ETV Bharat / sports

ಕೊನೆಗೂ ಟಾಸ್​ ಗೆದ್ದ ಕೊಹ್ಲಿ.. ಇಂಗ್ಲೆಂಡ್​ ನೆಲದಲ್ಲಿ ಸತತ ಟಾಸ್​ ಸೋಲಿನ ಸರಪಳಿಗೆ ಬ್ರೇಕ್

ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಬುಧವಾರ ಲೀಡ್ಸ್​ನಲ್ಲಿ ಟಾಸ್​ ಗೆದ್ದು, ಬ್ಯಾಟಿಂಗ್ ಶುರು ಮಾಡಿದೆ. ಇದಕ್ಕೂ ಮುನ್ನ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ನೆಲದಲ್ಲಿ ​ಸತತ 8 ಬಾರಿ ಟಾಸ್​ ಸೋಲು ಕಂಡಿದ್ದರು. ಆದರೆ, 9ನೇ ಬಾರಿಗೆ ಟಾಸ್​ ಗೆದಿದ್ದಾರೆ.

Virat Kohli wins toss in England after eight Tests
ಇಂಗ್ಲೆಂಡ್​ ನೆಲದಲ್ಲಿ ಸತತ ಟಾಸ್​ ಸೋಲಿನ ಸರಪಳಿಗೆ ಬ್ರೇಕ್
author img

By

Published : Aug 25, 2021, 4:15 PM IST

Updated : Aug 25, 2021, 4:45 PM IST

ಲೀಡ್ಸ್​​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅಂತೂ ಇಂತೂ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್ ಗೆಲುವು ಕಂಡಿದ್ದಾರೆ. ಲೀಡ್ಸ್​ನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್​ ಸರಣಿಯ 3ನೇ​ ಪಂದ್ಯದಲ್ಲಿ ಟಾಸ್​ ಗೆಲ್ಲುವ ಮೂಲಕ ಆಂಗ್ಲರ ನೆಲದಲ್ಲಿ ಸತತ ಟಾಸ್​ ಸೋಲಿನ ಸರಪಳಿ ಕಳಚಿದ್ದಾರೆ.

ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಬುಧವಾರ ಲೀಡ್ಸ್​ನಲ್ಲಿ ಟಾಸ್​ ಗೆಲುವು ಸಾಧಿಸಿ ಬ್ಯಾಟಿಂಗ್ ಶುರು ಮಾಡಿದೆ. ಇದಕ್ಕೂ ಮುನ್ನ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ನೆಲದಲ್ಲಿ ​ಸತತ 8 ಬಾರಿ ಟಾಸ್​ ಸೋಲು ಕಂಡಿದ್ದರು.

ಆಸಕ್ತಿಕರ ವಿಷಯವೆಂದರೆ ವಿರಾಟ್​ ಕೊಹ್ಲಿ 2018ರ ಪ್ರವಾಸದಲ್ಲಿ ಎಲ್ಲಾ 5 ಪಂದ್ಯಗಳಲ್ಲೂ ಟಾಸ್​ ಸೋಲು ಕಂಡಿದ್ದರು. ಇದೀಗ ಪ್ರಸ್ತುತ ಪ್ರವಾಸದಲ್ಲೂ ಮೊದಲೆರಡು ಪಂದ್ಯಗಳಲ್ಲಿ ಟಾಸ್​ ಕಳೆದುಕೊಳ್ಳುವ ಮೂಲಕ ನಿರಾಸೆಯನುಭವಿಸಿದ್ದರು

ಆದರೂ ಕೊಹ್ಲಿ ಇಂಗ್ಲೆಂಡ್​ ವಿರುದ್ಧ 17 ಟೆಸ್ಟ್​ಗಳಲ್ಲಿ ಕೇವಲ 3 ಬಾರಿ ಮಾತ್ರ ಗೆದ್ದಿದ್ದಾರೆ. ಉಳಿದೆಲ್ಲಾ ಟೆಸ್ಟ್​ ಪಂದ್ಯಗಳಲ್ಲಿ ಟಾಸ್​ ಸೋತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಕೊಹ್ಲಿ ಟಾಸ್ ವಿಚಾರದಲ್ಲಿ​ ಹಿಂದುಳಿದಿದ್ದಾರೆ. 85 ಪಂದ್ಯಗಳಲ್ಲಿ ಟಾಸ್​ ಗೆದ್ದಿದ್ದರೆ, 118 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಇದನ್ನು ಓದಿ:ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅಂಕಪಟ್ಟಿ ​: ಅಗ್ರ 2ರಲ್ಲಿ ಭಾರತ-ಪಾಕಿಸ್ತಾನ

Last Updated : Aug 25, 2021, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.