ಜೋಹನ್ಸ್ಬರ್ಗ್ : ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಶನಿವಾರ ಮೊದಲ ತರಬೇತಿ ಸೆಷನ್ನಲ್ಲಿ ಪಾಲ್ಗೊಂಡಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಎಲ್ಲಾ ಕ್ರಿಕೆಟಿಗರು ಫೂಟ್‌ವಾಲಿ ಆಡುವ ಮೂಲಕ ದೇಹವನ್ನು ಹಗುರಗೊಳಿಸಿಕೊಂಡರು.
ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ಹೊಸ ಕೋಚ್ ದ್ರಾವಿಡ್ ಅವರೊಂದಿಗೆ ಸೇರಿ ಮೈದಾನದಲ್ಲಿ ಫೂಟ್‌ವಾಲಿ ಆಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ.
ಜೋಹನ್ಸ್ಬರ್ಗ್ನಲ್ಲಿ ಮೊದಲ ತರಬೇತಿ ಸೆಷನ್ಗೂ ಮೊದಲು ಭಾರತೀಯ ತಂಡ ತಮ್ಮ ಬ್ಯಾಟರಿಯನ್ನು ರೀಚಾರ್ಜ್ ಮಾಡಿಕೊಂಡಿದ್ಹೇಗೆ? ಎಂದು ಕ್ಯಾಪ್ಷನ್ ನೀಡಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದೆ.
-
How did #TeamIndia recharge their batteries ahead of their first training session in Jo'Burg? 🤔
— BCCI (@BCCI) December 18, 2021 " class="align-text-top noRightClick twitterSection" data="
On your marks, get set & Footvolley! ☺️😎👏👌#SAvIND pic.twitter.com/dIyn8y1wtz
">How did #TeamIndia recharge their batteries ahead of their first training session in Jo'Burg? 🤔
— BCCI (@BCCI) December 18, 2021
On your marks, get set & Footvolley! ☺️😎👏👌#SAvIND pic.twitter.com/dIyn8y1wtzHow did #TeamIndia recharge their batteries ahead of their first training session in Jo'Burg? 🤔
— BCCI (@BCCI) December 18, 2021
On your marks, get set & Footvolley! ☺️😎👏👌#SAvIND pic.twitter.com/dIyn8y1wtz
ಸ್ಟ್ರೆಂತ್ ಅಂಡ್ ಕಂಡೀಷನಲ್ ಕೋಚ್ ಸೋಹಮ್ ದೇಸಾಯಿ ಮಾತನಾಡಿ, ನಾವು ಮುಂಬೈನಲ್ಲಿ 3 ದಿನಗಳ ಕಠಿಣ ಕ್ವಾರಂಟೈನ್ ಮಾಡಿದ್ದೇವೆ. ಗುರುವಾರ 10 ಗಂಟೆಗಳ ಕಾಲ ಪ್ರಯಾಣ ಮಾಡಿದ್ದೇವೆ. ಇಲ್ಲೂ ಸಹಾ ಕಠಿಣ ಕ್ವಾರಂಟೈನ್ನಲ್ಲಿದ್ದೆವು.
ಹಾಗಾಗಿ, ವಿಶೇಷ ಕೌಶಲ್ಯ ತರಬೇತಿ ಸೆಷನ್ಗೆ ಹೊರಡುವುದು ಆಟಗಾರರಿಗೆ ಕಷ್ಟವಾಗುತ್ತದೆ. ಶುಕ್ರವಾರ ಫೂಟ್‌ವಾಲಿ ಮೂಲಕ ಬೆವರು ಹರಿಸಿದ್ದೇವೆ. ನಾಳೆಯಿಂದ ಸ್ಕಿಲ್ ಸೆಷನ್ ಆರಂಭಿಸಲಿದ್ದೇವೆ ಎಂದು ದೇಸಾಯಿ ತಿಳಿಸಿದ್ದಾರೆ.
ಡಿಸೆಂಬರ್ 26ರಂದು ಸೆಂಚುರಿಯನ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಜೋಹನ್ಸ್ಬರ್ಗ್ ಮತ್ತು ಕೇಪ್ಟೌನ್ನಲ್ಲಿ ಉಳಿದೆರೆಡು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಹಿಂದಿಕ್ಕಿ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟು ಸ್ಥಾನ ಪಡೆದ ಕ್ರಿಕೆಟ್ ದೇವರು