ETV Bharat / sports

Virat Kohli: ಸಾವಿರ ಕೋಟಿಗೆ ಒಡೆಯ ವಿರಾಟ್​.. ಕೊಹ್ಲಿ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಸಿಗುವ​ ಹಣವೆಷ್ಟು ಗೊತ್ತಾ?

ಖ್ಯಾತ ಕ್ರಿಕೆಟಿಗ ವಿರಾಟ್​ ಕೊಹ್ಲಿ ಹಲವು ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು, ಕೋಟ್ಯಾಂತರ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಂದಲೇ ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ.

Virat Kohli Earns Over Rs 1000 Crore Per Year Report
ವಿರಾಟ್​ ಕೊಹ್ಲಿ
author img

By

Published : Jun 18, 2023, 10:42 PM IST

ಭಾರತದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಕ್ರೀಡಾಭಿಮಾನಿಗಳಲ್ಲದೇ ​ಸಾಮಾನ್ಯ ಜನರಿಗೂ ಪರಿಚಿತ. ಯುವ ಕ್ರೀಡಾಪಟುಗಳ ಪಾಲಿಗೆ​ ಐಕಾನ್​ ಆಗಿ ಹೊರಹೊಮ್ಮಿದ್ದಾರೆ. ಕ್ರಿಕೆಟ್​ನಲ್ಲಿ ಹಲವು ದಾಖಲೆಗಳ ಮೂಲಕ ರನ್​ ಮಷಿನ್​ ಎಂದೇ ಖ್ಯಾತರಾಗಿರುವ ವಿರಾಟ್​ ಸಂಪಾದನೆಯಲ್ಲೂ ಕೋಟ್ಯಾಂತರ ರೂಪಾಯಿಯ ಸರದಾರ. ಹಲವಾರು ಬ್ರ್ಯಾಂಡ್​ಗಳ ಜಾಹೀರಾತು ಮತ್ತು ಕ್ರಿಕೆಟ್ ವೃತ್ತಿ ಜೀವನದಿಂದ ಬಹುಕೋಟಿ ಸಂಪಾದನೆ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರು. ವಿರಾಟ್ ಬ್ಯ್ರಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ನಿವ್ವಳ ಆಸ್ತಿ ಮೌಲ್ಯ 1050 ಕೋಟಿ ರೂಪಾಯಿಗಳಂತೆ.

ವಿರಾಟ್​ ಭಾರತ ಕ್ರಿಕೆಟ್​ ತಂಡದ ಮೂರೂ ಮಾದರಿಯಲ್ಲೂ ಆಡುತ್ತಿದ್ದು ಬಿಸಿಸಿಐನ ಎ ಗ್ರೇಡ್ ಗುತ್ತಿಗೆಯಲ್ಲಿ ತಂಡವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಬಿಸಿಸಿಐನಿಂದ ವಾರ್ಷಿಕವಾಗಿ 7 ಕೋಟಿ ಸಂಬಳ ಪಡೆಯುತ್ತಾರೆ. ಕೊಹ್ಲಿಗೆ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ಮತ್ತು ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಹಾಗೂ ಐಪಿಎಲ್‌ನಿಂದ ಪ್ರತಿ ವರ್ಷ 15 ಕೋಟಿ ರೂ. ಸಿಗಲಿದೆ.

Virat Kohli Earns Over Rs 1000 Crore Per Year Report
ಸಾವಿರ ಕೋಟಿಗೆ ಒಡೆಯ ವಿರಾಟ್​

ವಿರಾಟ್ ಕೊಹ್ಲಿ 18ಕ್ಕೂ ಹೆಚ್ಚು ಬ್ರ್ಯಾಂಡ್​ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ಜಾಹೀರಾತು ಬ್ರ್ಯಾಂಡ್​ನಿಂದ 7.5 ಕೋಟಿಯಿಂದ 10 ಕೋಟಿವರೆಗೆ ಗಳಿಕೆ ಮಾಡುತ್ತಾರೆ ಎಂದು ವರದಿ ಹೇಳಿದೆ. ಮಿಂತ್ರಾ, ವಿವೋ, ನಾಯ್ಸ್​, ಪಳೈರ್​ ಬೋಲ್ಟ್, ಟೂ ಯಮ್​, ವಾಲಿನಿ, ಟೂದಿಸ್​, ಸ್ಟಾರ್​ ಸ್ಪೋರ್ಟ್ಸ್, ಟಿಸ್ಸಾಟ್, ಎಂಆರ್​ಎಫ್​ ಮತ್ತು ರಾಂಗ್​ ನಂತಹ ಬಹು ಬ್ರ್ಯಾಂಡ್​​ಗಳಿಗೆ ಜಾಹೀರಾತು ನೀಡುತ್ತಾರೆ.

