ETV Bharat / sports

ರಾಹುಲ್‌ ಸಿಡಿಸಿದ ಶತಕ ಅತ್ಯುತ್ತಮ; ಹಿಂದೆಂದು ನೋಡಿರಲಿಲ್ಲ ಎಂದ ರೋಹಿತ್‌ - ರಾಹುಲ್‌ರನ್ನು ಹಾಡಿ ಹೊಗಳಿದ ರೋಹಿತ್‌

ಈ ಹಿಂದೆ ರಾಹುಲ್‌ ಜೊತೆ ಹಲವಾರು ಬಾರಿ ಬ್ಯಾಟಿಂಗ್ ಮಾಡಿದ್ದೇನೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಅವರೊಂದಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದು. ಅವರ ಬ್ಯಾಟ್‌ನಿಂದ ಸಿಡಿದ ಶತಕ ಅತ್ಯುತ್ತಮವಾಗಿತ್ತು ಎಂದು ರೋಹಿತ್‌ ಶರ್ಮಾ ಕೊಂಡಾಡಿದ್ದಾರೆ.

Eng vs Ind, 2nd Test: It's the best I have seen KL Rahul bat, says Rohit
ರಾಹುಲ್‌ ಸಿಡಿಸಿದ ಶತಕ ಅತ್ಯುತ್ತಮ; ಹಿಂದೆಂದು ನೋಡಿರಲಿಲ್ಲ ಎಂದ ರೋಹಿತ್‌
author img

By

Published : Aug 14, 2021, 5:30 AM IST

ಲಂಡನ್‌: ಕ್ರಿಕೆಟ್‌ ಕಾಶಿ ಲಾಡ್ಸ್‌ ಮೈದಾನದಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಆಕರ್ಷಕ ಶತಕ ಬಾರಿಸಿ ಹೊಸ ದಾಖಲೆ ಬರೆದಿದ್ರು. ರಾಹುಲ್‌ಗೆ ಅಭಿನಂದನೆಗಳ ಮಹಾಪೂರ ಜೊತೆಗೆ ಅವರ ಆಟವನ್ನು ಎಲ್ಲರೂ ಕೊಂಡಾಡಿದ್ದರು. ಇದೀಗ ರಾಹುಲ್‌ ಬ್ಯಾಟ್‌ನಿಂದ ಸಿಡಿದ ರನ್‌ಗಳಿಗೆ ಮತ್ತೊಂದು ಬದಿಯಲ್ಲಿ ನಿಂತು ಬೆನ್ನುತಟ್ಟಿದ್ದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಕೂಡ ಫಿದಾ ಆಗಿದ್ದಾರೆ. ರಾಹುಲ್‌ ಬ್ಯಾಟ್‌ನಿಂದ ಬಂದಿರುವ ಶತಕ ಅತ್ಯುತ್ತಮ. ನಾನು ಹಿಂದೆಂದು ನೋಡಿರಲಿಲ್ಲ ಎಂದು ಶರ್ಮಾ ಹಾಡಿ ಹೊಗಳಿದ್ದಾರೆ.

ರಾಹುಲ್‌ ಸಿಡಿಸಿದ ಶತಕ ಅತ್ಯುತ್ತಮ; ಹಿಂದೆಂದು ನೋಡಿರಲಿಲ್ಲ ಎಂದ ರೋಹಿತ್‌

ದಿನದಾಟದ ಬಳಿಕ ವರ್ಚುಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್‌, ಆರಂಭದಿಂದಲೇ ಎಸೆತಗಳ ಮೇಲೆ ತುಂಬಾ ನಿಯಂತ್ರಣ ಸಾಧಿಸುತ್ತಿದ್ದ. ಯಾವುದೇ ಕ್ಷಣದಲ್ಲೂ ಗೊಂದಲ ಅಥವಾ ಎಸೆತ ಎದುರಿಸಲು ರಾಹುಲ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇಂದು ರಾಹುಲ್‌ ದಿನವಾಗಿತ್ತು. ನಿಜವಾಗಿಯೂ ಇದನ್ನು ಲೆಕ್ಕದಲ್ಲಿ ಇಟ್ಟುಕೊಳ್ಳುತ್ತಾನೆ. ಬ್ಯಾಟಿಂಗ್‌ ವೇಳೆ ಈತನ ಯೋಜನೆಗಳು ತುಂಬಾ ಸ್ಪಷ್ಟವಾಗಿದ್ದುವು. ಯಾವಾಗ ನಿಮ್ಮ ಯೋಜನೆಗಳನ್ನು ನಂಬುತ್ತಿರೋ ಆಗ ಅದು ಕೆಲಸ ಮಾಡುತ್ತೆ ಎಂದಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್ ತಂಡದಿಂದ ಹೊರಗುಳಿದ ಪರಿಣಾಮ ರಾಹುಲ್‌ ಸ್ಥಾನ ಪಡೆದು ಉತ್ತಮ ಪ್ರದರ್ಶ ನೀಡಿದ್ದಾರೆ. 11ರ ಬಳಗಳದಲ್ಲಿ ರಾಹುಲ್‌ ಆಡುವುದಿಲ್ಲ. ಮಯಾಂಕ್‌ ಆಡುತ್ತಾನೆ ಇಂತಹ ಯಾವುದೇ ಚರ್ಚೆಗಳು ನಾವು ಮಾಡಿರಲಿಲ್ಲ. ದೃರಾದುಷ್ಟವಶಾತ್‌ ಮಯಾಂಕ್‌ ಹೊರಗುಳಿಯಬೇಕಾಯಿತು. ರಾಹುಲ್‌ಗೆ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎದ್ದು ನಿಂತು ಚಪ್ಪಾಳೆ: ಕನ್ನಡಿಗನ ಶತಕದಾಟಕ್ಕೆ ಸಹ ಆಟಗಾರರು ಅಭಿನಂದಿಸಿದ್ದು ಹೀಗೆ!

ಒಮ್ಮೆ ಬ್ಯಾಟಿಂಗ್‌ಗೆ ಹೋದಾಗ ರನ್‌ಗಳಿಸಲು ಅಲ್ಲಿ ಏನು ಮಾಡಬೇಕು ಎಂಬುದನ್ನಷ್ಟೇ ಚರ್ಚಿಸುತ್ತೇವೆ. ನಾನು ಇದೇ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ರಾಹುಲ್‌ ಜೊತೆ ಆರಂಭಿಕನಾಗಿ ಕಣಕ್ಕೆ ಇಳಿದಿದ್ದು. ಹತ್ತಾರು ಬಾರಿ ನಾವು ಆರಂಭಿಕರಾಗಿ ಕಣಕ್ಕಿಳಿದ್ದೇವೆ. ನಮ್ಮಿಬ್ಬರ ಆಟ ಗೊತ್ತಿರುವುದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ ಎಂದು ರಾಹುಲ್‌ ಜೊತೆಗಿನ ಬ್ಯಾಟಿಂಗ್ ಅನುಭವವನ್ನು ರೋಹಿತ್‌ ಶರ್ಮಾ ಹಂಚಿಕೊಂಡರು.

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್‌ ಶತಕ ಸಿಡಿಸಿದರೆ ರೋಹಿತ್‌ 83 ರನ್‌ಗಳ ಅರ್ಧ ಶತಕದ ಉಪಯುಕ್ತ ಕಾಣಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.