ಮೆಲ್ಬೋರ್ನ್ : ಆ್ಯಶಸ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 3ನೇ ದಿನ ಕೇವಲ 68 ರನ್‌ಗೆ ಆಲೌಟ್ ಆಗುವ ಮೂಲಕ ಆ್ಯಶಸ್ ಸರಣಿಯನ್ನು ಯಾವುದೇ ಪ್ರತಿರೋಧವಿಲ್ಲದೆ ಕಳೆದುಕೊಂಡಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 185ಕ್ಕೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 267 ರನ್ಗಳಿಸಿ 82 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
2ನೇ ದಿನ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 31 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. 3ನೇ ದಿನವಾದ ಮಂಗಳವಾರ ಸ್ಕಾಟ್ ಬೋಲೆಂಡ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 68 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 14 ರನ್ಗಳ ಹೀನಾಯ ಸೋಲು ಕಂಡಿತು.
2019ರಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 92 ರನ್ಗಳಿಗೆ ಆಲೌಟ್ ಆಗಿತ್ತು. ಈ ಸಂದರ್ಭದಲ್ಲಿ ವಾನ್, ಭಾರತ 92ಕ್ಕೆ ಆಲೌಟ್ ಆಗಿದೆ. ಈ ದಿನಗಳಲ್ಲಿ 100ರೊಳಗೆ ಯಾವುದೇ ತಂಡ ಆಲೌಟ್ ಆಗುವುದನ್ನ ನಂಬುವುದಕ್ಕಾಗುವುದಿಲ್ಲ ಎಂದು ಗೇಲಿ ಮಾಡಿ ಟ್ವೀಟ್ ಮಾಡಿದ್ದರು.
-
England 68 all out @MichaelVaughan 🙈 #Ashes pic.twitter.com/lctSBLOsZK
— Wasim Jaffer (@WasimJaffer14) December 28, 2021 " class="align-text-top noRightClick twitterSection" data="
">England 68 all out @MichaelVaughan 🙈 #Ashes pic.twitter.com/lctSBLOsZK
— Wasim Jaffer (@WasimJaffer14) December 28, 2021England 68 all out @MichaelVaughan 🙈 #Ashes pic.twitter.com/lctSBLOsZK
— Wasim Jaffer (@WasimJaffer14) December 28, 2021
ಇದೀಗ ಮಂಗಳವಾರ ಇಂಗ್ಲೆಂಡ್ 68 ರನ್ಗಳಿಗೆ ಆಲೌಟ್ ಆಗಿದ್ದಕ್ಕೆ ಜಾಫರ್ ಮೈಕಲ್ ವಾನ್ರ ಹಳೆಯ ಟ್ವೀಟ್ ಶೇರ್ ಮಾಡಿದ್ದು, ಇಂಗ್ಲೆಂಡ್ 68ಕ್ಕೆ ಆಲೌಟ್ ಎಂದು ಬರೆದು ಮೈಕಲ್ ವಾನ್ಗೆ ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈಗಾಗಲೇ 7.5 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. 11.7 ಸಾವಿರ ಮಂದಿ ಮರು ಟ್ವೀಟ್ ಮಾಡಿಕೊಂಡಿದ್ದರೆ 65 ಸಾವಿರಕ್ಕೂ ಹೆಚ್ಚು ಲೈಕ್ ಮತ್ತು 1600ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಮೈಕಲ್ ವಾನ್ ಮತ್ತು ವಾಸಿಮ್ ಜಾಫರ್ ನಡುವೆ ಆನ್ಲೈನ್ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಿರುತ್ತಾರೆ. ಇದು ಕಳೆದ 2 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಸದ್ಯಕ್ಕೆ ಜಾಫರ್ ಮಾಡಿರುವ ಟ್ವೀಟ್ಗೆ ಮೈಕಲ್ ವಾನ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:ಇಂಗ್ಲೆಂಡ್ಗೆ ಹೀನಾಯ ಸೋಲು.. ಆ್ಯಶಸ್ ಕಪ್ ಮರಳಿ ಪಡೆದ ಆಸ್ಟ್ರೇಲಿಯಾ!