ಕೇಪ್ಟೌನ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲಿದೆ. ಕೆ.ಎಲ್.ರಾಹುಲ್ ನೇತೃತ್ವದಲ್ಲಿ ಟೀಂ ಇಂಡಿಯಾ ಸಂಪೂರ್ಣವಾಗಿ ಸನ್ನದ್ಧವಾಗಿದೆ.
ಈ ಬಳಗದಲ್ಲಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ, ಡೆಲ್ಲಿ ಡ್ಯಾಶರ್ ಏಕದಿನ ನಾಯಕತ್ವದಿಂದ ಕೆಳಗಿಳಿದ ಬಳಿಕ ನಡೆಯುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಕನ್ನಡಿಗ ರಾಹುಲ್ ಮುನ್ನಡೆಸುತ್ತಿದ್ದು, ಅಭ್ಯಾಸದ ವೇಳೆ ಕೆ.ಎಲ್ ಮಾತನಾಡ್ತಿದ್ದಾಗ ವಿರಾಟ್ ಕೇಳುಗನಾಗಿ ನಿಂತಿರುವುದು ಕಂಡುಬಂತು. ಇಷ್ಟುದಿನ ತಂಡವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಕಳೆದ ವರ್ಷ ಐಸಿಸಿ ಟಿ-20 ವಿಶ್ವಕಪ್ ಮುಗಿಯುತ್ತಿದ್ದಂತೆ ನಾಯಕತ್ವ ತ್ಯಜಿಸಿದ್ದರು. ಇದರ ನಂತರ ಅವರನ್ನು ಏಕದಿನ ನಾಯಕತ್ವದಿಂದಲೂ ಕೆಳಗಿಳಿಸಲಾಗಿತ್ತು. ಇದೀಗ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
ODI MODE 🔛
— BCCI (@BCCI) January 17, 2022 " class="align-text-top noRightClick twitterSection" data="
We are here at Boland Park to begin prep for the ODIs 👍🏻#TeamIndia | #SAvIND pic.twitter.com/psMVDaNwbc
">ODI MODE 🔛
— BCCI (@BCCI) January 17, 2022
We are here at Boland Park to begin prep for the ODIs 👍🏻#TeamIndia | #SAvIND pic.twitter.com/psMVDaNwbcODI MODE 🔛
— BCCI (@BCCI) January 17, 2022
We are here at Boland Park to begin prep for the ODIs 👍🏻#TeamIndia | #SAvIND pic.twitter.com/psMVDaNwbc
ಇದನ್ನೂ ಓದಿ: ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ; ರನ್ಗಳಿಸುವುದರ ಕಡೆ ವಿರಾಟ್ ಗಮನಹರಿಸಲಿ- ಗಂಭೀರ್
ನಾಳೆಯಿಂದ ಏಕದಿನ ಕ್ರಿಕೆಟ್ ಸರಣಿ ಆರಂಭಗೊಳ್ಳಲಿರುವ ಕಾರಣ ತಂಡದ ಸದಸ್ಯರು ಇಂದು ಅಂತಿಮ ಕಸರತ್ತು ನಡೆಸಿದರು. ಈ ವೇಳೆ ಕ್ಯಾಪ್ಟನ್ ರಾಹುಲ್ ಹಾಗೂ ಕೋಚ್ ದ್ರಾವಿಡ್ ತಂಡದ ಸದಸ್ಯರಿಗೆ ಕೆಲವು ಕಿವಿಮಾತು ಹೇಳಿದರು. ತಂಡದ ಇತರೆ ಸದಸ್ಯರೊಂದಿಗೆ ವಿರಾಟ್ ನಿಂತು ಅವರ ಮಾತು ಕೇಳಿಸಿಕೊಂಡರು.
ಇದೇ ಮೊದಲ ಸಲ ನಾಯಕನಾಗಿ ಆಯ್ಕೆಯಾಗಿ ತಂಡ ಮುನ್ನಡೆಸುತ್ತಿರುವ ರಾಹುಲ್ ಅತಿದೊಡ್ಡ ಜವಾಬ್ದಾರಿ ನಿರ್ವಹಿಸುತ್ತಿದ್ದು, ದೊಡ್ಡ ಅಗ್ನಿಪರೀಕ್ಷೆಗೆ ಒಳಪಡಲಿದ್ದಾರೆ. ಒಂದು ವೇಳೆ ಅವರು ಮೂರು ಪಂದ್ಯಗಳ ಸರಣಿಯಲ್ಲಿ ಯಶಸ್ವಿಯಾದರೆ, ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯೂ ದಟ್ಟವಾಗಿದೆ.