ಲಾಡರ್ ಹಿಲ್, ಫ್ಲೋರಿಡಾ: ಕಳೆದ ಪಂದ್ಯದಲ್ಲಿ ರನ್‌ಗಳ ಸುರಿಮಳೆ ಸುರಿಸಿದ ಇದೇ ಮೈದಾನದಲ್ಲಿ ಭಾರತಕ್ಕೆ ಈ ಬಾರಿ ಅತ್ಯಾಧಿಕ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಅವರ ಅರ್ಧಶತಕ ವ್ಯರ್ಥವಾಯಿತು. 2016ರ ನಂತರ ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಬ್ಯಾಟಿಂಗ್ನಲ್ಲಿ ಆಕ್ರಮಣಕಾರಿ ಆಟದ ಕೊರತೆಯ ವೈಫಲ್ಯದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಐದನೇ ಟಿ-20 ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ಗಳ ಸೋಲು ಕಂಡಿದೆ.
-
Drought broken 👏
— ICC (@ICC) August 14, 2023 " class="align-text-top noRightClick twitterSection" data="
The West Indies claim T20I series bragging rights over India in Florida!
More from #WIvIND 👇https://t.co/dvEJ9cwGIw
">Drought broken 👏
— ICC (@ICC) August 14, 2023
The West Indies claim T20I series bragging rights over India in Florida!
More from #WIvIND 👇https://t.co/dvEJ9cwGIwDrought broken 👏
— ICC (@ICC) August 14, 2023
The West Indies claim T20I series bragging rights over India in Florida!
More from #WIvIND 👇https://t.co/dvEJ9cwGIw
ಭಾನುವಾರ ಭಾರತ 9 ವಿಕೆಟ್‌ಗೆ 165 ರನ್ ಗಳಿಸಿತ್ತು. ಸೂರ್ಯಕುಮಾರ್ 61 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರೊಮಾರಿಯೊ ಶೆಫರ್ಡ್ ನಾಲ್ಕು ವಿಕೆಟ್ ಮತ್ತು ಅಕೀಲ್ ಹೊಸೈನ್ 2 ವಿಕೆಟ್ಗಳನ್ನು ಪಡೆಯುವ ಮೂಲಕ ಭಾರತವನ್ನು ಕಟ್ಟಿಹಾಕಿದರು. ಬ್ರೆಂಡನ್ ಕಿಂಗ್ ಅಜೇಯರಾಗಿ 85 ರನ್ ಮತ್ತು ಪೂರನ್ 47 ರನ್ ಗಳಿಸಿ ಮಿಂಚಿದ್ದರಿಂದ ವೆಸ್ಟ್ ಇಂಡೀಸ್ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಟಿ-20 ಸರಣಿಯನ್ನು ಕಳೆದುಕೊಂಡಿರುವುದು ಇದೇ ಮೊದಲು. ಅವರ ನಾಯಕತ್ವದಲ್ಲಿ ಭಾರತ ಈ ಹಿಂದೆ ನಾಲ್ಕು ಸರಣಿಗಳನ್ನು ಗೆಲುವು ಸಾಧಿಸಿರುವುದು ಗಮನಾರ್ಹ.
ಭಾರತಕ್ಕೆ ಆರಂಭಿಕ ಆಘಾತ: ಟಾಸ್ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕಳೆದ ಪಂದ್ಯದ ಹೀರೋಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಭಾರಿ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದರು. ಆದರೆ, ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆರಂಭಿಕರಿಬ್ಬರೂ ಮೂರು ಓವರ್‌ಗಳಲ್ಲಿ ಪೆವಿಲಿಯನ್ ಹಾದಿ ಹಿಡಿದರು. ಇಬ್ಬರನ್ನೂ ಸ್ಪಿನ್ನರ್ ಅಕೀಲ್ ಹೊಸೇನ್ ವಿಕೆಟ್ ಪಡೆದು ಮಿಂಚಿದರು. ಮೂರು ಓವರ್‌ಗಳಲ್ಲಿ 17 ರನ್‌ಗಳಿಗೆ ಎರಡು ವಿಕೆಟ್‌ಗಳು ಪತನಗೊಂಡರೂ, ಭಾರತ 6 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ಗಳನ್ನು ಕಳೆದುಕೊಂಡು 51 ರನ್ಗಳನ್ನು ಕಲೆ ಹಾಕಿತ್ತು.
ಆತ್ಮವಿಶ್ವಾಸದಿಂದ ಆಡಿದ ಸೂರ್ಯ ಮತ್ತು ತಮ್ಮ ಆಕರ್ಷಕ ಆಟವನ್ನು ಮುಂದುವರಿಸಿದ ತಿಲಕ್ ವರ್ಮಾ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮ ವಹಿಸಿದರು. ಆದರೆ ತಿಲಕ ವರ್ಮಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 18 ಎಸೆತಗಳಲ್ಲಿ 27 ರನ್ ಗಳಿಸಿದ ತಿಲಕ್ ಚೇಸ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಸಂಜು ಸ್ಯಾಮ್ಸನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ 13 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಸಹ ನಿಧಾನಗತಿ ಬ್ಯಾಟಿಂಗ್ ಮಾಡಿ 18 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು.
