ಲಾಡರ್‌ಹಿಲ್ (ಫ್ಲೋರಿಡಾ): ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಸಿರೀಸ್ ಅನ್ನು ಜೀವಂತವಾಗಿ ಉಳಿಸಿಕೊಂಡಿದೆ. ಹೀಗಾಗಿ ನಾಲ್ಕು ಮತ್ತು ಐದನೇ ಟಿ20 ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಆದರೆ ಭಾರತ ಮುಂದಿನ ಎರಡು ಪಂದ್ಯಗಳನ್ನೂ ಗೆಲ್ಲಬೇಕಾದಲ್ಲಿ ತಂಡದಲ್ಲಿ ಬಹಳಷ್ಟು ಸುಧಾರಣೆ ಮಾಡಿಕೊಳ್ಳಬೇಕಿದೆ.
ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1 ರಿಂದ ಮುನ್ನಡೆಯಲ್ಲಿದೆ. ಮುಂದಿನ ಎರಡೂ ಪಂದ್ಯಗಳು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಸ್ಟೇಡಿಯಂನಲ್ಲಿ ನಡೆಯಲಿವೆ. ಭಾರತ ಸರಣಿ ವಶಪಡಿಸಿಕೊಳ್ಳಲು ಎರಡೂ ಪಂದ್ಯವನ್ನು ಗೆಲ್ಲಲೇಬೇಕು. ವಿಂಡೀಸ್ ಒಂದು ಗೆಲುವಿಗಾಗಿ ಎದುರು ನೋಡುತ್ತಿದೆ.
-
The coaching staff took a minute to share some tips to the net bowlers that assisted us this morning.
— Windies Cricket (@windiescricket) August 10, 2023 " class="align-text-top noRightClick twitterSection" data="
Thanks boys!👊🏽#WIvIND #MenInMaroon pic.twitter.com/I8RM3LAdyd
">The coaching staff took a minute to share some tips to the net bowlers that assisted us this morning.
— Windies Cricket (@windiescricket) August 10, 2023
Thanks boys!👊🏽#WIvIND #MenInMaroon pic.twitter.com/I8RM3LAdydThe coaching staff took a minute to share some tips to the net bowlers that assisted us this morning.
— Windies Cricket (@windiescricket) August 10, 2023
Thanks boys!👊🏽#WIvIND #MenInMaroon pic.twitter.com/I8RM3LAdyd
ಆರಂಭಿಕರ ವೈಫಲ್ಯ: ಮೂರನೇ ಪಂದ್ಯಕ್ಕೆ ಇಶಾನ್ ಕಿಶನ್ ಅವರನ್ನು ಕೂರಿಸಿ ಯಶಸ್ವಿ ಜೈಸ್ವಾಲ್ಗೆ ಅವಕಾಶ ಮಾಡಿಕೊಡಲಾಯಿತು. ಆದರೆ ಜೈಸ್ವಾಲ್ ಯಶಸ್ವಿ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅತ್ತ ಯುವ ಬ್ಯಾಟರ್ ಶುಭಮನ್ ಗಿಲ್ ಸಹ ಮೂರು ಟಿ20ಯಲ್ಲಿ ವಿಫಲರಾಗಿದ್ದಾರೆ. ಮೂರು ಪಂದ್ಯದಲ್ಲಿ ಆರಂಭಿಕ ಜೊತೆಯಾಟವೇ ಮೂಡಿಬಂದಿಲ್ಲ. ಐಪಿಎಲ್ನಲ್ಲಿ ಮಿಂಚಿದ್ದ ಮೂವರು ಆಟಗಾರರೂ ಸಹ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲರಾಗಿದ್ದಾರೆ. ನಾಲ್ಕನೇ ಪಂದ್ಯಕ್ಕೆ ಗಿಲ್ಗೆ ಕೊಕ್ ಕೊಟ್ಟು ಮತ್ತು ಇಶಾನ್ ಸ್ಥಾನ ಪಡೆಯುತ್ತಾರಾ ಅಥವಾ ಪ್ರಿನ್ಸ್ಗೆ ಇನ್ನೊಂದು ಅವಕಾಶ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಸೂರ್ಯ, ತಿಲಕ್ ಭರವಸೆ: ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೂರು ಪಂದ್ಯದಲ್ಲಿ ಕ್ರಮವಾಗಿ 39,51, ಮತ್ತು 49 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದಾರೆ. ಮೂರನೇ ಪಂದ್ಯದಲ್ಲಿ ಬಿರುಸಿನ ಆಟವಾಡಿ ಫಾರ್ಮ್ಗೆ ಮರಳಿರುವ ಟಿ20 ನಂ.01 ಬ್ಯಾಟರ್ ಸೂರ್ಯ ಕುಮಾರ್ ಯಾದವ್ ನಾಲ್ಕನೇ ಪಂದ್ಯಕ್ಕೂ ಭರವಸೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ಸೂರ್ಯ 188 ರ ಸ್ಟ್ರೈಕ್ರೇಟ್ನಲ್ಲಿ 83 ರನ್ ಗಳಿಸಿದ್ದರು. ಇದರಿಂದ ಭಾರತ ಎರಡು ಓವರ್ ಉಳಿಸಿಕೊಂಡು ಪಂದ್ಯ ಗೆದ್ದಿತ್ತು. ಇವರ ಜೊತೆ ಹಾರ್ದಿಕ್ ಪಾಂಡ್ಯ ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕ ಬಲವಾಗಿ ಕಂಡು ಬರುತ್ತಿದೆ.
-
Watch the action in Florida.📲 #WIvIND #WIHOME #KuhlT20 pic.twitter.com/D6vpEP45MW
— Windies Cricket (@windiescricket) August 11, 2023 " class="align-text-top noRightClick twitterSection" data="
">Watch the action in Florida.📲 #WIvIND #WIHOME #KuhlT20 pic.twitter.com/D6vpEP45MW
— Windies Cricket (@windiescricket) August 11, 2023Watch the action in Florida.📲 #WIvIND #WIHOME #KuhlT20 pic.twitter.com/D6vpEP45MW
— Windies Cricket (@windiescricket) August 11, 2023
ವೇಗಿಗಳ ವಿಚಾರ : ವಿಂಡೀಸ್ ಬ್ಯಾಟರ್ಗಳು ವೇಗದ ಬೌಲರ್ಗಳನ್ನು ಸುಲಭವಾಗಿ ದಂಡಿಸುತ್ತಿದ್ದಾರೆ. ಕಳೆದ ಮೂರು ಪಂದ್ಯದಲ್ಲೂ ವೇಗಿಗಳು ದುಬಾರಿಯಾಗಿದ್ದರು. ಮೂರನೇ ಪಂದ್ಯದಲ್ಲಿ ಕೊನೆಯ ಎರಡು ಓವರ್ನಲ್ಲಿ ವೇಗಿಗಳು ರನ್ ಬಿಟ್ಟುಕೊಟ್ಟಿದ್ದರಿಂದ 160ರ ಗುರಿಯನ್ನು ಭಾರತ ಪಡೆದುಕೊಂಡಿತು. ಇಲ್ಲವಾದಲ್ಲಿ 140ರ ಆಸುಪಾಸಿನಲ್ಲಿ ವಿಂಡೀಸ್ ಅನ್ನು ನಿಯಂತ್ರಿಸಬಹುದಿತ್ತು. ಡೆತ್ ಓವರ್ ಕಂಟ್ರೋಲ್ ಪ್ರತಿ ಪಂದ್ಯದಲ್ಲೂ ತಪ್ಪುತ್ತಿದ್ದು ಇದನ್ನು ತಿದ್ದಿಕೊಳ್ಳಬೇಕಿದೆ.
