ETV Bharat / sports

ವಿರಾಟ್ ಕೊಹ್ಲಿ ಭಾರತಕ್ಕಾಗಿ ರನ್ ಗಳಿಸುತ್ತಾರೆ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್ - ಈಟಿವಿ ಭಾರತ ಕನ್ನಡ

ಗ್ರೆಗ್​ ಚಾಪೆಲ್​ ಅವರು ಖಾಸಗಿ ಮಾಧ್ಯಮ ಸಂದರ್ಶನದಲ್ಲಿ ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
author img

By

Published : Jun 3, 2023, 2:28 PM IST

Updated : Jun 3, 2023, 7:56 PM IST

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರ ಫೈನಲ್​ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪ್ರಶಸ್ತಿ ಹಣಾಹಣಿ ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್‌ ಮೈದಾನದಲ್ಲಿ ನಡೆಯಲಿದೆ. ಈಗಾಲೇ ಭಾರತ ತಂಡ ಇಂಗ್ಲೆಂಡ್ ತಲುಪಿದ್ದು, ಕಠಿಣ ಅಭ್ಯಾಸ ನಡೆಸುತ್ತಿದೆ. ಈ ನಡುವೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಖಾಸಗಿ ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಚಾಂಪಿಯನ್ಸ್​ ಶಿಪ್​ ಪಂದ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್​​ ಕೊಹ್ಲಿಗೆ ಓವಲ್​ ಪಿಚ್​ನ ಪರಿಸ್ಥಿತಿಗಳು ಸರಿಹೊಂದುತ್ತವೆ" ಎಂದು ಚಾಪೆಲ್ ಹೇಳಿದ್ದಾರೆ. ವಾಸ್ತವವಾಗಿ, ಓವಲ್‌ನಲ್ಲಿನ ಪರಿಸ್ಥಿತಿಗಳು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಅನುಕೂಲಕರವಾಗಿರುತ್ತದೆ. ಕೊಹ್ಲಿ ತಮ್ಮ ತಂಡಕ್ಕೆ ಹೆಚ್ಚಿನ್​ ರನ್ ಮಳೆ ಹರಿಸಲಿದ್ದಾರೆ ಎಂದು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತಾರೆ: ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಇದನ್ನು ನಾವು ಆಸ್ಟ್ರೇಲಿಯಾದಲ್ಲಿ ನೋಡಿದ್ದೇವೆ. ಅವರು ಎಷ್ಟು ಒಳ್ಳೆಯ ಆಟಗಾರ ಎಂಬುದಕ್ಕೆ ಅವರ ದಾಖಲೆಯೇ ಸಾಕ್ಷಿ. ನನ್ನ ಕ್ರಿಕೆಟ್​ನ ಅನುಭವದ ಪ್ರಕಾರ ಓವಲ್​ನಲ್ಲಿ ಬೌಲಿಂಗ್​ ಬೌನ್ಸ್​ ಅಗಿಲಿದ್ದು, ಅದು ವಿರಾಟ್‌ಗೆ ಸರಿ ಹೊಂದುತ್ತದೆ ಎಂದು ಹೇಳಿದರು. ವಿರಾಟ್​ ಈ ಪಂದ್ಯಕ್ಕಾಗಿ ಮಾನಸಿಕವಾಗಿಯೂ ಸಿದ್ದರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಭಾರತಕ್ಕೆ ಹೆಚ್ಚಿನ ರನ್ ಗಳಿಸುವ ಸಾಧ್ಯತೆ ಎಂದ ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ರೋಹಿತ್​ ಶರ್ಮಾ ಫಾರ್ಮ್​ ಬಗ್ಗೆ ಚಾಪೆಲ್​ ಪ್ರತಿಕ್ರಿಯೆ: ರೋಹಿತ್​ ಶರ್ಮಾರ ಐಪಿಎಲ್ ಫಾರ್ಮ್, ಈ ಫೈನಲ್​ ಪಂದ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಐಪಿಎಲ್ ವಿಭಿನ್ನವಾಗಿದೆ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹವಾಮಾನ, ಪರಿಸ್ಥಿತಿಗಳು, ಸ್ವರೂಪ, ಎಲ್ಲವೂ ವಿಭಿನ್ನವಾಗಿದೆ. ಐಪಿಎಲ್​ ಫಾರ್ಮ್​ ರೋಹಿತ್​ ಶರ್ಮಾರ ಮೇಲೆ ಪ್ರಭಾವ ಬೀರಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಟೆಸ್ಟ್​ನಲ್ಲಿ ಉತ್ತಮ ಪಾರ್ಮ್​ ಹೊಂದಿದ್ದಾರೆ ಎಂದು ಹೇಳಿದರು.

ಸ್ಟೀವ್​ ಸ್ಮಿತ್​ ಪ್ರತಿಕ್ರಿಯೆ: ಕಳೆದ ಮೂರು ದಿನಗಳ ಹಿಂದೆ ಪಂದ್ಯದ ಬಗ್ಗೆ ಆಸಿಸ್​ ಬ್ಯಾಟರ್​ ಸ್ಮಿತ್​ ಮಾತನಾಡಿದ್ದರು. ಓವಲ್ ಕೆಲವೊಮ್ಮೆ ಸ್ಪಿನ್‌ನೊಂದಿಗೆ ಉತ್ತಮವಾಗಿ ವರ್ತಿಸುತ್ತದೆ. ಭಾರತದ ಬೌಲರ್​ಗಳು ಈ ಪಿಚ್​ಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಹೀಗಾಗಿ ಅವರ ಸ್ಪಿನ್​ ಬೌಲಿಂಗ್​ ಬಗ್ಗೆ ವಿಶೇಷ ಗಮನ ಇಡಬೇಕಾಗುತ್ತದೆ ಎಂದು ಹೇಳಿದ್ದರು.

ಇನ್ನು ಭಾರತ ಸತತ ಎರಡನೇ ಬಾರಿಗೆ ಟೆಸ್ಟ್​ ಚಾಂಪಿಯನ್ಸ್​ ಶಿಪ್​​ ಫೈನಲ್‌ ಆಡುತ್ತಿದೆ. ಕಳೆದ ಬಾರಿಯ ಡಬ್ಲೂಟಿಸಿ ಫೈನಲ್​ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು.

ಇದನ್ನೂ ಓದಿ: WTC Final 2023: ಭಾರತದ ಸ್ಪಿನ್ ಬೌಲರ್​ಗಳು ಓವೆಲ್​ ಪಿಚ್​ನಲ್ಲೂ ಕಾಡುವ ಭಯ ಇದೆ - ಸ್ಟೀವ್​ ಸ್ಮಿತ್​​

Last Updated : Jun 3, 2023, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.