ಜೊತೆಗೆ, ವಿರಾಟ್ ಇನ್​ಸ್ಟಾಗ್ರಾಮ್​ನಲ್ಲಿ ಪ್ರತಿ ಪ್ರಚಾರ ಪೋಸ್ಟ್‌ಗೆ 8.9 ಕೋಟಿ ಮತ್ತು ಟ್ವಿಟರ್​ನಲ್ಲಿ ಪ್ರತಿ ಪ್ರಚಾರದ ಟ್ವೀಟ್‌ಗೆ 2.5 ಕೋಟಿ ರೂ. ಪಡೆಯುತ್ತಾರೆ. ಅವರು One 8, Stepathlon, Wrogn ಮತ್ತು Nueva ನಂತಹ ಸ್ಟಾರ್ಟ್‌ಅಪ್‌ಗಳನ್ನೂ ಹೊಂದಿದ್ದಾರೆ. ಎಂಪಿಎಲ್, ಡಿಜಿಟ್, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್, ಚಿಸೆಲ್, ರೇಜ್ ಕಾಫಿ ಮತ್ತು ಬ್ಲೂ ಟ್ರೈಬ್‌ನಂತಹ ಸ್ಟಾರ್ಟ್‌ಅಪ್‌ಗಳಿಗೆ ವಿರಾಟ್ ಧನ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ, ಕೊಹ್ಲಿ ಎಫ್‌ಸಿ ಗೋವಾ (ಫುಟ್‌ಬಾಲ್), ಯುಎಇ ರಾಯಲ್ಸ್ (ಟೆನ್ನಿಸ್) ಮತ್ತು ಬೆಂಗಳೂರು ಯೋಧಾಸ್ (ಪ್ರೊ ವ್ರೆಸ್ಲಿಂಗ್) ಕ್ರೀಡಾ ತಂಡಗಳನ್ನು ಹೊಂದಿದ್ದಾರೆ. ಮುಂಬೈ ಮತ್ತು ಗುರುಗ್ರಾಮ್‌ನಲ್ಲಿ ಮನೆ ಹೊಂದಿದ್ದಾರೆ. ಆಡಿ, ರೇಂಜ್ ರೋವರ್ ಮತ್ತು ಬೆಂಟ್ಲಿಯಂತಹ ಬ್ರಾಂಡ್‌ಗಳನ್ನು ಒಳಗೊಂಡಂತೆ 32 ಕೋಟಿಗೂ ಹೆಚ್ಚು ಮೌಲ್ಯದ ಐಷಾರಾಮಿ ಕಾರುಗಳನ್ನು ವಿರಾಟ್ ಹೊಂದಿದ್ದಾರಂತೆ.

ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಸಜ್ಜಾಗುತ್ತಿರುವ ವಿರಾಟ್​: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ನಂತರ ಭಾರತ ತಂಡಕ್ಕೆ ಒಂದು ತಿಂಗಳ ಬಿಡುವು ಸಿಕ್ಕಿದೆ. ಬಳಿಕ ಜುಲೈ 12ರಿಂದ ವೆಸ್ಟ್​ ಇಂಡೀಸ್​ನಲ್ಲಿ ಎರಡು ಟೆಸ್ಟ್,​ ಮೂರು ಏಕದಿನ ಮತ್ತು ಐದು ಟಿ20 ಸರಣಿ ತಂಡ ಆಡಲಿದೆ. ಉತ್ತಮ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿ ಕೆರಿಬಿಯನ್​ ನಾಡಿನಲ್ಲಿ ದೊಡ್ಡ ಇನ್ನಿಂಗ್ಸ್​ ಆಡಲೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

ಇದನ್ನೂ ಓದಿ: Ashes 2023: ಖವಾಜಾ ವಿಕೆಟ್​ಗಾಗಿ ವಿಭಿನ್ನ ಫೀಲ್ಡಿಂಗ್​ ತಂತ್ರ​​​.. ಯಶಸ್ಸು ಕಂಡ ಇಂಗ್ಲೆಂಡ್​ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.