ETV Bharat / sports

ಮುಂಬೈ vs ಪಂಜಾಬ್‌: ಗೆಲುವಿನ ಖಾತೆ ತೆರೆಯುವರೇ 5 ಬಾರಿಯ ಚಾಂಪಿಯನ್ಸ್?

author img

By

Published : Apr 13, 2022, 3:32 PM IST

ಸತತ 4 ಪಂದ್ಯಗಳಲ್ಲಿ ಸೋಲುಂಡಿರುವ ಮುಂಬೈಗೆ ಟಾಸ್​ ಕೂಡ ಕೈಕೊಡುತ್ತಿದೆ. ಪುಣೆಯಲ್ಲಿ ಆಡಿರುವ 3 ಪಂದ್ಯಗಳಲ್ಲೂ ಟಾಸ್​ ಸೋತಿದ್ದರು. ಈ ಪಂದ್ಯದಲ್ಲಾದರೂ ಚೇಸಿಂಗ್ ಮಾಡುವ ಅವಕಾಶ ಸಿಕ್ಕರೆ ಮೊದಲ ಗೆಲುವು ಕಾಣುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಕೇವಲ ಇಬ್ಬರು ವಿದೇಶಿಗರೊಂದಿಗೆ ಕಣಕ್ಕಿಳಿದಿದ್ದ ಮುಂಬೈ ಇಂದು ಟಿಮ್ ಡೇವಿಡ್​ಗೆ ಅವಕಾಶ ಕೊಡುವಂತೆ ಕಾಣುತ್ತಿದೆ.

Mumbai Indians vs Punjab Kings
ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್

ಪುಣೆ: ಸತತ ಸೋಲುಗಳಿಂದ ಕೆಂಗೆಟ್ಟಿರುವ 5 ಬಾರಿಯ ಐಪಿಎಲ್‌ ಚಾಂಪಿಯನ್ಸ್‌ ಪ್ರಸಕ್ತ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯದೇ ಉಳಿದಿರುವ ಏಕೈಕ ತಂಡ. ಇಂದು ಸಂಜೆ ಪಂಜಾಬ್​ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುತ್ತಿರುವ ರೋಹಿತ್‌ ಪಡೆ, ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ. ಬಹುತೇಕ ಆವೃತ್ತಿಗಳಲ್ಲಿ ಅಗ್ರಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದ ಚೆನ್ನೈ ಮತ್ತು ಮುಂಬೈ ತಂಡಗಳು ಪ್ರಸ್ತುತ ಆವೃತ್ತಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವುದಕ್ಕೆ ಪೈಪೋಟಿ ನಡೆಸುತ್ತಿವೆ.

ಮುಂಬೈ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ತಮ್ಮ ತಂಡದ ಆಧಾರವಾಗಿದ್ದ ನಾಲ್ಕು ಸ್ಟಾರ್ ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ನಂತರ ಕೆಲವು ಸ್ಟಾರ್​ ಆಟಗಾರರನ್ನು ಖರೀದಿಸಿತ್ತು. ಆದರೆ ಇದ್ಯಾವುದೂ ಮುಂಬೈ ತಂಡಕ್ಕೆ ನೆರವಾಗೆ ಬರುತ್ತಿಲ್ಲ. ಸೂರ್ಯಕುಮಾರ್​ ಯಾದವ್​ ಹೊರತುಪಡಿಸಿದರೆ ರಿಟೈನ್ ಮಾಡಿಕೊಂಡಿರುವ ಆಟಗಾರರ ಪ್ರದರ್ಶನ ಕಳಪೆಯಾಗಿದೆ. ಹರಾಜಿನಲ್ಲಿ ಕೊಂಡವರೂ ಕೂಡ ತಂಡಕ್ಕೆ ಗೆಲುವು ತಂದುಕೊಡುವ ಪ್ರದರ್ಶನ ತೋರುತ್ತಿಲ್ಲ.

ಆಟಗಾರರ ವೈಫಲ್ಯದ ಜೊತೆಗೆ ಮುಂಬೈಗೆ ಟಾಸ್​ ಕೂಡ ಕೈಕೊಡುತ್ತಿದೆ. ಪುಣೆಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಟಾಸ್​ ಸೋತಿದ್ದು, ಈ ಪಂದ್ಯದಲ್ಲಾದರೂ ಚೇಸಿಂಗ್ ಮಾಡುವ ಅವಕಾಶ ಸಿಕ್ಕರೆ ಮೊದಲ ಗೆಲುವು ಕಾಣುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಇಬ್ಬರು ವಿದೇಶಿಗರೊಂದಿಗೆ ಕಣಕ್ಕಿಳಿದಿದ್ದ ಮುಂಬೈ ಇಂದು ಟಿಮ್ ಡೇವಿಡ್​ಗೆ ಅವಕಾಶ ಕೊಡುವಂತೆ ತೋಚುತ್ತಿದೆ.

ಪಂಜಾಬ್ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು 2 ಸೋಲು ಕಂಡಿದೆ. ಸೋಲು ಕಂಡಿರುವ ಪಂದ್ಯಗಳಲ್ಲಿ ಕೆಕೆಆರ್ ವಿರುದ್ಧ ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿತ್ತು. ಆರ್​ಸಿಬಿ ವಿರುದ್ಧ 200+ ಚೇಸ್​ ಮಾಡಿ ಗೆದ್ದರೆ, ಚೆನ್ನೈ ವಿರುದ್ಧ 54 ರನ್​ಗಳ ಗೆಲುವು ದಾಖಲಿಸಿದೆ. ಟೈಟನ್ಸ್ ವಿರುದ್ಧ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸರ್ ಬಿಟ್ಟುಕೊಟ್ಟು ರೋಚಕ ಸೋಲು ಕಂಡಿತ್ತು. ಹಾಗಾಗಿ ತಂಡ ಬಲಿಷ್ಠವಾಗಿದೆ. ಆದರೆ, ಟಾಸ್​ ಎರಡೂ ತಂಡಕ್ಕೂ ಪ್ರಮುಖ ಪಾತ್ರವಹಿಸಲಿದೆ.

ಶಿಖರ್ ಧವನ್​ ಮತ್ತು ಲಿವಿಂಗ್​ಸ್ಟೋನ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ನಾಯಕ ಅಗರ್ವಾಲ್, ಜಾನಿ ಬೈರ್​ಸ್ಟೋವ್ ಈ ಪಂದ್ಯದಲ್ಲಿ ಜವಾಬ್ದಾರಿ ತೆಗೆದುಕೊಂಡರೆ ಮುಂಬೈಗೆ ಮತ್ತೊಂದು ಸೋಲು ಖಚಿತ. ಬೌಲಿಂಗ್​ನಲ್ಲಿ ರಬಾಡ, ಚಾಹರ್​ ಅರ್ಶ್​ದೀಪ್​ ಉತ್ತಮ ಲಯದಲ್ಲಿದ್ದು, ಅವರಿಗೆ 4 ಮತ್ತು 5ನೇ ಬೌಲರ್​​ ನೆರವಿನ ಅಗತ್ಯವಿದೆ.

ಮುಖಾಮುಖಿ: ಇತ್ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಮುಂಬೈ 15-13ರಲ್ಲಿ ಮುನ್ನಡೆ ಸಾಧಿಸಿದೆ. 2019ರಿಂದ ಆಡಿರುವ 6 ಪಂದ್ಯಗಳಲ್ಲಿ 3-3ರಲ್ಲಿ ಸಮಬಲ ಸಾಧಿಸಿವೆ.

ಇದನ್ನೂ ಓದಿ: IPL 2022: ಆರ್​ಸಿಬಿ ಮಿಂಚಿನ ಆಟ ವಿಫಲ.. ಚೆನ್ನೈಗೆ ಒಲಿದ ಅದೃಷ್ಟದ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.