ದುಬೈ: ಐಸಿಸಿ ಪ್ರಕಟಿಸಿ ನೂತನ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರು ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಏರಿಕೆ ಕಂಡಿದ್ದಾರೆ. 14 ಸ್ಥಾನಗಳ ಏರಿಕೆ ಸಾಧಿಸಿ 15ನೇ ಶ್ರೇಯಾಂಕ ಪಡೆದಿದ್ದಾರೆ.
2019ಕ್ಕೂ ಮೊದಲು ಅವರು ಚುಟುಕು ಕ್ರಿಕೆಟ್ನಲ್ಲಿ ಉತ್ತುಂಗದಲ್ಲಿದ್ದರು. ಬಳಿಕ ಲಯದ ಸಮಸ್ಯೆಯಿಂದ ಟಾಪ್ 10 ರಿಂದ ಹೊರಬಿದ್ದಿದ್ದರು. ಇದಾದ 3 ವರ್ಷಗಳಿಂದ ಶ್ರೇಯಾಂಕದಿಂದ ದೂರವೇ ಇದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದರು. ಇದೇ ರ್ಯಾಂಕಿಂಗ್ನಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ 7ಸ್ಥಾನ ಏರಿಕೆ ಕಂಡು 23 ಶ್ರೇಯಾಂಕ ಪಡೆದಿದ್ದಾರೆ.
ಟಿ20 ಬೌಲರ್ಗಳ ಪಟ್ಟಿ: ಆರಂಭಿಕ ಪಂದ್ಯಗಳಲ್ಲಿ ವಿಕೆಟ್ ಪಡೆಯದೇ ಟೀಕೆಗೆ ಗುರಿಯಾಗಿದ್ದ ಭಾರತದ ವೇಗಿ ಭುವನೇಶ್ವರ್ ಕುಮಾರ್ 4 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀಲಂಕಾದ ಹಸರಂಗಗೆ ಲಕ್: ಏಷ್ಯಾ ಕಪ್ ಚಾಂಪಿಯನ್ ತಂಡದ ವನಿಂದು ಹಸರಂಗ ಭಾರೀ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಅವರು ಅದ್ಭುತ ಪ್ರದರ್ಶನ ತೋರಿ ಪ್ಲೇಯರ್ ಆಫ್ ಟೂರ್ನ್ಮೆಂಟ್ ಪ್ರಶಸ್ತಿಯನ್ನು ಜಯಿಸಿದ್ದರು. ಇದರಿಂದ ಹಸರಂಗ ಬೌಲರ್ ವಿಭಾಗದಲ್ಲಿ 3 ಸ್ಥಾನ ಏರಿ 6 ಕ್ಕೆ ಬಂದರೆ, ಆಲ್ರೌಂಡರ್ ಪಟ್ಟಿಯಲ್ಲಿ 7 ಸ್ಥಾನ ಜಿಗಿದು 4 ನೇ ಶ್ರೇಯಾಂಕ ಪಡೆದಿದ್ದಾರೆ.
ಓದಿ: ಭಾರತ vs ಆಸ್ಟ್ರೇಲಿಯಾ ಸರಣಿ: ಕಾಂಗರೂ ತಂಡದಿಂದ ಮಾರ್ಷ್, ಸ್ಟಾರ್ಕ್, ಸ್ಟೋಯ್ನಿಸ್ ಔಟ್