ETV Bharat / sports

ಆರಂಭಿಕ ಸ್ಥಾನ​ದಿಂದ ಶುಬ್ಮನ್ ಗಿಲ್​ಗೆ ಹಿಂಬಡ್ತಿ, ಹೊಸ ಜವಾಬ್ದಾರಿ ನೀಡಿದ ಮ್ಯಾನೇಜ್​ಮೆಂಟ್​ - ಭಾರತ vs ನ್ಯೂಜಿಲ್ಯಾಂಡ್​ ಟೆಸ್ಟ್ ಸರಣಿ

ಇಂಗ್ಲೆಂಡ್​ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರಿರುವ ಕೆ.ಎಲ್.ರಾಹುಲ್​ ಪ್ರಸ್ತುತ ಭಾರತದ ಎಲ್ಲಾ ಮಾದರಿಯ ಅತ್ಯುತ್ತಮ ಬ್ಯಾಟರ್ ಎಂದು ಕರೆಸಿಕೊಂಡಿದ್ದಾರೆ. ಭಾಗಶಃ, ನ್ಯೂಜಿಲ್ಯಾಂಡ್ ವಿರುದ್ಧವೂ ಆರಂಭಿಕರಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್​ವಾಲ್ ಜೊತೆಗೆ ಕಣಕ್ಕಿಳಿಯಲಿದ್ದಾರೆ.

Shubman set for new middle-order slot
ಆರಂಭಿಕ ಸ್ಥಾನ​ದಿಂದ ಶುಬ್ಮನ್ ಗಿಲ್​ಗೆ ಹಿಂಬಡ್ತಿ
author img

By

Published : Nov 22, 2021, 8:20 PM IST

ಕಾನ್ಪುರ: ಆರಂಭಿಕನಾಗಿ ಮಿಂಚುತ್ತಿರುವ ಭಾರತದ ಆರಂಭಿಕ ಬ್ಯಾಟರ್​ ಶುಬ್ಮನ್​ ಗಿಲ್ ಅವ​ರನ್ನು ಮುಂಬರುವ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಟೀಮ್​ ಮ್ಯಾನೇಜ್​ಮೆಂಟ್ ಕೇಳುವ ಸಾಧ್ಯತೆಯಿದ್ದು, ಕೆಲವು ದೊಡ್ಡ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ದಾಳಿ ಎದುರಿಸಲು ಸಮರ್ಥನೇ? ಎಂಬುದನ್ನು ಸಮಿತಿ ಎದುರು ನೋಡುತ್ತಿದೆ ತಿಳಿದುಬಂದಿದೆ.

ಕಾನ್ಪುರದಲ್ಲಿ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ನಡೆಯುವ ಕಿವೀಸ್​ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಶುಬ್ಮನ್​ ಗಿಲ್​ಗೆ ಮಧ್ಯಮ ಕ್ರಮಾಂಕದಲ್ಲಿ ಆಡಲು ಸೂಚಿಸುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಖಾಯಂ ನಾಯಕ ವಿರಾಟ್​ ಕೊಹ್ಲಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅನುಭವಿ ಓಪನರ್ ರೋಹಿತ್ ಶರ್ಮಾ ಟೆಸ್ಟ್​ ಸರಣಿಯಿಂದಲೇ ಹೊರಗುಳಿದಿದ್ದಾರೆ.

ಹಾಗಾಗಿ, ಅವರಿಬ್ಬರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವಾಪಸ್​ ಆದಾಗ ಮ್ಯಾನೇಜ್​ಮೆಂಟ್ ಮಧ್ಯಮ ಕ್ರಮಾಂಕದಲ್ಲಿ ಗಿಲ್​ ಅವರ ಪರಾಕ್ರಮವನ್ನು ನೋಡಲು ಬಯಸಿದೆ. ಒಂದು ವೇಳೆ ಯಶಸ್ವಿಯಾದರೆ ಅವರನ್ನ ದೀರ್ಘಾವಧಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಎದುರು ನೋಡಲು ಬಯಸುತ್ತಿದೆ.

ಇಂಗ್ಲೆಂಡ್​ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರಿರುವ ಕೆ.ಎಲ್.ರಾಹುಲ್​ ಪ್ರಸ್ತುತ ಭಾರತದ ಎಲ್ಲಾ ಮಾದರಿಯ ಅತ್ಯುತ್ತಮ ಬ್ಯಾಟರ್ ಎಂದು ಕರೆಸಿಕೊಂಡಿದ್ದಾರೆ. ಭಾಗಶಃ, ನ್ಯೂಜಿಲ್ಯಾಂಡ್ ವಿರುದ್ಧವೂ ಆರಂಭಿಕರಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್​ವಾಲ್ ಜೊತೆಗೆ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಕಿವೀಸ್​ ಕಠಿಣ ಪರಿಸ್ಥಿತಿಯಲ್ಲಿ ಸರಣಿಯನ್ನಾಡಿದೆ, ಸರಣಿ ಗೆದ್ದರೂ ನಮ್ಮ ಕಾಲು ನೆಲದಲ್ಲಿರಬೇಕು: ದ್ರಾವಿಡ್​

ಶುಬ್ಮನ್​ ಗಿಲ್​ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಮಾಡುತ್ತಿರುವ ಯೋಜನೆಯನ್ನು ಮಾಜಿ ರಾಷ್ಟ್ರೀಯ ಆಯ್ಕೆಗಾರ ಜತಿನ್ ಪರಂಜಪೆ, ಇದು ಕೆಟ್ಟ ಯೋಜನೆಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಪರಂಜಪೆ 2020ರ ಆಸ್ಟ್ರೇಲಿಯಾ ಪ್ರವಾಸಕ್ಕೆ ಗಿಲ್​ರನ್ನು ಆಯ್ಕೆ ಮಾಡಿದ್ದ ಆಯ್ಕೆಸಮಿತಿಯ ಸದಸ್ಯರಾಗಿದ್ದರು.

