ETV Bharat / sports

ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್​ ವಿಂಡೀಸ್​ಗೆ ಭರ್ಜರಿ ಜಯ ​: ಸರಣಿಯಲ್ಲಿ 2-0 ಮುನ್ನಡೆ

author img

By

Published : Jul 11, 2021, 10:28 AM IST

197 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 19.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 56 ರನ್​ಗಳ ಹೀನಾಯ ಸೋಲುಕಂಡಿತು.

ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್
ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್

ಸೇಂಟ್ ಲೂಸಿಯಾ: ಆಸ್ಟ್ರೇಲಿಯಾ ತಂಡದ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ 40 ರನ್​ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ ಆರಂಭದಲ್ಲೇ ​ಆ್ಯಂಡ್ರೆ ಫ್ಲೆಚರ್​(9), ಲೆಂಡ್ಲ್​ ಸಿಮೊನ್ಸ್(30) ಮತ್ತು ಕ್ರಿಸ್ ಗೇಲ್(13) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

ಆದರೆ 4ನೇ ಒಂದಾದ ಹೆಟ್ಮೆಯರ್ ಮತ್ತು ಡ್ವೇನ್ ಬ್ರಾವೋ ಶತಕದ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 61 ಎಸೆತಗಳಲ್ಲಿ 103 ರನ್​ಗಳ ಜೊತೆಯಾಟ ನೀಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಹೆಟ್ಮೆಯರ್ 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 61 ರನ್​ಗಳಿಸಿ ರನ್​ಔಟ್ ಆದರೆ, ಬ್ರಾವೋ 34 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 47 ರನ್​ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಅಬ್ಬರಿಸಿದ ರಸೆಲ್ ಕೇವಲ 8 ಎಸೆತಗಳಲ್ಲಿ ತಲಾ 2 ಸಿಕ್ಸರ್​ಗಳ ಸಹಿತ 24 ರನ್​ಗಳಿಸಿದರು. ವಿಂಡೀಸ್​ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್​ಗಳಿಸಿತು.

ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್​ 18ಕ್ಕೆ1, ಆಶ್ಟನ್ ಅಗರ್ 28ಕ್ಕೆ1 ಮತ್ತು ಹೆಜಲ್​ವುಡ್​ 39ಕ್ಕೆ 1 ವಿಕೆಟ್ ಪಡೆದರು.

197 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 19.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 56 ರನ್​ಗಳ ಹೀನಾಯ ಸೋಲುಕಂಡಿತು.

ಮಿಚೆಲ್ ಮಾರ್ಷ್​ 42 ಎಸೆತಗಳಲ್ಲಿ 54 ರನ್​ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ನಾಯಕ ಫಿಂಚ್ 6, ವೇಡ್​ ಶೂನ್ಯ, ಜೋಸ್​ ಫಿಲಿಪ್ಪೆ 13, ಹೆನ್ರಿಕ್ಸ್​ 19, ಬೆನ್​ ಮೆಕ್​ಡರ್ಮೊಟ್ 9, ಕ್ರಿಸ್ಚಿಯನ್​ 9, ಅಗರ್​, ಸ್ಟಾರ್ಕ್​ 8 ಜಂಪಾ ಮತ್ತು ಹೆಜಲ್​ವುಡ್​ 4 ರನ್​ಗಳಿಸಿದರು.

ವೆಸ್ಟ್ ಇಂಡೀಸ್ ಪರ ಶೆಲ್ಡಾನ್ ಕಾಟ್ರೆಲ್ 22ಕ್ಕೆ 2, ಹೇಡನ್ ವಾಲ್ಶ್​ 29ಕ್ಕೆ3, ಆ್ಯಂಡ್ರೆ ರಸೆಲ್, ಬ್ರಾವೋ ಎಡ್ವರ್ಡ್ಸ್​ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನು ಓದಿ: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಮೆಸ್ಸಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.