ETV Bharat / sports

ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ​​: ಕೇನ್​ ವಿಲಿಯಮ್ಸನ್​​ ಆರ್ಭಟ ಕಟ್ಟಿ ಹಾಕ್ತಾರಂತೆ ಬೌಲರ್ ಸಿರಾಜ್​​​ - ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯ ದೃಷ್ಟಿಯಿಂದಲೂ ಸಿರಾಜ್ ಅವರ ಪ್ರದರ್ಶನ ಪ್ರಮುಖವೆನಿಸಿದ್ದು, ನ್ಯೂಜಿಲೆಂಡ್ ಪ್ರವಾಸಕ್ಕೆ ಬೌಲಿಂಗ್ ಪಡೆ ಮೇಲೆ ಹೆಚ್ಚು ನಿರೀಕ್ಷೆ ಇದೆ..

-siraj
ಸಿರಾಜ್​​​
author img

By

Published : Jun 1, 2021, 9:04 PM IST

ಮುಂಬೈ : ಜೂನ್ 18ರಂದು ಸೌತಾಂಪ್ಟನ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಅವಕಾಶ ನೀಡಿದರೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಡಾಟ್ ಎಸೆತಗಳಿಂದ ನಿರಾಸೆಗೊಳಿಸಲು ಪ್ರಯತ್ನಿಸುವುದಾಗಿ ಭಾರತ ಕ್ರಿಕೆಟ್​​​ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ನಾನು ನಿರ್ದಿಷ್ಟ ಡೆಲಿವರಿಗಳ ಮೂಲಕ ಬೌಲಿಂಗ್ ಮಾಡಲು ಯತ್ನಿಸುತ್ತೇನೆ. ನ್ಯೂಜಿಲೆಂಡ್ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ವಿರುದ್ಧ ಡಾಟ್​ ಬಾಲ್​ ಡೆಲಿವರಿ ಮಾಡುವ ಕಡೆ ನಾನು ಗಮನ ಹರಿಸುತ್ತೇನೆ. ಇದು ಬಿರುಸಿನ ಆಟಕ್ಕೆ ಪ್ರಚೋದಿಸುತ್ತದೆ ಎಂದು ಸಿರಾಜ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪಿಚ್​ಗಳು ಹೆಚ್ಚು ಬೌನ್ಸ್ ಹಾಗೂ ವೇಗದ ಪಿಚ್​​ಗಳಾಗಿವೆ. ಆದರೆ, ಇಂಗ್ಲೆಂಡ್ ಪಿಚ್​​ಗಳು ಇದಕ್ಕಿಂತ ಭಿನ್ನ, ಅಲ್ಲಿ ವೇಗಕ್ಕಿಂತ ಸ್ವಿಂಗ್ ಹೆಚ್ಚಾಗಿರುತ್ತದೆ. ಇದರಿಂದ ಬ್ಯಾಟ್ಸ್​ಮನ್ ಮುನ್ನುಗ್ಗಿ ಹೊಡೆಯುವಂತೆ ಮಾಡಲು ಪ್ರಯತ್ನಿಸಬೇಕಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಕಳೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಸಿರಾಜ್​, ಭಾರತದ ಗಾಯಾಳು ಸಮಸ್ಯೆಗೆ ಪರಿಹಾರ ನೀಡಿದ್ದರು. ಅಲ್ಲದೆ ಭಾರತ ಸರಣಿ 2-1ರಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಓದಿ: ಇಂಗ್ಲೆಂಡ್ ಪ್ರವಾಸದ ಒತ್ತಡದಲ್ಲಿದ್ದ ವಿರಾಟ್​ಗೆ ಸಿಹಿ ಸುದ್ದಿ ಕೊಟ್ಟ ಯುಕೆ ಸರ್ಕಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.