ETV Bharat / sports

ತವರಿನಲ್ಲಿ 5000 ರನ್ ಪೂರೈಸಿದ ಕೊಹ್ಲಿ ​; ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್​ - ಜಾಕ್ ಕಾಲೀಸ್​

ಅಗ್ರಸ್ಥಾನದಲ್ಲಿ ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್​ ಇದ್ದು, ಅವರು ಭಾರತದಲ್ಲಿ 6976 ರನ್​ಗಳಿಸಿದ್ದಾರೆ. ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದಲ್ಲಿ 5521 ರನ್​, ಜಾಕ್ ಕಾಲೀಸ್​ ದಕ್ಷಿಣ ಆಫ್ರಿಕಾದಲ್ಲಿ 5186 ರನ್​ಗಳಿಸಿದ್ದಾರೆ. ಸಚಿನ್​ ಭಾರತದಲ್ಲಿ 5 ಸಾವಿರ ರನ್​ಗಳಿಸಿಲು 121 ಇನ್ನಿಂಗ್ಸ್​ ತೆಗೆದುಕೊಂಡರೆ, ಕೊಹ್ಲಿ 96 ಇನ್ನಿಂಗ್ಸ್​ಗಳಲ್ಲೇ ಈ ಸಾಧನೆ ಮಾಡಿದ್ದಾರೆ..

Virat Kohli becomes 4th batter to complete 5000 ODI runs at home
ವಿರಾಟ್ ಕೊಹ್ಲಿ ದಾಖಲೆ
author img

By

Published : Feb 6, 2022, 7:27 PM IST

ಅಹ್ಮದಾಬಾದ್​ : ವಿರಾಟ್​ ಕೊಹ್ಲಿ ಭಾನುವಾರ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ 8 ರನ್​ಗಳಿಸಿ ವಿಕೆಟ್​ ಒಪ್ಪಿಸಿದರೂ, ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿ ಸಚಿನ್​, ಜಾಕ್ ಕಾಲೀಸ್​ ಮತ್ತು ರಿಕಿ ಪಾಂಟಿಂಗ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಅಲ್ಜಾರಿ ಜೋಶೆಫ್​ ಎಸೆದ 14ನೇ ಓವರ್​ನಲ್ಲಿ ನಾಯಕ ರೋಹಿತ್ ಶರ್ಮಾ(60) ವಿಕೆಟ್​​ ಪತನದ ಬಳಿಕ ಬ್ಯಾಟಿಂಗ್‌ಗೆ ಆಗಮಿಸಿದ ವಿರಾಟ್​, ತಾವೆದುರಿಸಿದ ಮೊದಲೆರಡು ಎಸೆತಗಳಲ್ಲೇ ಎರಡು ಬೌಂಡರಿ ಬಾರಿಸಿದರು. ಆದರೆ, ಅದೇ ಓವರ್​ನ 5ನೇ ಎಸೆತದಲ್ಲಿ ಕೆಮರ್​ ರೋಚ್​ಗೆ ಕ್ಯಾಚ್​ ನೀಡಿ ಔಟಾದರು.

ಆದರೆ, ಈ 8 ರನ್​ಗಳಿಸುತ್ತಿದ್ದಂತೆ ಅವರು ಭಾರತದಲ್ಲಿ 5000 ರನ್​ಗಳಿಸಿದ ದಾಖಲೆಗೆ ಪಾತ್ರರಾದರು. ಈ ಮೂಲಕ ಒಂದು ರಾಷ್ಟ್ರದಲ್ಲಿ ಈ ವಿಶೇಷ ಸಾಧನೆಗೆ ಪಾತ್ರರಾದ 4ನೇ ಬ್ಯಾಟರ್​ ಎನಿಸಿಕೊಂಡರು.

ಅಗ್ರಸ್ಥಾನದಲ್ಲಿ ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್​ ಇದ್ದು, ಅವರು ಭಾರತದಲ್ಲಿ 6976 ರನ್​ಗಳಿಸಿದ್ದಾರೆ, ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದಲ್ಲಿ 5521 ರನ್​, ಜಾಕ್ ಕಾಲೀಸ್​ ದಕ್ಷಿಣ ಆಫ್ರಿಕಾದಲ್ಲಿ 5186 ರನ್​ಗಳಿಸಿದ್ದಾರೆ. ಸಚಿನ್​ ಭಾರತದಲ್ಲಿ 5 ಸಾವಿರ ರನ್​ಗಳಿಸಿಲು 121 ಇನ್ನಿಂಗ್ಸ್​ ತೆಗೆದುಕೊಂಡರೆ, ಕೊಹ್ಲಿ 96 ಇನ್ನಿಂಗ್ಸ್​ಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ ಬ್ಯಾಟಿಂಗ್ ವೈಫಲ್ಯನ ಅನುಭವಿಸಿ 176 ರನ್​ಗಳಿಗೆ ಆಲೌಟ್​ ಆಗಿತ್ತು. ಚಹಲ್​ 4, ವಾಷಿಂಗ್ಟನ್ ಸುಂದರ್​ 3 ಮತ್ತು ಪ್ರಸಿಧ್ ಕೃಷ್ಣ ಒಂದು ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:ಅಜ್ಜ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದರೆ, ಅಪ್ಪ ಯುವರಾಜ್ ಕೋಚ್​.... ಕುಟುಂಬದ 3ನೇ ತಲೆಮಾರಿನ ಕುಡಿ U19 ವಿಶ್ವಕಪ್ ಚಾಂಪಿಯನ್!​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.