ಅಡಿಲೇಡ್(ಆಸ್ಟ್ರೇಲಿಯಾ): ಬಾಂಗ್ಲಾದೇಶದ ವಿರುದ್ಧ ಮಳೆ ಅಡ್ಡಿಯ ಮಧ್ಯೆಯೂ ಭಾರತ ವಿಕ್ರಮ ಸಾಧಿಸಿದೆ. ವಿಶ್ವಕಪ್ನಲ್ಲಿ 3ನೇ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಆದರೆ, ದಿನೇಶ್ ಕಾರ್ತಿಕ್ ವಿವಾದಾತ್ಮಕ ರನೌಟ್ ಆಗಲು ಕಾರಣವಾಗಿದ್ದು, ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ದಿನೇಶ್ ಕಾರ್ತಿಕ್ರ ಕ್ರಿಕೆಟ್ ಬದುಕನ್ನು ವಿರಾಟ್ ಕೊಹ್ಲಿ ಮುಗಿಸಿದರು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಗ್ರೇಟ್ ಫಿನಿಶರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಪಡೆದರೂ ರನ್ ಗಳಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನ ವಿರುದ್ಧ ವಿಕೆಟ್ ಸ್ಟಂಪ್ ಆಗಿ ನಿರಾಸೆ ಮೂಡಿಸಿದ್ದರು. ಇಂದು ಬುಧವಾರ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲೂ ರನೌಟ್ ಆಗಿ ಹೊರನಡೆದರು.
-
@chaituking13 @K__R__Prabin__ @ShipraGhosh26 @paro_sachinist wicket of dinesh kartik run out seems to be controversial @rohangava9 @virendersehwag pic.twitter.com/tiPOZbsiwG
— Amit (@Amit_srt) November 2, 2022 " class="align-text-top noRightClick twitterSection" data="
">@chaituking13 @K__R__Prabin__ @ShipraGhosh26 @paro_sachinist wicket of dinesh kartik run out seems to be controversial @rohangava9 @virendersehwag pic.twitter.com/tiPOZbsiwG
— Amit (@Amit_srt) November 2, 2022@chaituking13 @K__R__Prabin__ @ShipraGhosh26 @paro_sachinist wicket of dinesh kartik run out seems to be controversial @rohangava9 @virendersehwag pic.twitter.com/tiPOZbsiwG
— Amit (@Amit_srt) November 2, 2022
ರನ್ ಓಟದಲ್ಲಿ ಗೊಂದಲ: ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 15.1 ನೇ ಓವರ್ ವೇಳೆ ಮೈದಾನಕ್ಕಿಳಿದರು. ಈ ವೇಳೆ ರನ್ ವೇಗ ಹೆಚ್ಚಿಸಲು ನೆರವಾಗಲಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. 1 ಬೌಂಡರಿ ಬಾರಿಸಿದ ಕಾರ್ತಿಕ್ ಬಾಂಗ್ಲಾಗೆ ಎಚ್ಚರಿಕೆ ನೀಡಿದ್ದರು. ಈ ವೇಳೆ, 17ನೇ ಓವರ್‌ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಎಕ್ಸ್‌ಟ್ರಾ ಕವರ್ ಕಡೆಗೆ ಚೆಂಡು ಹೊಡೆದು ರನ್ ಗಳಿಸಿಲು ಮುಂದಾದರು.
ಬಳಿಕ ಚೆಂಡು ಫೀಲ್ಡರ್ ಕೈ ಸೇರಿದಾಗ ದಿನೇಶ್ರನ್ನು ತಡೆದು ಕ್ರೀಸ್ಗೆ ವಾಪಸ್ ಆದರು. ಈ ವೇಳೆ, ದಿನೇಶ್ ಅರ್ಧ ಮೈದಾನಕ್ಕೆ ಬಂದಿದ್ದರು. ಕ್ರೀಸ್ಗೆ ವಾಪಸ್ ಆಗಲು ದೊಡ್ಡ ಡೈವ್ ಹೊಡೆದರೂ ದಿನೇಶ್ ಬೌಲರ್ಗೆ ಚೆಂಡು ಸಿಕ್ಕು ರನೌಟ್ ಮಾಡಿದ್ದರು.
-
Virat Kohli just ended the career of Dinesh Karthik......
— Prashant Jha (@pjha2000) November 2, 2022 " class="align-text-top noRightClick twitterSection" data="
Thank You DK!#INDvsBAN
">Virat Kohli just ended the career of Dinesh Karthik......
— Prashant Jha (@pjha2000) November 2, 2022
Thank You DK!#INDvsBANVirat Kohli just ended the career of Dinesh Karthik......
— Prashant Jha (@pjha2000) November 2, 2022
Thank You DK!#INDvsBAN
ವಿವಾದಾತ್ಮಕ ರನೌಟ್: ದಿನೇಶ್ ಕಾರ್ತಿಕ್ ಡೈವ್ ಹೊಡೆಯುವಷ್ಟರಲ್ಲಿ ಬೌಲರ್ ರನೌಟ್ ಮಾಡಿದ್ದರು. ಮೂರನೇ ಅಂಪೈರ್ ರೀಪ್ಲೇಗಳಲ್ಲಿ ಚೆಂಡು ವಿಕೆಟ್ಗೆ ತಾಗಿದ್ದರೂ ವಿಕೆಟ್ ಬೇಲ್ಸ್ ಮೇಲೆದ್ದಿರಲಿಲ್ಲ. ಕೈ ತಾಕಿದ್ದರಿಂದ ವಿಕೆಟ್ ಹಾರಿತು. ಚೆಂಡಿಗಿಂತಲೂ ಕೈ ತಾಗಿ ವಿಕೆಟ್ ಬೇಲ್ಸ್ ಹಾರಿದ್ದರೂ ಅಂಪೈರ್ ಔಟ್ ನೀಡಿದರು. ಇದು ವಿವಾದ ಎಬ್ಬಿಸಿದೆ.
ಕೊಹ್ಲಿ ಮೇಲೆ ರನೌಟ್ ಗೂಬೆ: ಇನ್ನು ದಿನೇಶ್ ಕಾರ್ತಿಕ್ ಕಷ್ಟಪಟ್ಟು ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದಾರೆ. 4 ಪಂದ್ಯಗಳು ಮುಗಿದಿದ್ದು, ದಿನೇಶ್ ಬ್ಯಾಟ್ನಿಂದ ಈವರೆಗೂ ರನ್ ಹರಿದುಬಂದಿಲ್ಲ. ವಿರಾಟ್ ಕೊಹ್ಲಿ ರನ್ ಕದಿಯಲು ಬಂದು ಮತ್ತೆ ವಾಪಸ್ ಆಗಿದ್ದು, ಬೆಲೆ ತೆರುವಂತಾಯಿತು. ರನೌಟ್ ಆದ ದಿನೇಶ್ ಕಾರ್ತಿಕ್ ಕ್ರಿಕೆಟ್ ಕೆರಿಯರ್ ಇನ್ನು ಮುಗಿಯಿತು ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
ಓದಿ: ವರುಣನ ಕಾಟಕ್ಕೂ ಬೆದರದ ಭಾರತ.. ಮಳೆಗೆ ತೋಯ್ದ ಬಾಂಗ್ಲಾಗೆ 5 ರನ್ಗಳ ಸೋಲು