ಫಾರ್ಮ್ಗೆ ಬರ್ತಿದ್ದಾರೆ ವಿಂಡೀಸ್ ಆಟಗಾರರು: ಮೊದಲೆರಡು ಪಂದ್ಯದಲ್ಲಿ ಪೂರನ್ ಮತ್ತು ಪೊವೆಲ್ ಮಾತ್ರ ಫಾರ್ಮ್ನಲ್ಲಿದ್ದರು. ಈ ಇಬ್ಬರು ಬ್ಯಾಟರ್ಗಳನ್ನು ನಿಯಂತ್ರಿಸಿದರೆ ಭಾರತಕ್ಕೆ ಗೆಲುವು ಖಚಿತ ಎಂಬಂತಿತ್ತು. ಆದರೆ ಈಗ ವಿಂಡೀಸ್ನ ಆರಂಭಿಕ ಆಟಗಾರರೂ ಫಾರ್ಮ್ಗೆ ಮರಳಿದ್ದಾರೆ. ಬ್ರಾಂಡನ್ ಕಿಂಗ್ ಕಳೆದ ಪಂದ್ಯದಲ್ಲಿ 42 ರನ್ ಗಳಿಸಿ ಉತ್ತಮ ಆರಂಭವನ್ನು ವಿಂಡೀಸ್ಗೆ ನೀಡಿದ್ದರು. ಪೂರನ್ ಯಾವುದೇ ಸಮಯದಲ್ಲು ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮೂರನೇ ಪಂದ್ಯದಲ್ಲಿ ಡೆತ್ ಓವರ್ನಲ್ಲಿ ಪೋವೆಲ್ ಟೀಂ ಇಂಡಿಯಾದ ಬೌಲರ್ಗಳನ್ನು ಕಾಡಿದ್ದರು. ಹಾರ್ದಿಕ್ ಪಡೆ ಈ ಮೂವರನ್ನು ನಿಯಂತ್ರಿಸಿದಲ್ಲಿ ಸರಣಿ ಸಮಬಲ ಸಾಧಿಸಬಹುದು.
ಪಿಚ್ ರಿಪೋರ್ಟ್ : ಸ್ಪಿನ್ ಫೇವರ್ ಪಿಚ್ ಇದಾಗಿದ್ದು, ಟಾಸ್ ಗೆದ್ದ ನಾಯಕ ಬ್ಯಾಟಿಂಗ್ ಮಾಡುವುದು ಇಲ್ಲಿನ ಮೊದಲ ಆಯ್ಕೆ. ಏಕೆಂದರೆ ಮೊದಲು ಬ್ಯಾಟಿಂಗ್ ಮಾಡಿದ ತಂಡ ಉತ್ತಮ ರನ್ ಗಳಿಸಿದ ನಿದರ್ಶನಗಳಿವೆ. ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಟಫ್ ಆಗಲಿದ್ದು ರನ್ ಗಳಿಸಲು ಕಷ್ಟ ಪಡಬೇಕಾಗುತ್ತದೆ.
ಸಂಭಾವ್ಯ ತಂಡ.. ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್
ವೆಸ್ಟ್ ಇಂಡೀಸ್ : ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್, ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ರೋಸ್ಟನ್ ಚೇಸ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಪಂದ್ಯ ಎಲ್ಲಿ, ಯಾವಾಗ?: ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಸ್ಟೇಡಿಯಂನಲ್ಲಿ ನಾಳೆ ಭಾರತೀಯ ಕಾಲಮಾನ 8ಕ್ಕೆ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾ, ಡಿಡಿ ಚಂದನ ಮತ್ತು ಡಿಡಿ ಸ್ಪರ್ಟ್ಸ್ನಲ್ಲಿ ನೇರಪ್ರಸಾರ ಲಭ್ಯ.
ಇದನ್ನೂ ಓದಿ: Kane Williamson: ವಿಶ್ವಕಪ್ಗೂ ಮುನ್ನವೇ ಕಿವೀಸ್ ನಾಯಕ ವಿಲಿಯಮ್ಸನ್ ಕಮ್‌ಬ್ಯಾಕ್