ETV Bharat / sports

2 ವರ್ಷದಿಂದ ಸತತ ಪರಿಶ್ರಮ, ಈ ಸಲ ಪ್ರಶಸ್ತಿ ಸಿಗುತ್ತೆ: ರಾಹುಲ್​ ದ್ರಾವಿಡ್​ - ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ​ಫೈನಲ್​

ನಾಳೆಯಿಂದ ಶುರುವಾಗಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೂ ಮುನ್ನ ಭಾರತ ಭರ್ಜರಿ ಸಿದ್ಧತೆ ನಡೆಸಿದ್ದು, ಕೋಚ್​ ರಾಹುಲ್​ ದ್ರಾವಿಡ್​ ಮಾನಿಸಿಕ ಸ್ಥೈರ್ಯ ತುಂಬುವ ಮಾತನ್ನಾಡಿದ್ದಾರೆ.

ರಾಹುಲ್​ ದ್ರಾವಿಡ್​
ರಾಹುಲ್​ ದ್ರಾವಿಡ್​
author img

By

Published : Jun 6, 2023, 7:48 AM IST

ಲಂಡನ್: 2011 ರ ಏಕದಿನ ವಿಶ್ವಕಪ್​ ಬಳಿಕ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಕಳೆದ ಬಾರಿಯ ಟೆಸ್ಟ್​ ವಿಶ್ವ ಚಾಂಪಿಯನ್​ಶಿಪ್​ ಟ್ರೋಫಿಯಲ್ಲಿ ಸೋಲು ಕಂಡಿದ್ದೆವು. ಅದು ಈ ಬಾರಿ ಸುಳ್ಳಾಗಿ ಪ್ರಶಸ್ತಿ ಬರ ನೀಗಲಿದೆ ಎಂದು ಭಾರತ ತಂಡದ ಪ್ರಧಾನ ತರಬೇತುದಾರ ರಾಹುಲ್​ ದ್ರಾವಿಡ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಳೆಯಿಂದ (ಜೂನ್​ 7 ರಿಂದ 11) ಆರಂಭವಾಗುವ ಟೆಸ್ಟ್​ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೂ ಮುನ್ನ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು, ಭಾರತ ತಂಡದ ಶಕ್ತಿ ಸಾಮರ್ಥ್ಯ ಮತ್ತು ಟ್ರೋಫಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಾವು ಕಳೆದ 12 ವರ್ಷಗಳಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲದಿರಬಹುದು. ಆದರೆ, ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆಲ್ಲಲೇಬೇಕೆಂಬ ಒತ್ತಡದಲ್ಲಿ ನಾವಿಲ್ಲ. ಟ್ರೋಫಿ ಗೆಲ್ಲುವ ಸಲುವಾಗಿ ಎಲ್ಲ ಯೋಜನೆ, ತಂತ್ರಗಳನ್ನು ರೂಪಿಸಲಾಗಿದೆ. ಅದು ಈ ಬಾರಿ ಸಾಕಾರವಾಗಲಿದೆ ಎಂದು ಹೇಳಿದರು.

2021 ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್‌ನಲ್ಲಿ ನಾವು ಸೋತೆವು. ಟಿ20 ವಿಶ್ವಪ್​ನ ನಾಕ್‌ಔಟ್ ಹಂತದಲ್ಲೇ ಎಡವಿದೆವು. ಇವೆಲ್ಲವೂ ನಮ್ಮ ಮೇಲೆ ಪ್ರಶಸ್ತಿ ಜಯಿಸುವ ಒತ್ತಡ ಹೆಚ್ಚಿಸಿದೆ ಎಂದು ಅನಿಸುವುದು ಸಹಜ. ಆದರೆ, ತಂಡ ಅಂತಹ ಯಾವುದೇ ಒತ್ತಡಕ್ಕೆ ಸಿಲುಕಿಲ್ಲ. ಗೆಲುವೊಂದೇ ನಮ್ಮ ಗುರಿಯಾಗಿದೆ. ಕಳೆದ ಎರಡು ವರ್ಷಗಳ ಸತತ ಶ್ರಮಕ್ಕೆ ಕೂಲಿ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾ ವಿರುದ್ಧ ಪಂದ್ಯ, ಸರಣಿ ಗೆಲ್ಲುವುದು ಎಂದಿಗೂ ಥ್ರಿಲ್ಲಿಂಗ್​. ಕಾರಣ ಆ ತಂಡ ಕೂಡ ಬಲಿಷ್ಠವಾಗಿದ್ದು, ಕಳೆದ 6 ವರ್ಷಗಳಿಂದ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಇಂಗ್ಲೆಂಡ್​ನಲ್ಲಿ ಆಸೀಸ್​ ಎದುರಾಗುತ್ತಿದ್ದುದು ನಿರೀಕ್ಷೆ ಹೆಚ್ಚಿದೆ. ಪ್ರಶಸ್ತಿ ಜಯಿಸುವ ಮೂಲಕ ಶ್ರಮಕ್ಕೆ ಅರ್ಥ ಕಂಡುಕೊಳ್ಳಲಿದ್ದೇವೆ ಎಂದು ಹೇಳಿದರು.

