ಲಂಡನ್: ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡುವಾಗಲು ಅವರಿಗಿದ್ದ ಏಕೈಕ ಭಯ ಎಂದರೆ ಭಾರತೀಯ ಸ್ಪಿನ್ನರ್ಗಳು. ಅದರಂತೆ ಕಳೆದ ವರ್ಷ ನವೆಂಬರ್ ಡಿಸೆಂಬರ್ನಲ್ಲಿ ಕಾಂಗರೂ ಪಡೆ ಭಾರತಕ್ಕೆ ಬಂದಿದ್ದಾಗ ಜಡೇಜಾ ಮತ್ತು ಅಶ್ವಿನ್ ಕಾಡಿದ್ದರು. ಇಂಗ್ಲೆಂಡ್ನ ಸ್ಪೀಡ್ ಪಿಚ್ನಲ್ಲೂ ಆಸಿಸ್ ಬ್ಯಾಟರ್ಗಳಿಗೆ ಈ ಸ್ಪಿನ್ ಜೋಡಿಯ ಭಯ ಕಾಡುತ್ತಿದೆ. ಈ ಬಗ್ಗೆ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ.
ಆದರೆ, ಆಸಿಸ್ಗೆ ಇರುವ ಒಂದು ಧೈರ್ಯ ಎಂದರೆ ಅವರಿಗೆ ಆ ಪಿಚ್ನಲ್ಲಿ ಆಡಿರುವ ಅನುಭವ ಹೆಚ್ಚು ಎಂಬುದು. ಹೀಗಾಗಿ ಭಾರತವನ್ನು ಓವಲ್ನಲ್ಲಿ ಮಣಿಸಿ ವಿಶ್ವ ಟೆಸ್ಟ್ನ ಚಾಂಪಿಯನ್ ಆಗಬೇಕು ಎಂದು ಕಮಿನ್ಸ್ ಪಡೆ ಚಿಂತಿಸುತ್ತಿದೆ. ಇದರ ಜೊತೆಗೆ ಭಾರತದಲ್ಲಿ ಮುಖಾಮುಖಿಯಾಗಿದ್ದಾಗ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 1-2 ರಿಂದ ಸೋಲು ಕಂಡಿರುವುದನ್ನು ಆಸಿಸ್ ಮರೆತಿಲ್ಲ. ಈ ಬಗ್ಗೆ ಆಸಿಸ್ ಬ್ಯಾಟರ್ ಸ್ಮಿತ್ ಮಾತನಾಡಿದ್ದಾರೆ.
"ಓವಲ್ ಕೆಲವೊಮ್ಮೆ ಸ್ಪಿನ್‌ನೊಂದಿಗೆ ಉತ್ತಮವಾಗಿ ವರ್ತಿಸುತ್ತದೆ. ಕೆಲವು ಬೌಲರ್ಗಳು ಈ ಪಿಚ್ಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಎದುರಾಳಿಯಾಗಿ ನಾವು ಭಾರತವನ್ನು ಹೋಂದಿದ್ದೇವೆ. ಹೀಗಾಗಿ ಅವರ ಸ್ಪಿನ್ ಬೌಲಿಂಗ್ ಬಗ್ಗೆ ವಿಶೇಷ ಗಮನ ಇಡಬೇಕಾಗುತ್ತದೆ. ಓವೆಲ್ ಒಂದು ಉತ್ತಮ ಮೈದಾನ. ಇದರ ಔಟ್ ಫೀಲ್ಡ್ ತುಂಬಾ ವೇಗ ಇದೆ ಹೀಗಾಗಿ ಬೌಂಡರಿಗಳು ಸುಲಭವಾಗಿ ಗಳಿಸಬಹುದು. ಇಂಗ್ಲೆಂಡ್ನ ಪಿಚ್ಗಳು ಹೆಚ್ಚು ಬೌನ್ಸ್ ಅನ್ನು ಹೊಂದಿರುತ್ತದೆ" ಎಂದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಜೂನ್ 7ರಿಂದ 11 ರ ವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ. ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಫಲಿತಾಂಶದಿಂದ ಎರಡೂ ತಂಡಗಳು ಫೈನಲ್ಗೆ ಕ್ವಾಲಿಫೈಯರ್ ಆದವು. 2019 -21 ರ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಭಾರತ ಆಡಿತ್ತು ಆದರೆ ನ್ಯೂಜಿಲೆಂಡ್ ಮೀಸಲು ದಿನದಲ್ಲಿ ಪಂದ್ಯ ಗೆದ್ದುಕೊಂಡಿತ್ತು. ಇಂಗ್ಲೆಂಡ್ನಲ್ಲಿ ಅಕಾಲಿಕ ಮಳೆಯ ಮುನ್ಸೂಚನೆ ಇರುವುದರಿಂದ ಜೂನ್ 12ನೇ ತಾರೀಖನ್ನು ಮೀಸಲು ದಿನವಾಗಿ ಇಡಲಾಗಿದೆ.
ಆಸ್ಟ್ರೇಲಿಯ ಇತ್ತೀಚೆಗೆ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು, ಆದರೆ ಸರಣಿಯು ಕೊನೆಯಲ್ಲಿ ಸ್ಪಿನ್ನರ್ಗಳ ಮೇಲೆ ಆಸಿಸ್ ನಿಯಂತ್ರಣ ಕಂಡುಕೊಂಡು ಕ್ಲೀನ್ ಸ್ವೀಪ್ ಆಗುವುದರಿಂದ ತಪ್ಪಿಸಿಕೊಂಡಿದ್ದರು. ಕಮಿನ್ಸ್ ತಾಯಿಯ ಅನಾರೋಗ್ಯದ ಕಾರಣ ತವರಿಗೆ ಮರಳಿದ್ದಕ್ಕೆ ಸ್ಮಿತ್ ನಾಯಕತ್ವದಲ್ಲಿಕೊನೆಯ ಪಂದ್ಯ ನಡೆದಿತ್ತು. ಅದನ್ನು ಕಾಂಗರೂ ಪಡೆ ಗೆಲುವು ಸಾಧಿಸಿತ್ತು. ಇದೇ ಭರವಸೆಯಲ್ಲಿ ಆಸ್ಟ್ರೇಲಿಯಾ ತಂಡ ಕಣಕ್ಕಿಳಿಯುತ್ತಿದೆ.
"ಓವೆಲ್ನಲ್ಲಿ ಸಾಕಷ್ಟು ಅಭಿಮಾನಿಗಳು ಇರುತ್ತಾರೆ ಎಂದು ನನಗೆ ಖಾತ್ರಿಯಿದೆ, ಬಹುಶಃ ಆಸ್ಟ್ರೇಲಿಯನ್ನರಿಗಿಂತ ಹೆಚ್ಚು ಭಾರತೀಯರು ಇರುತ್ತಾರೆ ಆದರೆ ಇದು ತುಂಬಾ ಖುಷಿಯಾಗುತ್ತದೆ. ಎಲ್ಲಾ ಆಟಗಾರರು ಫೈನಲ್ ಪಂದ್ಯಕ್ಕಾಗಿ ಉತ್ಸುಕರಾಗಿದ್ದಾರೆ" ಎಂದು ಸ್ಮಿತ್ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ತೆರಳಿರುವ ಐಸಿಸಿ ಮುಖ್ಯಸ್ಥರು: ವಿಶ್ವಕಪ್ಗೆ ಪಾಕ್ ತಂಡ ಭಾರತಕ್ಕೆ ಬರುವ ಬಗ್ಗೆ ಚರ್ಚೆ