ETV Bharat / sports

ವಿರಾಟ್​ ಕೂಡ ಮನುಷ್ಯ, ಶ್ರೇಷ್ಠ ಆಟಗಾರನ ಬಗ್ಗೆ ಯಾಕಿಷ್ಟು ಪ್ರಶ್ನೆ: ಜೋಸ್ ಬಟ್ಲರ್ ಅಚ್ಚರಿ

ಎದುರಾಳಿ ನಾಯಕನಾಗಿ ಮೇಲ್ದರ್ಜೆಯ ಆಟಗಾರನೊಬ್ಬ ತಮ್ಮ ವಿರುದ್ಧ ಉತ್ತಮ ಪ್ರದರ್ಶನ ನೀಡಬಾರದು ಎಂಬುದೇ ನಮ್ಮ ಆಶಯವಾಗಿರುತ್ತದೆ. ಆದರೆ ನಾನು ಹೇಳಿದಂತೆ, ಭಾರತಕ್ಕಾಗಿ ಗೆದ್ದ ಪಂದ್ಯಗಳು, ಕೊಹ್ಲಿ ದಾಖಲೆಗಳೇ ಸ್ವತಃ ಮಾತನಾಡುತ್ತವೆ ಎಂದು ಜೋಸ್ ಬಟ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"Why Would You Question That?": Jos Buttler Backs Virat Kohli
ವಿರಾಟ್​ ಕೂಡ ಮನುಷ್ಯ, ಶ್ರೇಷ್ಠ ಆಟಗಾರನ ಬಗ್ಗೆ ಯಾಕಿಷ್ಟು ಪ್ರಶ್ನೆ: ಜೋಸ್ ಬಟ್ಲರ್ ಅಚ್ಚರಿ
author img

By

Published : Jul 15, 2022, 11:27 AM IST

Updated : Jul 15, 2022, 11:34 AM IST

ಲಾರ್ಡ್ಸ್​: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ದಿನದಿಂದ ದಿನಕ್ಕೆ ಚರ್ಚೆ ಕಾವೇರುತ್ತಲೇ ಇದೆ. ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ವೈಫಲ್ಯತೆ ಕಂಡ ವಿರಾಟ್​​​ 16 ರನ್ ಗಳಿಸಿ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ. ಭಾರತದ ನಾಯಕ ರೋಹಿತ್​ ಶರ್ಮಾ ಬಳಿಕ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕೂಡ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಕೊಹ್ಲಿ ಈ ಹಿಂದೆ ಬಹಳಷ್ಟು ರನ್ ಗಳಿಸಿದ್ದರೂ ಕೂಡ ಅವರ ಬಗ್ಗೆ ಯಾಕಿಷ್ಟು ಪ್ರಶ್ನೆ ಕೇಳಿಬರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬಟ್ಲರ್ ಹೇಳಿದ್ದಾರೆ.

ಏರಡನೇ ಏಕದಿನ ಪಂದ್ಯದಲ್ಲಿ 100 ರನ್​ಗಳಿಂದ ಭಾರತವನ್ನು ಮಣಿಸಿ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದ ಇಂಗ್ಲೆಂಡ್​ ನಾಯಕ ಜೋಸ್ ಬಟ್ಲರ್ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಕೊಹ್ಲಿ ಕೂಡ ಮನುಷ್ಯ ಮತ್ತು ಒಂದೆರಡು ಕಡಿಮೆ ಸ್ಕೋರ್‌ ಗಳಿಸಿರಬಹುದು, ಆದರೆ ಅವರೊಬ್ಬ ಅತ್ಯುತ್ತಮ ಆಟಗಾರ. ಅದರಲ್ಲೂ ಏಕದಿನ ಕ್ರಿಕೆಟ್​ನಲ್ಲೇ ವಿಶ್ವದಲ್ಲೇ ಶ್ರೇಷ್ಠ ಬ್ಯಾಟರ್​ ಅಗಿದ್ದಾರೆ. ಹಲವು ವರ್ಷಗಳಿಂದ ಅದ್ಭುತ ಪ್ಲೇಯರ್​ ಆಗಿದ್ದಾರೆ. ಕೆಲವೊಮ್ಮೆ ಫಾರ್ಮ್‌ ಇರದೆ, ಕೆಲವು ಸಲ ರನ್​​ ಗಳಿಸದೆ ಇರಬಹುದು ಹಾಗೂ ಗಳಿಸಲೂಬಹುದು" ಎಂದು ಹೇಳಿದ್ದಾರೆ.

