ಹೈದರಾಬಾದ್: ವಿರಾಟ್ ಕೊಹ್ಲಿ (Virat Kohli) ಭಾರತ ತಂಡಕ್ಕೆ ಮರಳಿದ ನಂತರವೂ ಸೂರ್ಯಕುಮಾರ್ ಯಾದವ್ (Suryakumar Yadav) 3ನೇ ಕ್ರಮಾಂಕದಲ್ಲೇ ಆಡಬೇಕೆಂದು ಟೀಂ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ (Gautam Gambhir) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಪ್ರವಾಸಿ ನ್ಯೂಜಿಲ್ಯಾಂಡ್ (New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಯಾದವ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನನಗಾಗಿ ತಮ್ಮ 3ನೇ ಬ್ಯಾಟಿಂಗ್ ಕ್ರಮಾಂಕ ತ್ಯಾಗ ಮಾಡಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿಗಿಂತಲೂ ಸೂರ್ಯಕುಮಾರ್ಗೆ 3ನೇ ಬ್ಯಾಟಿಂಗ್ ಕ್ರಮಾಂಕ ಹೆಚ್ಚು ಸೂಕ್ತ: ಗೌತಮ್ ಗಂಭೀರ್
ಅನೇಕ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕ ನನಗಾಗಿ ತ್ಯಾಗ ಮಾಡಿದ್ದಾರೆ ಎಂದಿರುವ ಯಾದವ್, ಟೀಂ ಇಂಡಿಯಾಗೆ (Team India) ನಾನು ಪದಾರ್ಪಣೆ (ಇಂಗ್ಲೆಂಡ್ ವಿರುದ್ಧದ ಸರಣಿ) ಮಾಡಿದ್ದ ವೇಳೆ ವಿರಾಟ್ ನನಗಾಗಿ ಮೂರನೇ ಕ್ರಮಾಂಕ ಬಿಟ್ಟು, 4ನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ್ದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶ್ವಕಪ್ ವೇಳೆ ಕೂಡ ಅನೇಕ ಪಂದ್ಯಗಳಲ್ಲಿ ನನಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಹೋಗುವಂತೆ ಅವರು ತಿಳಿಸಿದ್ದಾರೆ. ತಂಡದಲ್ಲಿ ನಾನು ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಮಾಡಲು ಸಿದ್ಧ. ಆರಂಭಿಕನಾಗಿ ಕಣಕ್ಕಿಳಿದು, 7ನೇ ಕ್ರಮಾಂಕದವರೆಗೂ ನಾನು ಬ್ಯಾಟ್ ಬೀಸಿದ್ದೇನೆ. ಐಪಿಎಲ್ನಲ್ಲಿ ಕಳೆದ ಮೂರು ವರ್ಷಗಳಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 62ರನ್ಗಳಿಕೆ ಮಾಡಿದ್ದರು.