ETV Bharat / sports

ಅಂಪೈರ್​ ನಿತಿನ್​ ಮೆನನ್​​ ಬಂಧಿಸಿ: ವಿರಾಟ್​ ಕೊಹ್ಲಿ ವಿವಾದಿತ ಔಟ್​ಗೆ ನೆಟ್ಟಿಗರ ಆಕ್ರೋಶ - India Australia test series

ವಿರಾಟ್​ ಕೊಹ್ಲಿ ಔಟ್​ ವಿವಾದ- ಆಸ್ಟ್ರೇಲಿಯಾ ಭಾರತ ಟೆಸ್ಟ್​ ಸರಣಿ- ವಿರಾಟ್​ ಕೊಹ್ಲಿ ವಿವಾದಿತ ಔಟ್​ಗೆ ನೆಟ್ಟಿಗರ ಆಕ್ರೋಶ- ಅಂಪೈರ್​ ನಿತಿನ್​ ಮೆನನ್​ ಟ್ರೋಲ್​- ಅಂಪೈರ್​ ನಿರ್ಧಾರದ ವಿರುದ್ಧ ನೆಟ್ಟಿಗರ ಆಕ್ರೋಶ

virat kohlis controversial lbw dismissal
ವಿರಾಟ್​ ಕೊಹ್ಲಿ ವಿವಾದಿತ ಔಟ್​ಗೆ ನೆಟ್ಟಿಗರ ಆಕ್ರೋಶ
author img

By

Published : Feb 18, 2023, 7:42 PM IST

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದ ವಿರಾಟ್ ಕೊಹ್ಲಿ ಔಟಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಫೀಲ್ಡ್​ ಅಂಪೈರ್ ನಿತಿನ್ ಮೆನನ್ ನೀಡಿದ ನಿರ್ಧಾರಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ಔಟ್​ ಅಲ್ಲ" ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದಾರೆ.

ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​​ನಲ್ಲಿ ಉಭಯ ತಂಡಗಳು ಪೈಪೋಟಿಗೆ ಬಿದ್ದಂತೆ ಆಡುತ್ತಿವೆ. ಇದೇ ವೇಳೆ ವಿವಾದಿತ ಔಟ್​ನಿಂದಾಗಿಯೂ ಸದ್ದು ಮಾಡುತ್ತಿದೆ. ಕಳೆದ ಪಂದ್ಯದಲ್ಲಿ ರನ್​ ಗಳಿಸಲು ಪರದಾಡಿದ್ದ ವಿರಾಟ್​ ಲಯ ಕಂಡುಕೊಂಡು ಉತ್ತಮವಾಗಿ ಆಡುತ್ತಿದ್ದಾಗ ಮೈದಾನದ ಅಂಪೈರ್​ ನಿತಿನ್​ ಮೆನನ್​ ಮತ್ತು ಮೂರನೇ ಅಂಪೈರ್​ ನೀಡಿದ ಔಟ್​ ತೀರ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಷ್ಟಕ್ಕೂ ಏನಾಯ್ತು?: ವಿವಾದ ಸೃಷ್ಟಿಯಾಗಿದ್ದ ಪಂದ್ಯದ 50 ನೇ ಓವರ್​ನಲ್ಲಿ. 84 ಎಸೆತಗಳಲ್ಲಿ 44 ರನ್​ ಮಾಡಿ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದ ಕೊಹ್ಲಿ ಆಸೀಸ್​ ಬೌಲರ್​ಗಳನ್ನು ಬೆಂಡೆತ್ತುತ್ತಿದ್ದರು. ಅಲ್ಲದೇ, 125 ರನ್​ಗಳಿಗೆ ತಂಡ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿತ್ತು. ರನ್​ ಗಳಿಸುವ ಹೊಣೆ ಹೊತ್ತಿದ್ದ ವಿರಾಟ್​ ಮೈದಾನದಲ್ಲಿ ನೆಲೆಯೂರಿದ್ದರು. 50 ನೇ ಓವರ್​ ಎಸೆದ ಮ್ಯಾಥ್ಯೂ ಖುನ್ನೆಮನ್​ ಬೌಲಿಂಗ್​ನಲ್ಲಿ ವಿರಾಟ್​ ಚೆಂಡನ್ನು ಡಿಫೆಂಡ್​ ಮಾಡುವಾಗ ಅದು ಬ್ಯಾಟ್​ ಮತ್ತು ಪ್ಯಾಡ್​ ಮಧ್ಯೆ ಸಿಲುಕಿತ್ತು.

ಈ ವೇಳೆ ಆಸೀಸ್​ ಆಟಗಾರರು ಸಲ್ಲಿಸಿದ ಮನವಿಗೆ ಅಂಪೈರ್​ ನಿತಿನ್​ ಮೆನನ್​​ ತಕ್ಷಣವೇ ಸ್ಪಂದಿಸಿ ಔಟ್​ ನೀಡಿದರು. ಇದು ವಿರಾಟ್​ಗೂ ಅಚ್ಚರಿ ಉಂಟು ಮಾಡಿತು. ಮರುಕ್ಷಣವೇ ಡಿಆರ್​ಎಸ್​ ಮೊರೆ ಹೋದರು. ಮೂರನೇ ಅಂಪೈರ್​ ಎಲ್ಲ ಕೋನಗಳಿಂದ ಪರಿಶೀಲಿಸಿದರು. ಬ್ಯಾಟ್​, ಪ್ಯಾಡ್​ ಮಧ್ಯೆ ಸಮನಾಗಿ ತೂರಿಕೊಂಡು ಹೋಗಿದ್ದ ಬಾಲ್​ ಔಟೋ​ ಅಥವಾ ನಾಟೌಟ್​ ಎಂಬ ನಿರ್ಣಯ ಕಷ್ಟಕರವಾಗಿತ್ತು. ಕೊನೆಯಲ್ಲಿ ಮೂರನೇ ಅಂಪೈರ್​ ಔಟ್​ ಎಂದು ಘೋಷಿಸಿದರು. ಇದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಬ್ಯಾಟ್​ ಜೊತೆಗೆ ಪ್ಯಾಡ್​ಗೆ ಚೆಂಡು ತಾಕಿದ್ದು, ಟಿವಿ ರಿಪ್ಲೈನಲ್ಲಿ ಕಾಣುತ್ತಿತ್ತು. ವಿರಾಟ್ ಕೊಹ್ಲಿ ನಿರಾಸೆಯೊಂದಿಗೆ ಪೆವಿಲಿಯನ್​ಗೆ ತೆರಳಿದರು.

ಅಭಿಮಾನಿಗಳ ಕೆಂಗಣ್ಣು: ಕೊಹ್ಲಿಯನ್ನು ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದ್ದು ವಿವಾದ ಎಬ್ಬಿಸಿದೆ. ಭಾರತದ ಮಾಜಿ ಕ್ರಿಕೆಟಿಗರಾದ ಅಭಿನವ್ ಮುಕುಂದ್ ಮತ್ತು ವಾಸಿಂ ಜಾಫರ್ ಕೂಡ ಪ್ರತಿಕ್ರಿಯಿಸಿದ್ದಾರೆ. "ಇದು ನಾಟ್ ಔಟ್. ಪ್ಯಾಡ್‌ಗೆ ಮುಂಚಿತವಾಗಿ ಚೆಂಡು ಬ್ಯಾಟ್‌ಗೆ ಬಡಿದಿದೆ. ಮೂರನೇ ಅಂಪೈರ್ ನಿರ್ಧಾರದ ಬಗ್ಗೆ ಅನುಮಾನಗಳಿವೆ" ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

'ಅಂಪೈರ್‌ಗಳು ವಿರಾಟ್ ಕೊಹ್ಲಿಯನ್ನು ಎಂದಿಗೂ ಬೆಂಬಲಿಸುವುದಿಲ್ಲ' ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಕೊಹ್ಲಿ ಪಂದ್ಯದಲ್ಲಿ ಶತಕ ಬಾರಿಸುತ್ತಿದ್ದರು ಎಂದು ಕೆಲವು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಅಂಪೈರ್​ ನಿತಿನ್ ಮೆನನ್ ಹಲವು ಬಾರಿ ತಪ್ಪು ನಿರ್ಧಾರ ಮಾಡಿದ್ದಾರೆ. ಅವರನ್ನು ಬಂಧಿಸಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದಲ್ಲದೇ ಟ್ವಿಟರ್​ನಲ್ಲಿ "ನಾಟ್ ಔಟ್" ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ನಿತಿನ್​ ಮೆನನ್​ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಇನ್ನು ಪಂದ್ಯದಲ್ಲಿ ಭಾರತ ತನ್ನ ಮೊದಲ ಇನಿಂಗ್ಸ್​ನಲ್ಲಿ 262 ರನ್​ಗೆ ಆಲೌಟ್​ ಆಯಿತು. ವಿರಾಟ್​ ಕೊಹ್ಲಿ, ಅಕ್ಷರ್ ಪಟೇಲ್​ ಮತ್ತು ಅಶ್ವಿನ್​, ರೋಹಿತ್​ ಹೊರತುಪಡಿಸಿ ಯಾವೊಬ್ಬ ಬ್ಯಾಟ್ಸ್​ಮನ್ ರನ್​ ಗಳಿಸಲಿಲ್ಲ. ಇದರಿಂದ ಭಾರತ 1 ರನ್​ ಹಿನ್ನಡೆ ಹೊಂದಿತು. ಬಳಿಕ 2ನೇ ಇನಿಂಗ್ಸ್​ ಆರಂಭಿಸಿರುವ ಆಸೀಸ್​ ಬಳಗಕ್ಕೆ ಆರಂಭಿಕ ಪೆಟ್ಟು ಬಿದ್ದಿದೆ. ರನ್​ ವೈಫಲ್ಯ ಅನುಭವಿಸುತ್ತಿರುವ ಡೇವಿಡ್​ ವಾರ್ನರ್​ ಬದಲಾಗಿ ಆರಂಭಿಕನಾಗಿ ಕಣಕ್ಕಿಳಿದ ಉಸ್ಮಾನ್​ ಖವಾಜಾ ವಿಕೆಟ್​ ಕಳೆದುಕೊಂಡರು. 2ನೇ ದಿನದಾಟದ ಅಂತ್ಯಕ್ಕೆ ಕಾಂಗರೂ ಪಡೆ 61 ರನ್​ ಗಳಿಸಿ, ಒಟ್ಟಾರೆ 62 ರನ್​ ಮುನ್ನಡೆ ಪಡೆದಿದೆ.

ಓದಿ: 2ನೇ ಟೆಸ್ಟ್​: 262 ರನ್​ಗೆ ಭಾರತ ಆಲೌಟ್​..ಆಸೀಸ್​ಗೆ ಆರಂಭಿಕ ಆಘಾತ, 62 ರನ್​ ಮುನ್ನಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.