"ಆದರೆ ನಿಸ್ಸಂದೇಹವಾಗಿ, ಎದುರಾಳಿ ನಾಯಕನಾಗಿ ಮೇಲ್ದರ್ಜೆಯ ಆಟಗಾರನೊಬ್ಬ ತಮ್ಮ ವಿರುದ್ಧ ಉತ್ತಮ ಪ್ರದರ್ಶನ ನೀಡಬಾರದು ಎಂಬುದೇ ನಮ್ಮ ಆಶಯವಾಗಿರುತ್ತದೆ. ಆದರೆ ನಾನು ಹೇಳಿದಂತೆ, ಭಾರತಕ್ಕಾಗಿ ಗೆದ್ದ ಪಂದ್ಯಗಳು, ಅವರ ದಾಖಲೆಗಳೇ ಸ್ವತಃ ಮಾತನಾಡುತ್ತವೆ. ಆದರೀಗ ಯಾಕೆ ಅವರನ್ನೇ ಪ್ರಶ್ನಿಸಲಾಗುತ್ತಿದೆ ಎಂಬುದು, ನನಗೆ ನಂಬಲಾಗದಷ್ಟು ಆಶ್ಚರ್ಯ ತಂದಿದೆ" ಎಂದರು.

ಇದೇ ವೇಳೆ ಮತ್ತೊಮ್ಮೆ ಮಾಜಿ ನಾಯಕನ ಬೆಂಬಲಕ್ಕೆ ನಿಂತಿರುವ ರೋಹಿತ್​ ಶರ್ಮಾ, "ಕೊಹ್ಲಿ ಹಲವು ಪಂದ್ಯಗಳನ್ನು ಆಡಿದ್ದಾರೆ, ಅವರು ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಶ್ರೇಷ್ಠ ಬ್ಯಾಟ್ಸ್‌ಮನ್ ಆದ್ದರಿಂದ ಅವರಿಗೆ ಧೈರ್ಯದ ಅಗತ್ಯವಿಲ್ಲ" ಎಂದು ರೋಹಿತ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

"ಈ ಹಿಂದಿನ ಮಾಧ್ಯಮಗೋಷ್ಠಿಯಲ್ಲಿಯೂ ನಾನು ಇದೇ ವಿಚಾರವನ್ನು ಹೇಳಿದ್ದೇನೆ. ಆಟಗಾರನ ಫಾರ್ಮ್​ನಲ್ಲಿ ಏರಿಳಿತಗಳು ಸಾಮಾನ್ಯ, ಅದು ಯಾವುದೇ ಕ್ರಿಕೆಟಿಗನ ವೃತ್ತಿಜೀವನದ ಭಾಗವಾಗಿದೆ. ಆದ್ದರಿಂದ, ಇಷ್ಟು ವರ್ಷಗಳ ಕಾಲ ಆಡಿ ಸಾಕಷ್ಟು ರನ್ ಗಳಿಸಿ ಅನೇಕ ಪಂದ್ಯ ಗೆದ್ದಿರುವ ಕೊಹ್ಲಿಗೆ ಫಾರ್ಮ್​ಗೆ ಮರಳಲು ಕೇವಲ ಒಂದೆರಡು ಉತ್ತಮ ಇನ್ನಿಂಗ್ಸ್ ಅಗತ್ಯವಿದೆ. ಇದು ನನ್ನ ಯೋಚನೆ ಮತ್ತು ಕ್ರಿಕೆಟ್ ಪ್ರೇಮಿಗಳೆಲ್ಲರೂ ಇದೇ ರೀತಿ ಯೋಚಿಸುತ್ತಾರೆ" ಎಂದು ರೋಹಿತ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲಾರ್ಡ್ಸ್‌ನಲ್ಲಿ ಟಾಪ್ಲಿ 'ಚೆಂಡು'ಮಾರುತ: ಭಾರತದ ವಿರುದ್ಧ 100 ರನ್‌ಗಳಿಂದ ಗೆದ್ದ ಇಂಗ್ಲೆಂಡ್‌

Last Updated : Jul 15, 2022, 11:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.