ಸೌಥಾಂಪ್ಟನ್(ಇಂಗ್ಲೆಂಡ್): ಟೀಂ ಇಂಡಿಯಾದ ವಿರುದ್ಧ ಗೆದ್ದಿರುವುದು ಅತ್ಯಂತ ವಿಶೇಷವಾಗಿದೆ. ಈ ಜರ್ನಿಯಲ್ಲಿ ನಾವು ಎಲ್ಲಾ ಸಮಯದಲ್ಲೂ ಸ್ಟಾರ್ ಆಟಗಾರರನ್ನು ಹೊಂದಿರಲಿಲ್ಲ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತನ್ನ ತಂಡದ ಆಟಗಾರರನ್ನು ಹೊಗಳಿದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಅಮೋಘ ಗೆಲುವು ಸಾಧಿಸಿದ ನಂತರ ಅವರು ಮಾತನಾಡಿದರು. ನಾನು ಅಲ್ಪಾವಧಿಗೆ ನ್ಯೂಜಿಲೆಂಡ್ ಕ್ರಿಕೆಟ್ ಟೀಂನ ಭಾಗವಾಗಿದ್ದೇನೆ. ಟೆಸ್ಟ್ ಚಾಂಪಿಯನ್ಸ್ಶಿಪ್ ಅತ್ಯಂತ ವಿಶೇಷವಾದ ಭಾವನೆ ತಂದುಕೊಡುತ್ತಿದೆ ಎಂದರು.
ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡ ಟೆಸ್ಟ್ ಚಾಂಪಿಯನ್ ಪಟ್ಟ ಗಳಿಸಿದೆ. ಎರಡು ವರ್ಷಗಳಿಂದ ನಮ್ಮ 22 ಆಟಗಾರರು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಅವರ ಆಟವನ್ನು ಅವರು ಆಡಿದ್ದಾರೆ. ನಾವೆಲ್ಲಾ ಸವಿಯಲು ಇದೊಂದು ವಿಶೇಷ ಸಾಧನೆ ಎಂದು ಕೇನ್ ಸಂತಸ ವ್ಯಕ್ತಪಡಿಸಿದರು.
ಫೈನಲ್ನಲ್ಲಿ ಭಾಗವಹಿಸುವುದು ಸುಲಭವೇನೂ ಆಗಿರಲಿಲ್ಲ. ಎಲ್ಲಾ ದಿನಗಳಲ್ಲಿ ನಮ್ಮನ್ನು ಮುನ್ನಡೆಯಲ್ಲಿಡಲು ನಾವು ಪ್ರಯತ್ನಿಸುತ್ತಿದ್ದೆವು. ಕೇವಲ ನಾಲ್ಕು ದಿನಗಳ ಕ್ರಿಕೆಟ್ ಆಗಿದ್ದ ಕಾರಣ ನಿಖರ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಟ್ಟ ನ್ಯೂಜಿಲೆಂಡ್; ಮುಗ್ಗರಿಸಿದ ಟೀಂ ಇಂಡಿಯಾ
ಕಿವೀಸ್ ತಂಡಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ ವಿಕೆಟ್ ಕೀಪರ್ ಬಿ.ಜೆ.ವಾಟ್ಲಿಂಗ್ ಕುರಿತು ಮಾತನಾಡಿದ ವಿಲಿಯಮ್ಸನ್, ಅವರು ನಿವೃತ್ತಿಯಾಗುತ್ತಾರೆ ಎಂಬುದು ನನಗೆ ತಿಳಿದಿಲ್ಲ. ವಾಟ್ಲಿಂಗ್ ತಂಡದ ವಿಶೇಷ ಸದಸ್ಯ, ಅವರು ತಮ್ಮ ಮನಸ್ಸು ಬದಲಾಯಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.