ಭಾರತ ತಂಡ 11ರಿಂದ 16 ಓವರ್‌ಗಳ ನಡುವೆ ಕೇವಲ 37 ರನ್ ಗಳಿಸಿತ್ತು. ಕೊನೆಯ ನಾಲ್ಕು ಓವರ್‌ಗಳಲ್ಲಿ ಟೀಂ ಇಂಡಿಯಾ ಐದು ವಿಕೆಟ್ ಕಳೆದುಕೊಂಡಿತು. ಒಟ್ಟಿನಲ್ಲಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 165 ರನ್ಗಳನ್ನು ಕಲೆ ಹಾಕಿ ವೆಸ್ಟ್ ಇಂಡೀಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು.
ಭಾರತದ ವಿರುದ್ಧ ಅಬ್ಬರಿಸಿದ ವೆಸ್ಟ್ ಇಂಡೀಸ್: ಭಾರತ ತಂಡದ ಬೌಲರ್ಗಳು ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡಿತು. ವೆಸ್ಟ್ ಇಂಡೀಸ್ ಇನಿಂಗ್ಸ್ನ ಎರಡನೇ ಓವರ್ನಲ್ಲಿ ಮೇಯರ್ಸ್ (10) ಅವರನ್ನು ಅರ್ಷದೀಪ್ ಔಟ್ ಮಾಡಿದರು. ಆದರೆ, ಕಿಂಗ್ ಜೊತೆಗೂಡಿದ್ದ ಪೂರನ್ ಭಾರತ ತಂಡ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ತಮ್ಮದೇ ಶೈಲಿಯಲ್ಲಿ ಸ್ಕೋರ್ ಬೋರ್ಡ್ ಓಡುವಂತೆ ಮಾಡಿದರು. ಮತ್ತೊಂದೆಡೆ, ಕಿಂಗ್ ಕೂಡ ಸಿಡಿದರು. ವೆಸ್ಟ್ ಇಂಡೀಸ್ ತಂಡ ಏಳು ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 71 ರನ್ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು.
ಆತಿಥೇಯರು ತಮ್ಮ ಶಕ್ತಿಶಾಲಿ ಬ್ಯಾಟಿಂಗ್ ಮುಂದುವರಿಸಿದ್ದರಿಂದ ವಿಂಡೀಸ್ ಗುರಿಯತ್ತ ಸುಲಭವಾಗಿ ಸಾಗಿತು. ಹವಾಮಾನ ವೈಪರೀತ್ಯದಿಂದ ಪಂದ್ಯವನ್ನು 12.3 ಓವರ್‌ಗಳಲ್ಲಿ ನಿಲ್ಲಿಸಲಾಯಿತು. ಆಗ ಸ್ಕೋರ್ 117/1 ಆಗಿತ್ತು. 40 ನಿಮಿಷಗಳ ವಿರಾಮದ ನಂತರ ಆಟ ಪುನಾರಂಭವಾಯಿತು. ತಿಲಕ್ ವರ್ಮಾ ಅವರ ಬೌಲಿಂಗ್‌ನಲ್ಲಿ ಪೂರನ್ ಔಟ್ ಆದರು. ದಾಳಿ ಮುಂದುವರಿಸಿದ ಕಿಂಗ್ ಮತ್ತು ಹೋಪ್ ಜತೆಗೂಡಿ ವೆಸ್ಟ್ ಇಂಡೀಸ್ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಒಟ್ಟಿನಲ್ಲಿ ವೆಸ್ಟ್ ಇಂಡೀಸ್ ತಂಡ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ಗಳನ್ನು ಕಲೆ ಹಾಕುವ ಮೂಲಕ ಭಾರತ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ವೆಸ್ಟ್ ಇಂಡೀಸ್ ಪರ ಕಿಂಗ್ ಔಟಾಗದೇ 85 ರನ್, ಮೇಯರ್ಸ್ 10 ರನ್, ಪೂರನ್ 47 ರನ್ ಮತ್ತು ಹೋಪ್ ಔಟಾಗದೆ 22 ರನ್ ಗಳಿಸಿ ಮಿಂಚಿದರು. ಭಾರತ ತಂಡದ ಪರ, ಅರ್ಷದೀಪ್ ಮತ್ತು ತಿಲಕ್ ವರ್ಮಾ ತಲಾ ಒಂದೊಂದು ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ತಂಡ ಏಳು ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿಯನ್ನು ಗೆದ್ದುಕೊಂಡಿದೆ.
ಓದಿ: IND vs WI 5th T20: ಸೂರ್ಯಕುಮಾರ್ ಅರ್ಧಶತಕ; ವೆಸ್ಟ್ ಇಂಡೀಸ್ಗೆ 166 ರನ್ ಗುರಿ