ETV Bharat / sports

ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸುವುದಿಲ್ಲ, ಭಾರತ ವಿರುದ್ಧ ನಾವು ಗೆದ್ದೇ ಗೆಲ್ಲುತ್ತೇವೆ : ಬಾಬರ್ ಅಜಮ್​

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ಪಂದ್ಯ ಯಾವಾಗಲೂ ದೊಡ್ಡ ಮಟ್ಟದ ಹೈಫ್​ ಹುಟ್ಟು ಹಾಕಿರುತ್ತದೆ ಹಾಗೂ ಎರಡೂ ತಂಡಗಳ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುವುದು ನಿಜ. ಆದರೆ, ನಾವು ಕ್ರಿಕೆಟ್‌ ಆಡುವ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತೇವೆ. ಶಾಂತ ಸ್ವಭಾವದಿಂದ ಇರುವ ಮೂಲಕ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ..

ಬಾಬರ್ ಅಜಮ್​
ಬಾಬರ್ ಅಜಮ್​
author img

By

Published : Oct 23, 2021, 5:16 PM IST

ದುಬೈ : ಇಂದಿನಿಂದ ವಿಶ್ವಕಪ್ ಸೂಪರ್ 12 ಆರಂಭವಾಗಿದೆ. ನಾಳೆ ಭಾರತ ಮತ್ತು ಪಾಕ್​ ಮುಖಾಮುಖಿಯಾಗುತ್ತಿವೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕೆ ಕ್ರಿಕೆಟ್​​ ಜಗತ್ತು ಕೂತೂಹಲದಿಂದ ಕಾದು ಕುಳಿತಿದೆ.

ಐಸಿಸಿ ಪುರುಷರ ಟಿ-20 ವಿಶ್ವಕಪ್‌ ಟೂರ್ನಿಯ ತಮ್ಮ ಮೊದಲನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವ ಟೀಂ ಇಂಡಿಯಾವನ್ನು ಸೋಲಿಸುತ್ತೇವೆಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ದೊಡ್ಡ ಟೂರ್ನಿಗೆ ನೀವು ತೆರಳಿದಾಗ, ನಿಮ್ಮ ಮೇಲಿನ ನಂಬಿಕೆ ಹಾಗೂ ತಂಡದ ಆಟಗಾರರಲ್ಲಿನ ವಿಶ್ವಾಸ ಪ್ರಮುಖ ಸಂಗತಿಯಾಗಿರುತ್ತದೆ. ಒಂದು ತಂಡವಾಗಿ ನಮ್ಮ ವಿಶ್ವಾಸ ಹಾಗೂ ಮನೋಸ್ಥೈರ್ಯ ಅಗ್ರ ಸ್ಥಾನದಲ್ಲಿದೆ. ಹಿಂದೆ ಏನಾಗಿದೆ ಅದು ಬೇಕಾಗಿಲ್ಲ, ಅದು ಹಳೆಯ ಕತೆ ಮುಗಿದು ಹೋಗಿದೆ. ಇದರ ಬಗ್ಗೆ ಯೋಚಿಸುವ ಬದಲು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಅಂದಹಾಗೆ ಈ ಪಂದ್ಯಕ್ಕಾಗಿ ನಾವು ಉತ್ತಮ ತಯಾರಿ ನಡೆಸಿದ್ದೇವೆ ಹಾಗೂ ಉತ್ತಮವಾಗಿ ಆಡುತ್ತೇವೆಂಬ ನಂಬಿಕೆ ಇದೆ" ಎಂದು ಅಜಮ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ಪಂದ್ಯ ಯಾವಾಗಲೂ ದೊಡ್ಡ ಮಟ್ಟದ ಹೈಫ್​ ಹುಟ್ಟು ಹಾಕಿರುತ್ತದೆ ಹಾಗೂ ಎರಡೂ ತಂಡಗಳ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುವುದು ನಿಜ. ಆದರೆ, ನಾವು ಕ್ರಿಕೆಟ್‌ ಆಡುವ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತೇವೆ. ಶಾಂತ ಸ್ವಭಾವದಿಂದ ಇರುವ ಮೂಲಕ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ" ಎಂದರು.

ನಾಳೆಯ ಪಂದ್ಯದಲ್ಲಿ ನಾವು ಗೆದ್ದೇ ಗೆಲ್ಲುವ ಮೂಲಕ ದಾಖಲೆ ಬರೆಯುವ ನಂಬಿಕೆ ನನಗಿದೆ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5-0ಯಲ್ಲಿ ಬಗ್ಗು ಬಡಿದು ಮುನ್ನಡೆ ಸಾಧಿಸಿದೆ. ಇದೀಗ ಈ ವರ್ಷ ಎರಡೂ ತಂಡಗಳು ತಮ್ಮ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವುದು ಟೂರ್ನಿಗೆ ಮತ್ತಷ್ಟು ರೋಚಕತೆ ಒದಗಿಸಿದೆ. ಭಾರತ ಪಾಕ್​ ಏಕದಿನ ವಿಶ್ವಕಪ್​​ಗಳಲ್ಲಿ 7 ಬಾರಿ ಮತ್ತು ಟಿ-20 ವಿಶ್ವಕಪ್​ಗಳಲ್ಲಿ 5 ಬಾರಿ ಮುಖಾಮುಖಿಯಾಗಿದ್ದರೂ, ಪಾಕಿಸ್ತಾನ ಭಾರತವನ್ನು ಮಣಿಸಲು ಸಾಧ್ಯವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.