ETV Bharat / sports

ದಕ್ಷಿಣ ಆಫ್ರಿಕಾದಲ್ಲಿ ವಿದೇಶಿ ಸವಾಲು ಆನಂದಿಸುತ್ತೇವೆ: ಮಯಾಂಕ್​ ಅಗರ್ವಾಲ್​ ವಿಶ್ವಾಸ - ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಜಯ

ಮಯಾಂಕ್ ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ 150 ಮತ್ತು 62 ರನ್​ಗಳಿಸಿದ್ದರು. ಇವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್​ಗಳ ಅದ್ಭುತ ಪ್ರದರ್ಶನದಿಂದ ಭಾರತ ಕೀವಿಸ್​ ವಿರುದ್ಧ 1-0ಯಲ್ಲಿ ಟೆಸ್ಟ್​ ಸರಣಿ ವಶಪಡಿಸಿಕೊಂಡು ಟೆಸ್ಟ್​ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.

mayank agarwall
ಮಯಾಂಕ್ ಅಗರ್ವಾಲ್
author img

By

Published : Dec 6, 2021, 4:08 PM IST

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧ 2ನೇ ಟೆಸ್ಟ್​ ಪಂದ್ಯದಲ್ಲಿ ಅದ್ದೂರಿ ಪ್ರದರ್ಶನ ತೋರಿದ ಭಾರತದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್​ ತಮ್ಮ ಪ್ರದರ್ಶನವನ್ನು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಮುಂದುವರಿಸುವ ವಿಶ್ವಾದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಮಯಾಂಕ್ ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ 150 ಮತ್ತು 62 ರನ್​ಗಳಿಸಿದ್ದರು. ಇವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್​ಗಳ ಅದ್ಭುತ ಪ್ರದರ್ಶನದಿಂದ ಭಾರತ ಕೀವಿಸ್​ ವಿರುದ್ಧ 1-0ಯಲ್ಲಿ ಟೆಸ್ಟ್​ ಸರಣಿ ವಶಪಡಿಸಿಕೊಂಡು ಟೆಸ್ಟ್​ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.

ಈ ಪಂದ್ಯದಲ್ಲಿ ನಾನು ಎರಡನೇ ಶತಕವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅರ್ಧಶತಕವಾಗಿ ಪರಿವರ್ತಿಸಿದ್ದಕ್ಕೆ ಖುಷಿಯಿದೆ. ನಾವು ದಕ್ಷಿಣ ಆಫ್ರಿಕಾದಲ್ಲಿ ವಿದೇಶಿ ಸವಾಲು ಆನಂದಿಸಲಿದ್ದೇವೆ ಮತ್ತು ಅದಕ್ಕಾಗಿ ನಾವೆಲ್ಲ ಎದುರು ನೋಡುತ್ತಿದ್ದೇವೆ ಎಂದು ಪಂದ್ಯದ ನಂತರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಮಯಾಂಕ್​ ಹೇಳಿದ್ದಾರೆ.

ಈ ಪಂದ್ಯದಲ್ಲಿ ಒಳ್ಳೆಯ ರನ್​ ಗಳಿಸಿದ್ದಕ್ಕಾಗಿ ನನಗೆ ತುಂಬಾ ಖುಷಿಯಾಗುತ್ತಿದೆ. ಈ ಆಟ ನನಗೆ ತುಂಬಾ ವಿಶೇಷವಾಗಿದೆ. ಕಾನ್ಪುರದಿಂದ ಬಂದ ನಂತರ ನಾನೇನು ಹೆಚ್ಚು ಬದಲಾವಣೆ ಮಾಡಿಕೊಳ್ಳಲಿಲ್ಲ. ಬದಲಾಗಿ ಮಾನಸಿಕವಾಗಿ ಶಿಶ್ತು ಮತ್ತು ದೃಢಸಂಕಲ್ಪ ಮಾಡಿದೆ.

ತಂತ್ರಗಾರಿಕೆ ಎಂಬುದು ಯಾವಾಗಲೂ ನಿಮಗೆ ಅತ್ಯುತ್ತಮ ಪ್ರದರ್ಶನವನ್ನು ನೀಡುವುದಿಲ್ಲ. ಅದು ನಿಮಗೆ ರನ್​ಗಳಿಸುವ ಗ್ಯಾರಂಟಿ ಕೂಡ ನೀಡುವುದಿಲ್ಲ. ನೀವು ಹೋರಾಡುವುದಕ್ಕೆ ಅದು ಒಂದು ಅಸ್ತ್ರವಾಗಿರುತ್ತದೆ" ಎಂದು ಮೊದಲ ಪಂದ್ಯದ ವೈಫಲ್ಯದ ನಂತರ ತಾವೂ ಹೇಗೆ ಕಮ್​ಬ್ಯಾಕ್ ಮಾಡಿದರು ಎಂದು ಮಯಾಂಕ್​ ಈ ಸಂದರ್ಭದಲ್ಲಿ ವಿವರಿಸಿದರು.

ಇದನ್ನೂ ಓದಿ:ICC Test rankings: ಟೆಸ್ಟ್​​ ರ‍್ಯಾಂಕಿಂಗ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.