ಇಂಗ್ಲೆಂಡ್ ವಿರುದ್ಧ ಮರುನಿಗದಿಯಾದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಈಗಾಗಲೇ ಕಸರತ್ತು ಶುರು ಮಾಡಿದೆ. ಜುಲೈ 1 ರಿಂದ ನಡೆಯುವ ಪಂದ್ಯವನ್ನು ಗೆದ್ದು ಐತಿಹಾಸಿಕ ಸರಣಿ ಜಯ ಸಾಧಿಸಲು ರೋಹಿತ್ ಶರ್ಮಾ ಬಳಗ ಅಭ್ಯಾಸದಲ್ಲಿ ನಿರತವಾಗಿದೆ. ಪಂದ್ಯದ ಬಗ್ಗೆ ರಣತಂತ್ರ ರೂಪಿಸುವ ಭಾಗವಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಟಗಾರರನ್ನು ಹುರಿದುಂಬಿಸುತ್ತಿರುವ ವಿಡಿಯೋ ಹೊರಬಿದ್ದಿದೆ.
ಲೈಸೆಸ್ಟರ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರು ತಂಡದ ಸಹ ಆಟಗಾರರೊಂದಿಗೆ ಚರ್ಚಿಸುತ್ತಿದ್ದು, ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ. ಕ್ರಿಕೆಟ್ ಕ್ಲಬ್ ಇದನ್ನು 'ವೃತ್ತಿಪರ ತಂಡದ ಉತ್ಸಾಹಭರಿತ ಮಾತುಕತೆ' ಎಂದು ಬಣ್ಣಿಸಿದೆ.
-
Game mode = 𝒂𝒄𝒕𝒊𝒗𝒂𝒕𝒆𝒅 💪@imVkohli gives a 𝗽𝗮𝘀𝘀𝗶𝗼𝗻𝗮𝘁𝗲 team talk ahead of a busy day of preparations before @BCCI's Tour Match 🆚 @leicsccc.
— Leicestershire Foxes 🏏 (@leicsccc) June 21, 2022 " class="align-text-top noRightClick twitterSection" data="
🎟️- https://t.co/uu0mGLEuym
🦊 #IndiaTourMatch | #LEIvIND pic.twitter.com/zDxP53Slxd
">Game mode = 𝒂𝒄𝒕𝒊𝒗𝒂𝒕𝒆𝒅 💪@imVkohli gives a 𝗽𝗮𝘀𝘀𝗶𝗼𝗻𝗮𝘁𝗲 team talk ahead of a busy day of preparations before @BCCI's Tour Match 🆚 @leicsccc.
— Leicestershire Foxes 🏏 (@leicsccc) June 21, 2022
🎟️- https://t.co/uu0mGLEuym
🦊 #IndiaTourMatch | #LEIvIND pic.twitter.com/zDxP53SlxdGame mode = 𝒂𝒄𝒕𝒊𝒗𝒂𝒕𝒆𝒅 💪@imVkohli gives a 𝗽𝗮𝘀𝘀𝗶𝗼𝗻𝗮𝘁𝗲 team talk ahead of a busy day of preparations before @BCCI's Tour Match 🆚 @leicsccc.
— Leicestershire Foxes 🏏 (@leicsccc) June 21, 2022
🎟️- https://t.co/uu0mGLEuym
🦊 #IndiaTourMatch | #LEIvIND pic.twitter.com/zDxP53Slxd
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸೋಲುಂಡ ಬಳಿಕ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ಇದೀಗ ರೋಹಿತ್ ಶರ್ಮಾ ತಂಡದ ಸಾರಥ್ಯ ವಹಿಸಿದ್ದಾರೆ.
ಕೋವಿಡ್ ಕಾರಣಕ್ಕಾಗಿ ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯ ರದ್ದಾಗಿತ್ತು. ಇದೀಗ ಆ ಪಂದ್ಯವನ್ನು ಜುಲೈ 1 ರಿಂದ 5 ರವರೆಗೆ ನಿಗದಿ ಮಾಡಲಾಗಿದೆ. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಅಶ್ವಿನ್ಗೆ ಕೋವಿಡ್, ಕ್ವಾರಂಟೈನ್: ಭಾರತದ ಟೆಸ್ಟ್ ತಂಡದ ಪರಿಣತ ಸ್ಪಿನ್ನರ್ ಆರ್.ಅಶ್ವಿನ್ಗೆ ಕೋವಿಡ್ ಕಾಣಿಸಿಕೊಂಡಿದ್ದು, ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದ ಮುನ್ನ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ಅವರು ಇಂಗ್ಲೆಂಡ್‌ಗೆ ಪಯಣಿಸಲು ಸಾಧ್ಯವಾಗಿಲ್ಲ.
ಭಾರತ ಟೆಸ್ಟ್ ತಂಡದ ಉಳಿದ ಸದಸ್ಯರು ಈಗಾಗಲೇ ಇಂಗ್ಲೆಂಡ್ ತಲುಪಿದ್ದು, ಲೈಸೆಸ್ಟರ್‌ಶೈರ್ ಕೌಂಟಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ಕೌಂಟಿ ವಿರುದ್ಧವೇ ಜೂನ್ 24 ರಿಂದ 4 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ರಣಜಿ ಟ್ರೋಫಿ ಫೈನಲ್: ಬಲಾಢ್ಯ ಮುಂಬೈ vs ಮಧ್ಯಪ್ರದೇಶ ಪೈಪೋಟಿ