ETV Bharat / sports

ರಾಷ್ಟ್ರೀಯ ತಂಡದಲ್ಲಿ ಆಡಲು ನಿರಾಸಕ್ತಿ: ಲೀಗ್​​ಗಳಲ್ಲಿ ಹೆಚ್ಚು ಸಂಪಾದನೆ ಪಡೆಯುತ್ತಿರುವ ಕೆರಿಬಿಯನ್​ ಆಟಗಾರರು

author img

By

Published : Jul 3, 2023, 7:29 PM IST

Updated : Jul 3, 2023, 8:22 PM IST

ಲೀಗ್​​ಗಳಲ್ಲಿ ಹೆಚ್ಚು ಸಂಪಾದನೆ ಪಡೆಯುತ್ತಿರುವ ಕೆರಿಬಿಯನ್​ ಆಟಗಾರರು ರಾಷ್ಟ್ರೀಯ ತಂಡದತ್ತ ಮುಖ ಮಾಡುತ್ತಿಲ್ಲವಂತೆ. ವರ್ಷದ ಕೆಲ ತಿಂಗಳು ಲೀಗ್​ ಆಡಿ ರಾಷ್ಟ್ರೀಯ ತಂಡದ ವೇತನ್ಕಕಿಂತ ದುಪ್ಪಟ್ಟು ಸಂಪಾದನೆ ಮಾಡುತ್ತಿದ್ದಾರೆ.

Cricket West Indies
Cricket West Indies

ವೆಸ್ಟ್​​​​ ಇಂಡೀಸ್ ಕ್ರಿಕೆಟ್​ ತಂಡ ಎಂದರೆ ವಿಶ್ವದ ಇತರ ದೇಶದ ಆಟಗಾರರು ಹೆದರುವ ಪರಿಸ್ಥಿತಿ ಇತ್ತು. ವೆಸ್ಟ್​ ಇಂಡೀಸ್​ ವಿರುದ್ಧ ಕಣಕ್ಕಿಳಿಯುವುದೆಂದರೆ ಅದೊಂದು ದೊಡ್ಡ ಸವಾಲಿನ ಮಾತಾಗಿತ್ತು. 1975 ಮತ್ತು 1979ರಲ್ಲಿ ವಿಶ್ವಕಪ್​ ಗೆದ್ದ ವೆಸ್ಟ್​ ಇಂಡೀಸ್​ ಈ ಬಾರಿ ಅರ್ಹತೆಯನ್ನೇ ಗಳಿಸಿಲ್ಲ. ಆ ಸಮಯದಲ್ಲಿ ವೆಸ್ಟ್​ ಇಂಡೀಸ್​ ತಂಡ ದಿಗ್ಗಜ ಆಟಗಾರರನ್ನು ಹೊಂದಿತ್ತು. ಪ್ರಸ್ತುತ ತಂಡದ ಆಟಗಾರರು ಬಲಿಷ್ಠವಾಗಿಯೇ ಇದ್ದಾರೆ. ಆದರೆ ದೇಶಕ್ಕಾಗಿ ಆಡುತ್ತಿಲ್ಲ ಎಂಬ ಆರೋಪ ಅವರ ಮೇಲಿದೆ.

ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್​ ಎಂಬುದು ಅತಿ ಹೆಚ್ಚು ಜನರು ವೀಕ್ಷಿಸುವ ಕ್ರೀಡೆಯಾಗಿದೆ. ಅದಲ್ಲೂ ಟಿ20 ಮಾದರಿಯನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಿಂದ ಲೀಗ್​ ಪಂದ್ಯಗಳು ಹೆಚ್ಚಾಗುತ್ತಿವೆ. ಒಂದು ಕಾಲದಲ್ಲಿ ಬಿಗ್​ಬ್ಯಾಷ್​ ಲೀಗ್​ ಮತ್ತು ಐಪಿಎಲ್​ ಬಿಟ್ಟರೆ ಮತ್ತಾವ ಲೀಗ್​ ಪಂದ್ಯಗಳೂ ದೊಡ್ಡ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿರಲಿಲ್ಲ. ಆದರೆ, ಐಪಿಎಲ್​ನ ಖ್ಯಾತಿಯಿಂದ ಈಗ ಹೆಚ್ಚಿನ ದೇಶಗಳಲ್ಲಿ ಲೀಗ್​ ಕ್ರಿಕೆಟ್​ಗಳು ನಡೆಯುತ್ತವೆ. ಇದರಿಂದ ಕ್ರಿಕೆಟ್​ ಆಟಗಾರರಿಗೆ ಪರ್ಯಾಯ ಸಂಪಾದನೆ ಸಿಕ್ಕಂತಾಗಿದೆ. ಇದರ ಲಾಭವನ್ನು ಪಡೆದುಕೊಂಡ ಆಟಗಾರರು ಕೇವಲ ಲೀಗ್​ಗಳಲ್ಲಿ ಮಾತ್ರ ಆಡುತ್ತಿದ್ದು, ರಾಷ್ಟ್ರೀಯ ತಂಡಲ್ಲಿ ಆಟಲು ಇಷ್ಟ ಪಡುತ್ತಿಲ್ಲ. ಏಕೆಂದರೆ ರಾಷ್ಟ್ರೀಯ ತಂಡದಲ್ಲಿನ ಸಂಭಾವನೆಗೂ ಮೀರಿ ಲೀಗ್​ಗಳಲ್ಲಿ ಸಿಗುತ್ತಿದೆ.

ಕೇವಲ ಎರಡು ತಿಂಗಳ ಐಪಿಎಲ್​ನಲ್ಲಿ ಪೂರನ್ ಸುಮಾರು 8 ಪಟ್ಟು ಹೆಚ್ಚು ಮತ್ತು ಹೆಟ್ಮೆಯರ್ 4 ಪಟ್ಟು ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ. ಶಿಮ್ರಾನ್ ಹೆಟ್ಮೆಯರ್ ಅವರು ರಾಜಸ್ಥಾನ ರಾಯಲ್ಸ್‌ನಿಂದ ಗಳಿಸಿದ ರೂ 8.50 ಕೋಟಿ ವಾರ್ಷಿಕ ಐಪಿಎಲ್ ಶುಲ್ಕ ಪಡೆದರೆ, ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಆಂಡ್ರೆ ರಸೆಲ್ ಅವರ ರೂ 16 ಕೋಟಿ ಪಡೆಯುತ್ತಾರೆ. ಹೀಗಾಗಿ ಅವರು ರಾಷ್ಟ್ರೀಯ ತಂಡದಲ್ಲಿ ಆಡುತ್ತಲೇ ಇಲ್ಲ. ಹಣವೇ ಮುಖ್ಯವಾದ್ದರಿಂದ ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ (CWI) ವರ್ಷವಿಡೀ ಆಟವಾಡಲು ಉನ್ನತ ಆಟಗಾರರನ್ನು ಆಸಕ್ತಿ ವಹಿಸುವುದರಿಂದ ದೊಡ್ಡ ಅಡಚಣೆಯನ್ನು ಸೃಷ್ಟಿಸಿದೆ.

ಹೆಟ್ಮೆಯರ್, ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ವೆಸ್ಟ್ ಇಂಡೀಸ್​ ಕ್ರಿಕೆಟ್​ ಮಂಡಳಿಯೊಂದಿಗೆ ಒಪ್ಪಂದದಲ್ಲೇ ಇಲ್ಲ. ವರ್ಷವಿಡೀ ಟಿ20 ಲೀಗ್‌ಗಳಲ್ಲಿ ಸ್ವತಂತ್ರವಾಗಿ ಆಡುವುದರಿಂದ ಅವರೆಲ್ಲರೂ ಸ್ವಯಂಪ್ರೇರಣೆಯಿಂದ ರಾಷ್ಟ್ರೀಯ ಗುತ್ತಿಗೆಯಿಂದ ಹೊರಗುಳಿಯುತ್ತಾರೆ. ಈ ವರ್ಷ ಲಕ್ನೋ ಸೂಪರ್ ಜೈಂಟ್ಸ್‌ನಿಂದ 16 ಕೋಟಿ ರೂಪಾಯಿಯನ್ನು ನಿಕೋಲಸ್​ ಪೂರನ್ ಪಡೆದಿದ್ದಾರೆ. ಕೆರಿಬಿಯನ್ ಕ್ರಿಕೆಟ್ ಸಂಸ್ಥೆ ತಮ್ಮ ತಂಡಕ್ಕಾಗಿ ಆಡಲು ಎಡಗೈ ಬ್ಯಾಟರ್​​ಗೆ ಒತ್ತಾಯಿಸಿದರೂ ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾತಿದೆ. ಪೂರನ್​ ಐಪಿಎಲ್​ ಜೊತೆಗೆ, ದಕ್ಷಿಣ ಆಫ್ರಿಕಾ 20 ಲೀಗ್​, ಕೆರಿಬಿಯನ್​ ಪ್ರೀಮಿಯರ್​ ಲೀಗ್​, ಬಿಗ್ ​ಬ್ಯಾಷ್​ ಲೀಗ್​ ಮತ್ತು ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ.

