ETV Bharat / sports

ಏಕದಿನ ವಿಶ್ವಕಪ್ ವೇಳೆ ಬದಲಾಗುತ್ತಾ ವಿರಾಟ್ ನಾಯಕತ್ವ..? ಬಿಸಿಸಿಐ ಮುಂದಿರುವ ಸವಾಲುಗಳಿವು! - ಭಾರತ ತಂಡ

ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುತ್ತಿದ್ದಂತೆ ಭಾರತ ಕ್ರಿಕೆಟ್​ ತಂಡದೊಳಗೆ ಸಾಕಷ್ಟು ಬೆಳವಣಿಗೆಗೆ ಕಾರಣವಾಗಿದೆ. ಟಿ-20 ತಂಡದ ನಾಯಕತ್ವದಿಂದ ಹಿಡಿದು ಭಾರತದಲ್ಲೇ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಕುರಿತಂತೆಯೂ ಚರ್ಚೆಯಾಗುತ್ತಿದೆ.

kohli-
ವಿರಾಟ್
author img

By

Published : Sep 17, 2021, 11:43 AM IST

ನವದೆಹಲಿ: ಮುಂದಿನ ತಿಂಗಳು ಟಿ-20 ತಂಡದ ನಾಯಕತ್ವ ತ್ಯಜಿಸಲು ಕೊಹ್ಲಿ ನಿರ್ಧರಿಸಿದ್ದು, ಈ ಕುರಿತು ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಆದರೆ, ಟಿ-20 ತಂಡಕ್ಕೆ ಮುಂದಿನ ಸಾರಥಿ ಚರ್ಚೆಯಾದರೆ ಇತ್ತ ಏಕದಿನ ತಂಡದ ಮುಂದಿನ ಸವಾಲುಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಕೊಹ್ಲಿ ಟಿ -20 ಆವೃತ್ತಿ ಹೊರತುಪಡಿಸಿ ಉಳಿದೆರಡು ಫಾರ್ಮ್ಯಾಟ್‌ಗಳಲ್ಲಿ ಕ್ಯಾಪ್ಟನ್ ಆಗಿ ಉಳಿಯಲಿದ್ದಾರೆ. ಆದರೆ, 2023 ರಂದು ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಕೊಹ್ಲಿ ನಾಯಕತ್ವದಲ್ಲೇ ಭಾರತ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಸಹ ಹುಟ್ಟುಕೊಂಡಿದೆ.

2023ರ ವರೆಗಿನ ಭಾರತ ತಂಡದ ಪ್ರವಾಸ ಗಮನಿಸಿದರೆ ಒಟ್ಟು 20 ದ್ವಿಪಕ್ಷೀಯ ಟಿ-20 ಪಂದ್ಯವಾಡಲಿದೆ. ಆದೆ ಇದ್ಯಾವುದಕ್ಕೂ ಕೊಹ್ಲಿ ನಾಯಕತ್ವ ಇರುವುದಿಲ್ಲ. ಯುಎಇ ಟಿ-20 ವಿಶ್ವಕಪ್​ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದರೆ ಬಿಸಿಸಿಐ ಕೊಹ್ಲಿ ನಾಯಕತ್ವ ಬದಲಿಸುವ ಸಾಧ್ಯತೆ ಇತ್ತು. ಇದು ವಿರಾಟ್ ಕೊಹ್ಲಿಗೂ ಸಹ ತಿಳಿದ ವಿಚಾರವೇ ಆಗಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

ಕೊಹ್ಲಿ ನಾಯಕತ್ವ ಬದಲಾದರೂ ಅಚ್ಚರಿ ಇಲ್ಲ

ಆದರೆ, ಬಿಸಿಸಿಐ ಮುಂದೊಂದು ದಿನ 50 ಓವರ್​​ಗಳ ಪಂದ್ಯಕ್ಕೆ ಕೊಹ್ಲಿಯವರ ನಾಯಕತ್ವ ಬದಲಿಸಿದರೆ ಅಚ್ಚರಿಯೇನಿಲ್ಲ. ಆದರೆ ಟಿ-20 ತಂಡವನ್ನ ವಿರಾಟ್ ಬಳಿಕ ರೋಹಿತ್ ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡವನ್ನ ಹಲವು ಬಾರಿ ದಡ ಸೇರಿಸಿರುವ ಅವರು ಯುವಪಡೆಯನ್ನ ಮುನ್ನಡೆಸಲು ಸಮರ್ಥರು ಎಂಬ ಮಾತು ಕೇಳಿ ಬರುತ್ತಿದೆ.

