ಫ್ಲೋರಿಡಾ(ಅಮೆರಿಕ): ಸಾಂಘಿಕ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯವನ್ನು 59 ರನ್ಗಳಿಂದ ಜಯಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-1 ರಿಂದ ಕೈವಶ ಮಾಡಿಕೊಂಡಿದೆ. ಇದು ಭಾರತದ 13ನೇ ಸರಣಿ ಜಯ ಅನ್ನೋದು ವಿಶೇಷ.
-
For his match-winning bowling display of 2⃣/1⃣7⃣, @Avesh_6 bags the Player of the Match award as #TeamIndia take an unassailable lead in the T20I series. 👏 👏 #WIvIND
— BCCI (@BCCI) August 6, 2022 " class="align-text-top noRightClick twitterSection" data="
Scorecard ▶️ https://t.co/DNIFgqfRJ5 pic.twitter.com/T33sZ7Gi5i
">For his match-winning bowling display of 2⃣/1⃣7⃣, @Avesh_6 bags the Player of the Match award as #TeamIndia take an unassailable lead in the T20I series. 👏 👏 #WIvIND
— BCCI (@BCCI) August 6, 2022
Scorecard ▶️ https://t.co/DNIFgqfRJ5 pic.twitter.com/T33sZ7Gi5iFor his match-winning bowling display of 2⃣/1⃣7⃣, @Avesh_6 bags the Player of the Match award as #TeamIndia take an unassailable lead in the T20I series. 👏 👏 #WIvIND
— BCCI (@BCCI) August 6, 2022
Scorecard ▶️ https://t.co/DNIFgqfRJ5 pic.twitter.com/T33sZ7Gi5i
ಶನಿವಾರ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಮೈದಾನದಲ್ಲಿ ಭಾರತೀಯರ ಬ್ಯಾಟಿಂಗ್, ಬೌಲಿಂಗ್ ಸಾಮರ್ಥ್ಯ ಸಾಬೀತಾಯಿತು. ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ವಾತಾವರಣದ ಲಾಭ ಪಡೆದು ಗೆಲ್ಲುವ ಗುರಿಯಿಂದ ಮೈದಾನಕ್ಕಿಳಿದ ಕೆರಿಬಿಯನ್ನರ ಎಲ್ಲ ತಂತ್ರಗಳನ್ನೂ ಭಾರತ ಬುಡಮೇಲು ಮಾಡಿತು.
ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟ್ ಬೀಸಿ 33 ರನ್ ಸಂಪಾದಿಸಿದರು. ಸೂರ್ಯಕುಮಾರ್ 24, ದೀಪಕ್ ಹೂಡಾ 21, ರಿಷಬ್ ಪಂತ್ 44, ಸಂಜು ಸ್ಯಾಮ್ಸನ್ 30 ರನ್ ಗಳಿಸಿದರು. ಕೊನೆಯಲ್ಲಿ ಸಿಡಿದ ಅಕ್ಸರ್ ಪಟೇಲ್ 8 ಎಸೆತಗಳಲ್ಲಿ ಸಿಕ್ಸರ್, ಬೌಂಡರಿಗಳ ಸಮೇತ 20 ರನ್ ಕೊಡುಗೆ ನೀಡಿದರು.
ನಿಗದಿತ 20 ಓವರ್ಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 191 ರನ್ ಪೇರಿಸಿತು. ಸರಣಿಯಲ್ಲಿ ಕಾಡಿದ್ದ ಒಬೆಡ್ ಮೆಕಾಯ್ ಈ ಪಂದ್ಯದಲ್ಲಿ ದುಬಾರಿಯಾದರು. 4 ಓವರ್ಗಳ ಕೋಟಾದಲ್ಲಿ 66 ರನ್ ಚಚ್ಚಿಸಿಕೊಂಡು 2, ಅಲ್ಜಾರಿ ಜೋಸೆಫ್ 2 ವಿಕೆಟ್ ಕಿತ್ತರು.
ವಿಂಡೀಸ್ ಪೆವಿಲಿಯನ್ ಪರೇಡ್: ಕಠಿಣ ಗುರಿ ಬೆನ್ನತ್ತಿದ ವಿಂಡೀಸ್ ಸತತವಾಗಿ ವಿಕೆಟ್ ಕಳೆದುಕೊಂಡಿತು. ರಾವೊಮನ್ ಪೊವೆಲ್ 24, ನಿಕೋಲಸ್ ಪೂರನ್ 24 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಭಾರತೀಯ ಬೌಲರ್ಗಳ ಮುಂದೆ ತಂಡದ ಯಾವೊಬ್ಬ ಬ್ಯಾಟರ್ ಕೂಡಾ ರಟ್ಟೆ ಬಿಚ್ಚಲಿಲ್ಲ.
ಭಾರತದ ಭರ್ಜರಿ ಬೌಲಿಂಗ್: ವಿಂಡೀಸ್ ಆಟಗಾರರ ವಿರುದ್ಧ ನಿಜಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದು ಭಾರತೀಯರ ಬೌಲರ್ಗಳು. ಇನಿಂಗ್ಸ್ನ ಮೊದಲು ಎಸೆತದಿಂದಲೂ ಕಾಡಿದ ಬೌಲರ್ಗಳು ಯಾವುದೇ ಸಮಯದಲ್ಲಿಯೂ ಕೆರಿಬಿಯನ್ ದೈತ್ಯರು ಸಿಡಿಯದಂತೆ ತಡೆದರು. ಐಪಿಎಲ್ ಸ್ಟಾರ್ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ಅವೇಶ್ ಖಾನ್, ರವಿ ಬಿಷ್ಣೋಯಿ, ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದು ಕೆರಿಬಿಯನ್ನರನ್ನು 19.1 ಓವರ್ಗಳಲ್ಲಿ 132 ರನ್ಗಳಿಗೆ ಕಟ್ಟಿಹಾಕಿದರು.
ಸಂಕ್ಷಿಪ್ತ ಸ್ಕೋರ್: ಭಾರತ 191/5 (ರಿಷಭ್ ಪಂತ್ 44, ರೋಹಿತ್ ಶರ್ಮಾ 33, ಅಲ್ಜಾರಿ ಜೋಸೆಫ್ 2-29) ವೆಸ್ಟ್ ಇಂಡೀಸ್ 132-10 (ನಿಕೋಲಸ್ ಪೂರನ್ 24, ರೋವ್ಮನ್ ಪೊವೆಲ್ 24, ಅರ್ಷದೀಪ್ ಸಿಂಗ್ 3-12)
ಇದನ್ನೂ ಓದಿ: CWG 2022: ಇತಿಹಾಸ ಸೃಷ್ಟಿಸಿದ ವಿನೇಶ್ ಫೋಗಟ್... ಹ್ಯಾಟ್ರಿಕ್ ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು