವ ಮೂಲಕ ಗೆಲುವು ದಾಖಲಿಸಿತು.
-
A comfortable victory for Australia as they go 1-0 up in the three-match ODI series.#INDvAUS | 📝: https://t.co/USmOKQ4xm5 pic.twitter.com/aRQQTf69ML
— ICC (@ICC) December 28, 2023 " class="align-text-top noRightClick twitterSection" data="
">A comfortable victory for Australia as they go 1-0 up in the three-match ODI series.#INDvAUS | 📝: https://t.co/USmOKQ4xm5 pic.twitter.com/aRQQTf69ML
— ICC (@ICC) December 28, 2023A comfortable victory for Australia as they go 1-0 up in the three-match ODI series.#INDvAUS | 📝: https://t.co/USmOKQ4xm5 pic.twitter.com/aRQQTf69ML
— ICC (@ICC) December 28, 2023
ಆಸ್ಟ್ರೇಲಿಯಾ ಪರ ಫೋಬೆ ಲಿಚ್ಫೀಲ್ಡ್ (78), ಎಲ್ಲಿಸ್ ಪೆರ್ರಿ(75), ಮೆಕ್‌ಗ್ರಾತ್(ಅಜೇಯ 68) ಅರ್ಧಶತಕ ಸಿಡಿಸಿದರೆ ಮೂನಿ 42 ರನ್‌ಗಳ ಕೊಡುಗೆ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಪರ ರೇಣುಕಾ ಸಿಂಗ್, ವಸ್ತ್ರಾಕರ್, ಸ್ನೇಹ ರಾಣಾ, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಕಳಪೆ ಆರಂಭ ಪಡೆಯಿತು. ತಂಡದ ಸ್ಕೋರ್ 12 ರನ್ ಆಗಿದ್ದಾಗ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಒಂದು ರನ್ಗಳಿಸಿ ಡಾರ್ಸಿ ಬ್ರೌನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಯಾಸ್ತಿಕಾ ಭಾಟಿಯಾ ಎರಡನೇ ವಿಕೆಟ್‌ಗೆ ರಿಚಾ ಘೋಷ್ ಜೊತೆ 29 ರನ್‌ಗಳ ಜೊತೆಯಾಟವಾಡಿದರು. ರಿಚಾ 20 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹರ್ಮನ್‌ಪ್ರೀತ್ ಕೌರ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗದೇ ಒಂಬತ್ತು ರನ್ ಗಳಿಸಿ ಪೆವಿಲಿಯನ್ ಸೇರಿದರು.
ಮತ್ತೊಂದೆಡೆ, ಸಮಯೋಚಿತ ಆಟವಾಡುತ್ತಿದ್ದ ಯಾಸ್ತಿಕಾ ಬಾಟಿಯ 49 ರನ್ ಗಳಿಸಿದ್ದಾಗ ವೇರ್ಹ್ಯಾಮ್ ಎಸೆತದಲ್ಲಿ ಕ್ಯಾಚೌಟ್ ಆಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಈ ವೇಳೆಗೆ 19.5 ಓವರ್ ಮುಕ್ತಾಯಗೊಂಡಿದ್ದು ಭಾರತ 4 ವಿಕೆಟ್ ನಷ್ಟಕ್ಕೆ 95 ರನ್ ದಾಖಲಿಸಿ ಸಂಕಷ್ಟಕ್ಕೆ ಸಿಲುಕಿತ್ತು.
ಕೌರ್ ನಿರ್ಗಮನದ ಬಳಿಕ ಕ್ರೀಸ್ಗಿಳಿದ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ತಂಡದ ಸ್ಕೋರ್ ಹೆಚ್ಚಿಸಲು ಮುಂದಾದರು. 21 ರನ್ ಗಳಿಸಿದ್ದ ದೀಪ್ತಿ ಕ್ಯಾಚೌಟ್ ಆಗಿ ಪೆವಿಲಿಯನ್ಗೆ ಮರಳಿದರು. ಮತ್ತೊಂದೆಡೆ, ಕ್ರೀಸ್ ಕಚ್ಚಿ ನಿಂತ ಜೆಮಿಮಾ ರೋಡ್ರಿಗಸ್ ಭರ್ಜರಿ ಬ್ಯಾಟಿಂಗ್ ಮಾಡಿ 77 ಎಸೆತಗಳಲ್ಲಿ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ, ಗಾರ್ಡನರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಶತಕವಂಚಿತರಾದರು. ಉಳಿದಂತೆ, ಅಮನ್ಜೋತ್ ಕೌನ್ 20 ರನ್ ಮತ್ತು ಸ್ನೇಹ್ ರಾಣಾ ಒಂದು ರನ್ ಕೊಡುಗೆ ನೀಡಿದರು. ಕೊನೆಯಲ್ಲಿ, ಪೂಜಾ ವಸ್ತ್ರಾಕರ್ ಬಿರುಸಿನ ಬ್ಯಾಟಿಂಗ್ ಮೂಲಕ ಅತ್ಯುತ್ತಮ ಅರ್ಧಶತಕ ಬಾರಿಸಿ ಟೀಂ ಇಂಡಿಯಾದ ಸ್ಕೋರ್ ಹೆಚ್ಚಿಸಿದರು. ಈ ಮೂಲಕ ಭಾರತ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿತು.
ಆಸೀಸ್ ಪರ ಆಶ್ಲೇ ಗಾರ್ಡ್ನರ್, ಜಾರ್ಜಿಯಾ ವೇರ್‌ಹ್ಯಾಮ್ ತಲಾ ಎರಡು ವಿಕೆಟ್, ಡಾರ್ಸಿ ಬ್ರೌನ್, ಮೇಗನ್ ಸ್ಕಟ್, ಅನ್ನಾಬೆಲ್ ಸದರ್‌ಲ್ಯಾಂಡ್, ಅಲಾನಾ ಕಿಂಗ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ರಣಜಿ ಟ್ರೋಫಿಯ ಆರಂಭಿಕ ಎರಡು ಪಂದ್ಯಗಳಿಗೆ ಕರ್ನಾಟಕ ತಂಡ ಪ್ರಕಟ