ಕೇಪ್ಟೌನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 100ನೇ ಕ್ಯಾಚ್ ಪಡೆದು ದ್ರಾವಿಡ್, ಲಕ್ಷ್ಮಣ್ ಸೇರಿದಂತೆ ದಿಗ್ಗಜರಿರುವ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಶಮಿ ಬೌಲಿಂಗ್ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಟೆಂಬ ಬವುಮಾ ಕ್ಯಾಚ್ ಪಡೆದ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ನೂರನೇ ಕ್ಯಾಚ್ ಮೈಲುಗಲ್ಲು ತಲುಪಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 100 ಕ್ಯಾಚ್ ಪಡೆದ ಭಾರತದ 6ನೇ ಫೀಲ್ಡರ್ ಎನಿಸಿಕೊಂಡರು.
-
A century of catches in whites for @imVkohli 👏👏#TeamIndia pic.twitter.com/tJIF5QMq1r
— BCCI (@BCCI) January 12, 2022 " class="align-text-top noRightClick twitterSection" data="
">A century of catches in whites for @imVkohli 👏👏#TeamIndia pic.twitter.com/tJIF5QMq1r
— BCCI (@BCCI) January 12, 2022A century of catches in whites for @imVkohli 👏👏#TeamIndia pic.twitter.com/tJIF5QMq1r
— BCCI (@BCCI) January 12, 2022
ವಿರಾಟ್ ಕೊಹ್ಲಿ ತಮ್ಮ 99ನೇ ಟೆಸ್ಟ್ ಪಂದ್ಯದಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಪ್ರಸ್ತುತ ಭಾರತ ತಂಡದ ಕೋಚ್ ಅಗಿರುವ ದಿಗ್ಗಜ ರಾಹುಲ್ ದ್ರಾವಿಡ್ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಶ್ವದಾಖಲೆ ಹೊಂದಿದ್ದಾರೆ. ಅವರು 164 ಟೆಸ್ಟ್ ಪಂದ್ಯಗಳಲ್ಲಿ 210 ಕ್ಯಾಚ್ ಪಡೆದಿದ್ದಾರೆ. ಇವರ ಜೊತೆಗೆ ಜಯವರ್ದನೆ (205) ಮತ್ತು ಜಾಕ್ ಕಾಲೀಸ್ (200) ಮತ್ತಿಬ್ಬರು ಕ್ರಿಕೆಟಿಗರು ಸೇರಿದ್ದಾರೆ.
ಭಾರತೀಯರಲ್ಲಿ ನೋಡುವುದಾದರೆ, ದ್ರಾವಿಡ್(210), ವಿವಿಎಸ್ ಲಕ್ಷ್ಮಣ್(135), ಸಚಿನ್ ತೆಂಡೂಲ್ಕರ್(115), ಸುನಿಲ್ ಗವಾಸ್ಕರ್(108) ಮತ್ತು ಮೊಹಮದ್ ಅಜರುದ್ದೀನ್ (105) 100 ಕ್ಯಾಚ್ ಪಡೆದ ಫೀಲ್ಡರ್ಗಳಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿತ ವಾಷಿಂಗ್ಟನ್ ಔಟ್; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಜಯಂತ್, ಸೈನಿ ಇನ್