ಥಾಯ್ಲೆಂಡ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ಉಂಟಾಗಿದೆ.
ಇಂದು ಬೆಳಗ್ಗೆಯಷ್ಟೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ರಾಡ್ನ್ ಮಾರ್ಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಶೇನ್ ವಾರ್ನ್, ನಿನ್ನೆ ಉಕ್ರೇನ್ ಯುದ್ಧದ ಬಗ್ಗೆ ಟ್ವೀಟ್ ಮಾಡಿದ್ದರು.
ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿದ್ದ ಶೇನ್ ವಾರ್ನ್, ಇಡೀ ಜಗತ್ತೇ ಉಕ್ರೇನ್ ಜೊತೆಗಿದೆ. ರಷ್ಯಾದ ದಾಳಿ ಅಪ್ರಚೋದಿತ, ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಜೊತೆಗೆ, ಯುದ್ಧ ತಡೆಯಲು ಏನೂ ಮಾಡಲಾಗುತ್ತಿಲ್ಲ ಎಂಬುದನ್ನು ನಂಬಲಸಾಧ್ಯ ಎಂದಿದ್ದರು.
-
The entire world is with the people of Ukraine as they suffer an unprovoked and unjustified attack by Russian military forces. The pictures are horrific and I can’t believe more is not being done to stop this. Sending lots of love to my Ukrainian mate @jksheva7 and his family ❤️
— Shane Warne (@ShaneWarne) February 26, 2022 " class="align-text-top noRightClick twitterSection" data="
">The entire world is with the people of Ukraine as they suffer an unprovoked and unjustified attack by Russian military forces. The pictures are horrific and I can’t believe more is not being done to stop this. Sending lots of love to my Ukrainian mate @jksheva7 and his family ❤️
— Shane Warne (@ShaneWarne) February 26, 2022The entire world is with the people of Ukraine as they suffer an unprovoked and unjustified attack by Russian military forces. The pictures are horrific and I can’t believe more is not being done to stop this. Sending lots of love to my Ukrainian mate @jksheva7 and his family ❤️
— Shane Warne (@ShaneWarne) February 26, 2022
ಇದನ್ನೂ ಓದಿ: ಶೇನ್ ವಾರ್ನ್ ಕಳೆದುಕೊಂಡ ಕ್ರಿಕೆಟ್‌ಲೋಕ: ಸ್ಪಿನ್ ಮಾಂತ್ರಿಕನ ಸಾವಿಗೆ ಜಗತ್ತಿನೆಲ್ಲೆಡೆ ಕಂಬನಿ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪರೂಪದ ಸಾಧನೆ ಮಾಡಿರುವ ಶೇನ್ ವಾರ್ನ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ನಂತರ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ವಾರ್ನ್ 16 ವರ್ಷಗಳ ವೃತ್ತಿ ಜೀವನದಲ್ಲಿ 145 ಟೆಸ್ಟ್ ಮೂಲಕ 708 ವಿಕೆಟ್ ಪಡೆದಿದ್ದಾರೆ. 1999ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯನ್ ತಂಡದ ಭಾಗವಾಗಿದ್ದರು.