ಬರ್ಮಿಂಗ್ಹ್ಯಾಮ್(ಎಡ್ಜಬಾಸ್ಟನ್): ಇಂಗ್ಲೆಂಡ್ ವಿರುದ್ಧ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2 - 2 ಅಂತರದ ಸಮಬಲ ಸಾಧಿಸಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿರುವ ಯಾರ್ಕರ್ ಕಿಂಗ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೈನಲ್ ಟೆಸ್ಟ್ ಪಂದ್ಯದಲ್ಲಿ ತಂಡದ ಸೋಲಿಗೆ ಬ್ಯಾಟರ್ಗಳ ಮೇಲೆ ಹಂಗಾಮಿ ನಾಯಕ ಬುಮ್ರಾ ಹರಿಹಾಯ್ದಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮ ಬ್ಯಾಟರ್ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಸೋಲು ಕಾಣುವಂತಾಯಿತು ಎಂದಿದ್ದಾರೆ. ಕೊನೆಯ ಎರಡು ದಿನಗಳಲ್ಲಿ ಟೆಸ್ಟ್ ಪಂದ್ಯ ನಮ್ಮಿಂದ ಸಂಪೂರ್ಣವಾಗಿ ಕೈತಪ್ಪಿ ಹೋಯಿತು. ಜೊತೆಗೆ ಮಳೆ ಕೂಡ ನಮ್ಮ ಗೆಲುವಿಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ.
-
2⃣3⃣ wickets
— BCCI (@BCCI) July 5, 2022 " class="align-text-top noRightClick twitterSection" data="
Best bowling Figures (In Innings): 5⃣/6⃣4⃣
An average of 2⃣2⃣.4⃣7⃣#TeamIndia's Player of the Series is @Jaspritbumrah93 👏 👏 #ENGvIND pic.twitter.com/APkOhYC1tJ
">2⃣3⃣ wickets
— BCCI (@BCCI) July 5, 2022
Best bowling Figures (In Innings): 5⃣/6⃣4⃣
An average of 2⃣2⃣.4⃣7⃣#TeamIndia's Player of the Series is @Jaspritbumrah93 👏 👏 #ENGvIND pic.twitter.com/APkOhYC1tJ2⃣3⃣ wickets
— BCCI (@BCCI) July 5, 2022
Best bowling Figures (In Innings): 5⃣/6⃣4⃣
An average of 2⃣2⃣.4⃣7⃣#TeamIndia's Player of the Series is @Jaspritbumrah93 👏 👏 #ENGvIND pic.twitter.com/APkOhYC1tJ
ಇದನ್ನೂ ಓದಿರಿ: ಬೃಹತ್ ಟಾರ್ಗೆಟ್ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್.. ಭಾರತದ ವಿರುದ್ಧ ಹೊಸ ದಾಖಲೆ ಬರೆದ ಆಂಗ್ಲರು
ಈ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮವಾದ ಪ್ರದರ್ಶನ ನೀಡಿತು. ಹೀಗಾಗಿ, ಗೆಲುವಿಗೆ ಆ ತಂಡ ಅರ್ಹವಾಗಿದೆ ಎಂದ ಬುಮ್ರಾ, ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿರುವ ಪಂತ್ ಹಾಗೂ ಜಡೇಜಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 416 ರನ್ಗಳಿಕೆ ಮಾಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕೇವಲ 245 ರನ್ಗಳಿಗೆ ಆಲೌಟ್ ಆಯಿತು.
ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ 378 ರನ್ಗಳ ಗುರಿ ನೀಡಿತ್ತು. ಈ ಗುರಿ ಕೇವಲ 3 ವಿಕೆಟ್ ಕಳೆದುಕೊಂಡು ಮುಟ್ಟಿದ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು.