ETV Bharat / sports

ಭಾರತವಷ್ಟೇ ಅಲ್ಲ ವಿಶ್ವಕಪ್​ನಲ್ಲಿ ಪಾಕಿಸ್ತಾನ​ ವಿರುದ್ಧ ಕೊಹ್ಲಿ ಕೂಡ ಅಜೇಯ..

ಭಾರತ ತಂಡ 2007ರಲ್ಲಿ ಒಂದು ಪಂದ್ಯವನ್ನು ಬೌಲ್‌ಔಟ್ ಮೂಲಕ ಗೆದ್ದರೆ, ಫೈನಲ್​ನಲ್ಲಿ 5 ರನ್​ಗಳ ರೋಚಕ ಜಯ ಸಾಧಿಸಿತ್ತು. ಆದರೆ, ಕೊಹ್ಲಿ ಆಗಿನ್ನೂ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. 2009-10ರ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿರಲಿಲ್ಲ..

Virat Kohli still Not out against Pakistan T20 World Cup history
ವಿರಾಟ್ ಕೊಹ್ಲಿ
author img

By

Published : Oct 23, 2021, 2:28 PM IST

ದುಬೈ : ಭಾರತ ತಂಡ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಸೋಲಿಲ್ಲದ ಸರದಾರನಾಗಿದೆ. ಆಡಿರುವ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ವಿಶೇಷವೆಂದರೆ ಈವರೆಗೂ ಪಾಕಿಸ್ತಾನ ವಿಶ್ವಕಪ್​ನಲ್ಲಿ ಒಮ್ಮೆಯೂ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ವಿಕೆಟ್​ ಪಡೆದಿಲ್ಲ.

ಭಾರತ ತಂಡ 2007ರಲ್ಲಿ ಒಂದು ಪಂದ್ಯವನ್ನು ಬೌಲ್‌ಔಟ್ ಮೂಲಕ ಗೆದ್ದರೆ, ಫೈನಲ್​ನಲ್ಲಿ 5 ರನ್​ಗಳ ರೋಚಕ ಜಯ ಸಾಧಿಸಿತ್ತು. ಆದರೆ, ಕೊಹ್ಲಿ ಆಗಿನ್ನೂ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. 2009-10ರ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿರಲಿಲ್ಲ.

ಅಜೇಯ 78 ರನ್​

2012ರರಲ್ಲಿ ಭಾರತ ತಂಡ 8 ವಿಕೆಟ್​ಗಳ ಜಯ ಸಾಧಿಸಿತ್ತು. ಪಾಕಿಸ್ತಾನ ನೀಡಿದ್ದ 129 ರನ್​ಗಳ ಗುರಿಯನ್ನು ಭಾರತ ಇನ್ನು 3 ಓವರ್​ಗಳಿರುವಂತೆ 2 ವಿಕೆಟ್​ ಕಳೆದುಕೊಂಡು ತಲುಪಿತ್ತು. ಈ ಪಂದ್ಯದಲ್ಲಿ ಕೊಹ್ಲಿ 61 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ ಅಜೇಯ 78 ರನ್​ಗಳಿಸಿದ್ದರು.

ಅಜೇಯ 36 ರನ್​

2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಪಾಕಿಸ್ತಾನ 131 ರನ್​ಗಳ ಗುರಿ ನೀಡಿತ್ತು. ಈ ಪಂದ್ಯವನ್ನು ಧೋನಿ ಬಳಗ 3 ವಿಕೆಟ್ ಕಳೆದುಕೊಂಡು ಇನ್ನೂ 9 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು. ರನ್​ ಮಷಿನ್ ಖ್ಯಾತಿಯ ಕೊಹ್ಲಿ 32 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್​ ನೆರವಿನಿಂದ ಅಜೇಯ 36 ರನ್​ಗಳಿಸಿದ್ದರು.

ಅಜೇಯ 55 ರನ್​

ಕೋಲ್ಕತ್ತಾದಲ್ಲಿ 2016ರ ವಿಶ್ವಕಪ್​ನ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ 18 ಓವರ್​ಗಳ ಪಂದ್ಯದಲ್ಲಿ ಭಾರತಕ್ಕೆ 119 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಭಾರತ 15.5 ಓವರ್​​ಗಳಲ್ಲಿ ತಲುಪಿತ್ತು. ವಿರಾಟ್​ 37 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್​ ನೆರವನಿಂದ ಅಜೇಯ 55 ರನ್​ಗಳಿಸಿದ್ದರು.

ಕೊಹ್ಲಿ ಪಾಕಿಸ್ತಾನ ವಿರುದ್ಧ ಆಡಿರುವ ಮೂರು ಟಿ20 ವಿಶ್ವಕಪ್​ಗಳಲ್ಲೂ ಅಜೇಯರಾಗುಳಿದ್ದಾರೆ. ಇದೀಗ ನಾಲ್ಕನೇ ವಿಶ್ವಕಪ್​ನಲ್ಲಿ ಮತ್ತೊಮ್ಮೆ ಪಾಕಿಗಳಿಗೆ ಸಿಂಹಸ್ವಪ್ನವಾಗಿ ಕಾಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ:ಇಂಡೋ- ಪಾಕ್ ಕದನಕ್ಕೆ ಕ್ಷಣಗಣನೆ: ಹಿಂದಿನ 5 ದಿಗ್ವಿಜಯಗಳ ಅಂಕಿ- ಅಂಶ ಇಲ್ಲಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.