ರಹಾನೆ ಕಮ್​ಬ್ಯಾಕ್​ ಬಲ: ಅನುಭವಿ ಬ್ಯಾಟರ್​ ಆಗಿರುವ ಅಜಿಂಕ್ಯ ರಹಾನೆ ಅವರು 18 ತಿಂಗಳುಗಳ ಬಳಿಕ ಮೊದಲ ಟೆಸ್ಟ್ ಆಡುತ್ತಿದ್ದಾರೆ. ಆಟದಲ್ಲಿನ ವೈಫಲ್ಯವು ವೃತ್ತಿಜೀವನವನ್ನು ಕೊನೆಗೊಳಿಸಬಹುದು. ಈಗ ತಂಡಕ್ಕೆ ಅವರು ಮರಳಿದ್ದಾರೆ. ಇಂಗ್ಲೆಂಡ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಲಿಪ್‌ನಲ್ಲಿ ಅದ್ಭುತ ಕ್ಯಾಚರ್​ ಆಗಿದ್ದಾರೆ. ತಂಡದ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಲಿದ್ದಾರೆ. 82 ಟೆಸ್ಟ್ ಪಂದ್ಯವನ್ನಾಡಿರುವ ಅನುಭವಿ ಆಟಗರ ದೇಶಕ್ಕಾಗಿ ಇನ್ನೂ ಹೆಚ್ಚಿನ ಟೆಸ್ಟ್​ ಆಡಬಹುದು ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

ಕಳಪೆ ಆಟದ ಕಾರಣಕ್ಕಾಗಿ ತಂಡದಿಂದ ಕೈಬಿಡಲಾಗುತ್ತದೆ. ಪುನರಾಗಮನ ಬಯಸಿದರೆ, ನೀವು ಚೆನ್ನಾಗಿ ಆಡಬೇಕು. ನೀವು ಎಲ್ಲಿಯವರೆಗೆ ಪ್ರದರ್ಶನ ನೀಡುತ್ತೀರೋ ಅಲ್ಲಿಯವರೆಗೆ ತಂಡದಲ್ಲಿ ಸ್ಥಾನವಿರುತ್ತದೆ. ರಹಾನೆ ತಂಡಕ್ಕೆ ವಾಪಸ್ಸಾಗಿದ್ದು, ನಮಗೆ ಉತ್ತಮ ಆಯ್ಕೆಯಾಗಿದೆ. ನಿಸ್ಸಂಶಯವಾಗಿ ಅನುಭವವನ್ನು ಧಾರೆ ಎರೆಯುತ್ತಾರೆ ಎಂದು ಹೇಳಿದರು.

ಚೇತೇಶ್ವರ್​ ಪೂಜಾರ ಈಗಾಗಲೇ ಇಂಗ್ಲೆಂಡ್​ ನೆಲದಲ್ಲಿ ಕೌಂಟಿ ಕ್ರಿಕೆಟ್​ನಲ್ಲಿ ರಾಶಿ ರಾಶಿ ರನ್​ ಕಲೆ ಹಾಕಿದ್ದಾರೆ. ಇಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಂಡಿದ್ದಾರೆ. ನಿಸ್ಸಂಶಯವಾಗಿ ಅವರ ಬ್ಯಾಟ್​ ಸದ್ದು ಮಾಡಲಿದೆ. ಬೌಲರ್‌ಗಳು ಬಳಸುವ ತಂತ್ರಗಳು, ಯೋಜನೆಗಳ ಮೇಲೆ ಪೂಜಾರಾ ಉತ್ತಮ ಹಿಡಿತವನ್ನು ಹೊಂದಿದ್ದಾರೆ ಎಂದರು.

ಟೆಸ್ಟ್​ ಕ್ರಿಕೆಟ್​ ತಂಡಗಳು ಹೆಚ್ಚಾಗಲಿ: ಚುಟುಕು ಕ್ರಿಕೆಟ್​ ಬಳಿಕ ಟೆಸ್ಟ್​ ಅಪಾಯದಲ್ಲಿದೆ. ಕೆಲವೇ ರಾಷ್ಟ್ರಗಳು ಟೆಸ್ಟ್ ಕ್ರಿಕೆಟ್‌ಗೆ ಬದ್ಧವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಟೂರ್ನಿ ಇದಕ್ಕೆ ಮರುಜೀವ ನೀಡಲಿದೆ. ಟೆಸ್ಟ್​ ಆಡುವ ತಂಡಗಳು ಇನ್ನಷ್ಟು ಹೆಚ್ಚಬೇಕು ಎಂದು ಟೆಸ್ಟ್​ ಕ್ರಿಕೆಟ್​ನಲ್ಲಿ ಗೋಡೆ ಖ್ಯಾತಿಯ ರಾಹುಲ್​ ದ್ರಾವಿಡ್​ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಐಪಿಎಲ್​ ಫೈನಲ್​ನಲ್ಲಿ ಧೋನಿಯಿಂದ ವಿಕೆಟ್​ ಕೀಪಿಂಗ್​ ಸಲಹೆ ಪಡೆದೆ: ಶ್ರೀಕರ್​ ಭರತ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.