ಹೈದರಾಬಾದ್ : ಕ್ರಿಕೆಟ್ ಜಗತ್ತಿನ 'ದೇವರು' ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ಗೆ 48 ನೇ ಹುಟ್ಟುಹಬ್ಬದ ಸಂಭ್ರಮ. ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24, 1973 ರಂದು ಮುಂಬೈನ ಶಿವಾಜಿ ಪಾರ್ಕ್ ರಾನಡೆ ರಸ್ತೆಯಲ್ಲಿರುವ ನಿರ್ಮಲ್ ನರ್ಸಿಂಗ್ ಹೋಂನಲ್ಲಿ ಜನಿಸಿದ್ದರು.
ಸ್ವೀಟ್16 ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟು ಮುಂದೆ ಇತಿಹಾಸ ಬರೆದ ಮಹಾನ್ ಪ್ರತಿಭೆ ಇವರು. ಮೇ 24,1995 ರಂದು ಸಚಿನ್ ಅವರು ಡಾ.ಅಂಜಲಿ ಮಹೇತಾ ಅವರನ್ನು ವಿವಾಹವಾದರು. ಸಚಿನ್ ಮತ್ತು ಅಂಜಲಿಗೆ ಸಾರಾ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಎಂಬ ಇಬ್ಬರು ಮಕ್ಕಳಿದ್ದಾರೆ.
-
Sach is truth , Sach is life , Sach is the answer, Sach is it.
— Venkatesh Prasad (@venkateshprasad) April 24, 2021 " class="align-text-top noRightClick twitterSection" data="
Birthday greetings to not only the greatest batsman the world has seen, but the most humble and incredible human being @sachin_rt .#HappyBirthdaySachin pic.twitter.com/6bl6L5zNtb
">Sach is truth , Sach is life , Sach is the answer, Sach is it.
— Venkatesh Prasad (@venkateshprasad) April 24, 2021
Birthday greetings to not only the greatest batsman the world has seen, but the most humble and incredible human being @sachin_rt .#HappyBirthdaySachin pic.twitter.com/6bl6L5zNtbSach is truth , Sach is life , Sach is the answer, Sach is it.
— Venkatesh Prasad (@venkateshprasad) April 24, 2021
Birthday greetings to not only the greatest batsman the world has seen, but the most humble and incredible human being @sachin_rt .#HappyBirthdaySachin pic.twitter.com/6bl6L5zNtb
ಸಚಿನ್ ಒಟ್ಟು 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 44.8 ರ ಸರಾಸರಿಯಲ್ಲಿ, ಮಾಸ್ಟರ್ ಬ್ಲಾಸ್ಟರ್ 49 ಶತಕ ಮತ್ತು 96 ಅರ್ಧಶತಕಗಳ ಸಹಾಯದಿಂದ 18,426 ರನ್ ಗಳಿಸಿದರು. ಸಚಿನ್ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 53.8 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 51 ಶತಕಗಳು ಮತ್ತು 68 ಅರ್ಧ ಶತಕಗಳನ್ನು ಪೂರೈಸಿ ದಾಖಲೆ ಬರೆದಿದ್ದಾರೆ.
-
Wishing the legendary master blaster @sachin_rt a very Happy Birthday! Great to see you back and fully recovered! Lots of love and best wishes ❤️🤗 #HappyBirthdaySachin pic.twitter.com/7XmFo05Lpv
— Yuvraj Singh (@YUVSTRONG12) April 24, 2021 " class="align-text-top noRightClick twitterSection" data="
">Wishing the legendary master blaster @sachin_rt a very Happy Birthday! Great to see you back and fully recovered! Lots of love and best wishes ❤️🤗 #HappyBirthdaySachin pic.twitter.com/7XmFo05Lpv
— Yuvraj Singh (@YUVSTRONG12) April 24, 2021Wishing the legendary master blaster @sachin_rt a very Happy Birthday! Great to see you back and fully recovered! Lots of love and best wishes ❤️🤗 #HappyBirthdaySachin pic.twitter.com/7XmFo05Lpv
— Yuvraj Singh (@YUVSTRONG12) April 24, 2021
2013ರ ನವೆಂಬರ್ 16 ರಂದು ವಾಂಖೆಡೆ ಮೈದಾನದಲ್ಲಿ ಕಡೇಯ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದ ಸಚಿನ್ ಈಗಲೂ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ದಂತಕಥೆ ಎಂದೇ ಕರೆಯುವ ಸಚಿನ್, ಹಲವಾರು ದಾಖಲೆಗಳನ್ನು ಬರೆದಿದ್ದು, ಮುಂದಿನ ದಿನಗಳಲ್ಲೂ ಆ ದಾಖಲೆಗಳನ್ನು ಬ್ರೇಕ್ ಮಾಡುವುದು ಕಷ್ಟವಾಗಿದೆ.
ಕ್ರೀಡಾ ವಿಭಾಗದಲ್ಲಿ ಸಚಿನ್ ಅವರ ಸಾಧನೆಗಾಗಿ 2014 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಭಾರತ ರತ್ನ ನೀಡಿ ಗೌರವಿಸಲಾಯಿತು.
ಓದಿ : ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