2017ರ ವರದಿ ಪ್ರಕಾರ ವೆಸ್ಟ್ ಇಂಡೀಸ್ ಆಟಗಾರರಿಗೆ ಟೆಸ್ಟ್‌ ​ ಪಂದ್ಯಕ್ಕೆ 4.72 ಲಕ್ಷ ರೂ, ಏಕದಿನ ಪ್ರತಿ ಪಂದ್ಯಕ್ಕೆ 1.88 ಲಕ್ಷ ರೂ ಮತ್ತು ಟಿ 20ಗೆ 1.42 ಲಕ್ಷ ಕೊಡಲಾಗುತ್ತದೆ. ಆದರೆ, ಸಿಡಬ್ಲ್ಯೂಐ ಈ ಅಂಕಿ - ಅಂಶಗಳನ್ನು ಪರಿಷ್ಕರಿಸಿದೆಯೇ ಎಂದು ಖಚಿತ ಮಾಹಿತಿ ಇಲ್ಲವಾದರೂ ಅಂತರ್ಜಾಲದಲ್ಲಿ ಲಭ್ಯವಿರುವ ಅಧಿಕೃತ ದಾಖಲೆಯಂತೆ ಟೆಸ್ಟ್​ಗೆ 15 ಲಕ್ಷ, ಏಕಿದಿನ ಪಂದ್ಯವೊಂದಕ್ಕೆ 8 ಲಕ್ಷ ಮತ್ತು ಟಿ20ಗೆ 4 ಲಕ್ಷ ಕೊಡಲಾಗುತ್ತಿದೆ ಎಂದಿದೆ.

ವೆಸ್ಟ್ ಇಂಡೀಸ್ ಆಟಗಾರಿಗೆ ಗುತ್ತಿಗೆಯಲ್ಲಿ ಎರಡೂ ಮಾದರಿಯ ಆಟಗಾರರಿಗೆ 1.97 ಕೋಟಿ ಮತ್ತು ಮೂರು ಮಾದರಿ ಆಡುವ ಆಟಗಾರಿಗೆ 2.5 ಕೋಟಿ ಸಿಗಲಿದೆ. ಆದರೆ, ಐಪಿಎಲ್​ ಆಡದ ಭಾರತದ ಚೇತೇಶ್ವರ ಪೂಜಾರ ಕೇಂದ್ರ ಒಪ್ಪಂದದ ಮೂಲಕ ವಾರ್ಷಿಕವಾಗಿ 3 ಕೋಟಿ ರೂಗೂ ಹೆಚ್ಚು ಗಳಿಸುತ್ತಾರೆ ಮತ್ತು ಪ್ರತೀ ಪಂದ್ಯದ ಶುಲ್ಕ ಸೇರಿಸಿದರೆ ಈ ಮೊತ್ತ ಇನ್ನೂ ಹೆಚ್ಚಾಗುತ್ತದೆ.

ಇದನ್ನೂ ಓದಿ: West Indies Out Of World Cup: ಏಕದಿನ ವಿಶ್ವಕಪ್‌ನಿಂದ ಹೊರ ಬಿದ್ದ ವೆಸ್ಟ್ ಇಂಡೀಸ್.. ಅರ್ಹತೆ ಕಳೆದುಕೊಂಡ ಚಾಂಪಿಯನ್​ ತಂಡ

Last Updated : Jul 3, 2023, 8:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.