"ಇದೇನು ಕೆಟ್ಟ ಯೋಜನೆಯಲ್ಲ, ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಶುಬ್ಮನ್ ಆಡುವುದು ತಂಡಕ್ಕೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಿರ್ದಿಷ್ಟ ಪ್ರಮಾಣದ ನಮ್ಯತೆ ಯಾವಾಗಲೂ ಸಹಾಯ ಮಾಡುತ್ತದೆ. ರಾಹುಲ್ ಕೂಡ ಆರಂಭಿಕನಾಗುವ ಮೊದಲು ಕೆಲವು ಸಮಯ ಮಧ್ಯಮ ಕ್ರಮಾಂಕದಲ್ಲಿ ಆಡಿ ಯಶಸ್ವಿಯಾಗಿದ್ದರು. ಗಿಲ್​ ಕೂಡ ಅವರನ್ನು ಅನುಕರಿಸಬಹುದು" ಎಂದು ಪರಂಜಪೆ ಪಿಟಿಐಗೆ ತಿಳಿಸಿದ್ದಾರೆ.

ಭಾರತದಲ್ಲಿ ಅವರ ದುರ್ಬಲ ಪ್ರದರ್ಶನದ ಬಗ್ಗೆ ನಾನು ಚಿಂತಿಸುತ್ತಿಲ್ಲ. ವಿದೇಶದಲ್ಲಿ ಇದು ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ. ಏಕೆಂದರೆ, ಸಾಗರೋತ್ತರ ಸರಣಿಯಲ್ಲಿ ಆರಂಭಿಕ ಮತ್ತು ಮಧ್ಯಮ ಕ್ರಮಾಂಕಗಳು ಅತ್ಯಂತ ವಿಶೇಷ ಪಾತ್ರವಹಿಸುತ್ತದೆ ಎಂದು ಪರಂಜಪೆ ಹೇಳುತ್ತಾರೆ.

ಇನ್ನು ಈಗಾಗಲೇ ಆರಂಭಿಕನಾಗಿ 3 ಅರ್ಧಶತಕವನ್ನು ಸಿಡಿಸಿರುವ ಶುಬ್ಮನ್ ಗಿಲ್​ಗೆ ಮಧ್ಯಮ ಕ್ರಮಾಂಕಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದೇ? ಎಂದು ಕೇಳಿದ್ದಕ್ಕೆ ಉತ್ತರಿಸಿದ ಪರಂಜಪೆ, 50 ಪಂದ್ಯಗಳನ್ನಾಡಿದ ಆಟಗಾರನಿಂತ ನೀವು ಯುವ ಆಟಗಾರರಾಗಿವಾಗ ವೇಗವಾಗಿ ಹೊಸ ಪಾತ್ರಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕಕ್ಕೆ ಎಂದು ಆಯ್ಕೆಯಾಗಿರುವ ಶ್ರೇಯಸ್​ ಅಯ್ಯರ್​ ಪದಾರ್ಪಣೆ ಮಾಡಲು ಮತ್ತಷ್ಟು ದಿನ ಕಾಯಬಹುದೇ ಎಂದು ಕೇಳಿದ್ದಕ್ಕೆ, ಕೆಲವು ಸಮಯ ತೆಗೆದುಕೊಳ್ಳಬಹುದು. ಈಗಾಗಲೆ ವೈಫಲ್ಯ ಅನುಭವಿಸುತ್ತಿರುವ ಪೂಜಾರಾ ಮತ್ತು ರಹಾನೆ ಈಗ ಅಥವಾ ಮುಂದೆ ಮತ್ತೆ ವಿಫಲರಾದರೆ ತಂಡದಲ್ಲಿ ಎರಡು ಸ್ಥಾನ ತೆರೆಯುತ್ತದೆ. ಗಿಲ್, ವಿಹಾರಿ ಮತ್ತು ಅಯ್ಯರ್​ರಲ್ಲಿ ಇಬ್ಬರು ಆ ಸ್ಥಾನಗಳಲ್ಲಿ ಆಡಬಹುದು ಎಂದಿದ್ದಾರೆ.

ಇದನ್ನೂ ಓದಿ: ನಾಯಕನಿಗೆ ಯಾವಾಗಲೂ ಅಶ್ವಿನ್​ ಒಂದು ಆಕ್ರಮಣಕಾರಿ ಅಸ್ತ್ರ : ರೋಹಿತ್ ಪ್ರಶಂಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.