ETV Bharat / sports

ಅಭ್ಯಾಸ ಶಿಬಿರಕ್ಕೆ ಹಾಜರಾಗದೇ ನಾಯಕತ್ವ ಕಳೆದುಕೊಂಡ ಬಗ್ಗೆ ಅಸಮಾಧಾನ ಹೊರ ಹಾಕಿದರಾ ಕೊಹ್ಲಿ? - Kohli angry

ವಿರಾಟ್ ಕೊಹ್ಲಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ, ಅವರು ಇನ್ನೂ ಶಿಬಿರಕ್ಕೆ ಸೇರಿಕೊಂಡಿಲ್ಲ. ಅವರು ನಾಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಹೇಳಿದೆ.

Virat Kohli not enter  to bio bobble  in Mumbai Ahead of SA Tour
ವಿರಾಟ್​ ಕೊಹ್ಲಿ
author img

By

Published : Dec 13, 2021, 4:27 PM IST

ಮುಂಬೈ: ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದರಿಂದ ವಿರಾಟ್​ ಕೊಹ್ಲಿ ಅಸಮಾಧಾನ ಮುಂದುವರಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಎಂಸಿಎನಲ್ಲಿ ಕ್ವಾರಂಟೈನ್ ಮತ್ತು ಅಭ್ಯಾಸ ಮಾಡುವುದು ಕಡ್ಡಾಯವಾಗಿದ್ದರೂ ಕೊಹ್ಲಿ ಮಾತ್ರ ಆ ಕ್ಯಾಂಪ್​ಗೆ ಆಗಮಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

ಕಳೆದ ಬುಧವಾರ ಬಿಸಿಸಿಐ ವಿರಾಟ್​ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಆ ಸ್ಥಾನಕ್ಕೆ ನೇಮಿಸಿತ್ತು. ಈ ದಿಢೀರ್​ ನಿರ್ಧಾರವನ್ನು ಕೆಲವು ಕ್ರಿಕೆಟಿಗರ ಸಮರ್ಥಿಸಿಕೊಂಡರೆ, ಇನ್ನೂ ಕೆಲವು ಕ್ರಿಕೆಟಿಗರೂ ಟೀಕಿಸಿದ್ದರು.

ಇನ್ನು 2023ರ ಏಕದಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸುವ ಆಸೆ ಹೊಂದಿದ್ದ ಕೊಹ್ಲಿಗೆ ಈ ನಿರ್ಧಾರ ತೀವ್ರ ಅಸಮಾಧಾನವನ್ನುಂಟು ಮಾಡಿದ್ದು, ಇದೀಗ ಮುಂಬರುವ ಪ್ರವಾಸಕ್ಕೂ ಮುನ್ನ ಬಿಸಿಸಿಐ ನೀಡಿದ್ದ ಸೂಚನೆಯನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗಿದೆ.

"ವಿರಾಟ್ ಕೊಹ್ಲಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ, ಅವರು ಇನ್ನೂ ಶಿಬಿರಕ್ಕೆ ಸೇರಿಕೊಂಡಿಲ್ಲ. ಅವರು ನಾಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಎಲ್ಲ ಆಟಗಾರರು ಮೂರು ದಿನಗಳ ಕಾಲ ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ನ ಬಯೋಬಬಲ್​​ನಲ್ಲಿ ಕ್ವಾರಂಟೈನ್ ಮಾಡಬೇಕಿದೆ" ಎಂದು ಬಿಸಿಸಿಐ ಅಧಿಕಾರಿಗಳು ಇನ್​ಸೈಡ್​ ಸ್ಪೋರ್ಟ್ಸ್​ಗೆ ತಿಳಿಸಿದ್ದಾರೆ.

ಅಲ್ಲದೇ ಕೊಹ್ಲಿಗೆ ಈ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಸಾಕಷ್ಟು ಬಾರಿ ಕರೆ ಮಾಡಿದ್ದೆವು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ ಎಂದಿದ್ದಾರೆ. ಭಾರತದ ಡಿಸೆಂಬರ್​ 16ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 26 ರಿಂದ ಸೆಂಚುರಿಯನ್​ನಲ್ಲಿ ಮೊದಲ ಟೆಸ್ಟ್​ ಪಂದ್ಯವನ್ನಾಡಲಿದೆ.

ಇದನ್ನೂ ಓದಿ:ಭಾರತ ತಂಡವನ್ನು ಕೊಹ್ಲಿ ಹಿಂದೆ ತಿರುಗಿ ನೋಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ: ರೋಹಿತ್ ಶರ್ಮಾ ಶ್ಲಾಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.