ಸೌತಾಂಪ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಈ ಮೂಲಕ ನಿರಾಸೆಗೊಳಗಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡದ ವಿರುದ್ಧ ಅನೇಕ ಟೀಕೆ ಕೇಳಿ ಬರುತ್ತಿದ್ದು, ಇದರ ಮಧ್ಯೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರೇರಣಾತ್ಮಕ ಟ್ವೀಟ್ ಮಾಡಿದ್ದಾರೆ.
-
This isn’t just a team. It’s a family. We move ahead. TOGETHER 💙🇮🇳 pic.twitter.com/E5ATtCGWLo
— Virat Kohli (@imVkohli) June 24, 2021 " class="align-text-top noRightClick twitterSection" data="
">This isn’t just a team. It’s a family. We move ahead. TOGETHER 💙🇮🇳 pic.twitter.com/E5ATtCGWLo
— Virat Kohli (@imVkohli) June 24, 2021This isn’t just a team. It’s a family. We move ahead. TOGETHER 💙🇮🇳 pic.twitter.com/E5ATtCGWLo
— Virat Kohli (@imVkohli) June 24, 2021
ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡ ಒಂದು ದಿನದ ಬಳಿಕ ಕೊಹ್ಲಿ ಈ ಟ್ವೀಟ್ ಮಾಡಿದ್ದು, ತಂಡಕ್ಕೆ ಪ್ರೇರಣೆ ನೀಡುವ ಸಂದೇಶ ಹಂಚಿಕೊಂಡಿದ್ದಾರೆ. 'ಇದು ಕೇವಲ ಒಂದು ತಂಡವಲ್ಲ, ಒಂದು ಕುಟುಂಬ, ಒಟ್ಟಾಗಿ ಮುಂದೆ ಸಾಗುತ್ತೇವೆ 'ಎಂದಿದ್ದಾರೆ. (This isn’t just a team. It’s a family. We move ahead. TOGETHER)
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ 8 ವಿಕೆಟ್ಗಳ ಸೋಲು ಕಂಡಿದ್ದು, ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡ ಚೊಚ್ಚಲ ಐಸಿಸಿ ಚಾಂಪಿಯನ್ಶಿಪ್ ಪ್ರಶಸ್ತಿಗೆ ಮುತ್ತಿಕ್ಕಿದೆ. ಇದೀಗ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.