ಇದಕ್ಕೂ ಮೊದಲು ಹಲವು ಸರಣಿಗಳಲ್ಲಿ ಕೊಹ್ಲಿ ನಾಯಕರಾಗಿ ತೆಗೆದುಕೊಂಡಿದ್ದ ನಿರ್ಧಾರಗಳ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ವರ್ಡ್​​ ಟೆಸ್ಟ್ ಚಾಂಪಿಯನ್​ಶೀಪ್​ನ ಫೈನಲ್​ನಲ್ಲಿ ಇಬ್ಬರು ಸ್ಪಿನ್ನರ್​ಗಳ ಆಡಿಸಿದ್ದು, ಜೊತೆಗೆ 4ನೇ ಕ್ರಮಾಂಕದಲ್ಲಿ ಸೂಕ್ತ ಬ್ಯಾಟ್ಸ್​ಮನ್​​​ ಆಡಿಸದೇ ಇದಿದ್ದಕ್ಕೆ ಟೀಕೆ ಎದುರಿಸಿದ್ದರು.

ಬಳಿಕ ಕಳೆದ ಆಂಗ್ಲರ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಆರ್ ಅಶ್ವಿನ್​ಗೆ ಅವಕಾಶ ನೀಡದೇ ಇರುವುದಕ್ಕೂ ಟೀಕೆ ಕೇಳಿಬಂದಿತ್ತು. ಅಲ್ಲದೆ ಅತೀ ಕಡಿಮೆ ಮೊತ್ತಕ್ಕೆ ಟೀಂ ಇಂಡಿಯಾ ಆಲ್​ಔಟ್ ಆದಾಗಲೂ ಕೊಹ್ಲಿ ನಾಯಕತ್ವದ ವಿರುದ್ಧ ಪ್ರಶ್ನೆ ಎದ್ದಿದ್ದವು.

ಡ್ರೆಸಿಂಗ್​ ರೂಮ್​ ನಡವಳಿಕೆ ಬಗ್ಗೆಯೂ ಚರ್ಚೆ

ಇಷ್ಟಾದರೂ ಕೊಹ್ಲಿ ವಿರುದ್ಧ ಡ್ರೆಸಿಂಗ್ ರೂಮ್​ನ ನಡವಳಿಕೆ ಕುರಿತಂತೆಯೂ ಹಲವು ಮಾತುಗಳು ಕೇಳಿಬಂದಿದೆ. ಮಾಜಿ ನಾಯಕ ಧೋನಿ ಅವರಂತೆ ಆಟಗಾರರ ಜೊತೆ ಕೊಹ್ಲಿ ಅಷ್ಟೊಂದು ಚರ್ಚೆ ನಡೆಸುತ್ತಿರಲಿಲ್ಲ ಎಂಬ ವಿಷಯವನ್ನ ಮಾಜಿ ಆಟಗಾರರೊಬ್ಬರು ಹೇಳಿಕೊಂಡಿದ್ದಾರೆ.

ಆದರೆ, ರೋಹಿತ್ ಎಂಎಸ್ ಧೋನಿಯವರಂತೆ ಹೆಚ್ಚಾಗಿ ಆಟಗಾರರ ಜೊತೆ ಬೆರೆಯುತ್ತಾರೆ. ಕಿರಿಯ ಆಟಗರರೊಂದಿಗೆ ಊಟ, ಟೀಗಾಗಿ ಸೇರುತ್ತಾರೆ. ಜೊತೆಗೆ ಅವರ ಮಾನಸಿಕ ಒತ್ತಡಕ್ಕೆ ಕಾರಣವಾಗುವಂತಹ ಎಲ್ಲ ವಿಚಾರಗಳ ಕುರಿತಂತೆ ಮುಕ್ತ ಮಾತುಕತೆ ನಡೆಸುತ್ತಾರೆ ಎಂದಿದ್ದಾರೆ.

ಇತ್ತ ಟಿ-20 ತಂಡದ ಮುಂದಿನ ನಾಯಕತ್ವಕ್ಕಾಗಿ ರಿಷಭ್​ ಪಂತ್, ರೋಹಿತ್ ಶರ್ಮಾ ಅರ್ಹರಿದ್ದಾರೆ ಎಂದು ಮಾಜಿ ಆಟಗಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮಾಹಿ ನೇತೃತ್ವದಲ್ಲಿ ಕೊಹ್ಲಿ ಬಹಳಷ್ಟು ಕಲಿತಿದ್ದರು!

ಇತ್ತ ಮಹೇಂದ್ರ ಸಿಂಗ್ ಧೋನಿ ವಿಧಾಯಕ್ಕೂ ಮುನ್ನವೇ ವಿರಾಟ್​ ಕೊಹ್ಲಿಯಂತಹ ಮುಂದಿನ ಸಾರಥಿಯನ್ನ ರೂಪುಗೊಳಿಸಿದ್ದರೂ. ಧೋನಿ ಮಾರ್ಗದರ್ಶನದಲ್ಲಿ ಕೊಹ್ಲಿ ಸಾಕಷ್ಟು ಕಲಿತ್ತಿದ್ದರು. ಆದರೆ ಒಂದು ವೇಳೆ ಕೊಹ್ಲಿ ನಂತರದ ಸ್ಥಾನಕ್ಕೆ ಭಾರತ ತಂಡದಲ್ಲೀಗ ಸೂಕ್ತ ಆಟಗಾರನ ಆಯ್ಕೆ ಕಷ್ಟವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಓದಿ: ಟಿ -20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿ: ವಿನೋದ್ ಕಾಂಬ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.