ETV Bharat / sports

ಕೊಹ್ಲಿ 100ನೇ ಟೆಸ್ಟ್: ತಂದೆ ಸಾವಿನ ದಿನದಂದೂ ವಿರಾಟ್​ ಬದ್ಧತೆಯ ಆಟ ನೆನೆದ ಪಾರ್ಟ್ನರ್​ ಪುನೀತ್ ಬಿಶ್ತ್​ - ವಿರಾಟ್​ ಕೊಹ್ಲಿ 100ನೇ ಟೆಸ್ಟ್​ ಪಂದ್ಯ

ವಿರಾಟ್​ ಕೊಹ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ನೋಡಬೇಕೆಂಬುದು ಕೊಹ್ಲಿ ತಂದೆಯ ಕೊನೆಯ ಆಸೆಯಾಗಿತ್ತು. ಆದರೆ ಮಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಮೊದಲೇ 2006 ಡಿಸೆಂಬರ್​ 16ರಂದು ಪ್ರೇಮ್ ಕೊಹ್ಲಿ ನಿಧನರಾಗಿದ್ದರು.

virat kohli 100th test
ವಿರಾಟ್ ಕೊಹ್ಲಿ 100ನೇ ಟೆಸ್ಟ್​​
author img

By

Published : Mar 1, 2022, 7:19 PM IST

ನವದೆಹಲಿ: ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಮಾರ್ಚ್​ 4ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ವೃತ್ತಿ ಜೀವನದ 100ನೇ ದೀರ್ಘ ಮಾದರಿ ಪಂದ್ಯವಾಗಿದೆ. ಈ ಸಂದರ್ಭದಲ್ಲಿ ಅವರ ದೆಹಲಿಯ ರಣಜಿ ಸಹ ಆಟಗಾರ ಪುನೀತ್ ಬಿಶ್ತ್​ 2006ರಲ್ಲಿ ಕರ್ನಾಟಕ ವಿರುದ್ಧ​ ಕೊಹ್ಲಿ ತಂದೆಯ ಸಾವಿನ ನಡುವೆಯೂ ಮೈದಾನಕ್ಕಿಳಿದು ತಮ್ಮ 152 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಜೊತೆಯಾಟ ನನ್ನ ವೃತ್ತಿ ಜೀವನದಲ್ಲಿನ ಅವಿಸ್ಮರಣೀಯ ಕ್ಷಣವಾಗಿ ಉಳಿದುಕೊಂಡಿದೆ ಎಂದಿದ್ದಾರೆ.

ವಿರಾಟ್​ ಕೊಹ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ನೋಡಬೇಕೆಂಬುದು ಕೊಹ್ಲಿ ತಂದೆಯ ಕೊನೆಯ ಆಸೆಯಾಗಿತ್ತು. ಆದರೆ ಮಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಮೊದಲೇ 2006 ಡಿಸೆಂಬರ್​, 16ರಂದು ಪ್ರೇಮ್ ಕೊಹ್ಲಿ ನಿಧನರಾಗಿದ್ದರು.

ಅಂದು ಕರ್ನಾಟಕ ಮತ್ತು ಡೆಲ್ಲಿ ತಂಡಗಳು ರಣಜಿಯಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದ ಎರಡನೇ ದಿನ ಅಜೇಯ 40 ರನ್ ​ಗಳಿಸಿದ್ದ 17 ವರ್ಷದ ಕೊಹ್ಲಿ ಮೂರನೇ ದಿನ ತಂಡವನ್ನು ಫಾಲೋ ಆನ್​​ನಿಂದ ಪಾರು ಮಾಡುವ ಆಲೋಚನೆಯಲ್ಲಿದ್ದರು. ಆದರೆ ಅವರಿಗೆ ತಂದೆ ಸಾವಿನ ಸುದ್ದಿ ಆಕಾಶ ಕಳಚಿ ಬೀಳುವಂತೆ ಮಾಡಿತ್ತು. ತಮ್ಮನ್ನು ದೊಡ್ಡ ಕ್ರಿಕೆಟರ್​ ಆಗಬೇಕೆಂಬ ಕನಸು ಕಂಡಿದ್ದ ತನ್ನ ತಂದೆಯ ಕೊನೆಯ ಆಸೆಯನ್ನು ಮನದಲ್ಲಿಟ್ಟುಕೊಂಡಿದ್ದ ಕೊಹ್ಲಿ ನೋವಿನಲ್ಲೂ ಮೈದಾನಕ್ಕಿಳಿದು 280 ನಿಮಿಷಗಳ ಕಾಲ ಬ್ಯಾಟಿಂಗ್​ ನಡೆಸಿ ತಂಡವನ್ನು ಫಾಲೋ ಆನ್​ನಿಂದ ಪಾರು ಮಾಡಿದ್ದರು. ದುಃಖದ ಸಂದರ್ಭದಲ್ಲಿಯೂ ಅವರು ಅಂದು 19 ವರ್ಷದವರಾಗಿದ್ದ ಪುನೀತ್ ಬಿಸ್ತ್​ ಅವರ ಜೊತೆಗೆ 152 ರನ್​ಗಳ ಜೊತೆಯಾಟ ನಡೆಸಿದ್ದರು. ಪಂದ್ಯದ ನಂತರ ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಿದಿದ್ದರು.

ಪಿಟಿಐ ಜೊತೆಗೆ 16 ವರ್ಷಗಳ ಹಿಂದಿನ ಘಟನೆಯನ್ನು ನೆನೆದಿರುವ ಬಿಶ್ತ್​​, ಅಂದು ಆ ಯುವ ಕೊಹ್ಲಿಯ ಮುಖದಲ್ಲಿ ಕಂಡ ನೋಟ ಎಂತಹವರಿಗೂ ಆತ ಭಾರತ ತಂಡಕ್ಕೆ ಭವಿಷ್ಯದಲ್ಲಿ ನಾಯಕನಾಗುತ್ತಾನೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಏಕೆಂದರೆ ಬಾಲಕನಾಗಿದ್ದ ಸಮಯದಲ್ಲೂ ತಂದೆಯ ಸಾವಿನ ನೋವನ್ನು ಮನದಲ್ಲಿ ತುಂಬಿಕೊಂಡಿದ್ದರೂ, ಅವರು ಮಾತ್ರ ತನ್ನ ತಂಡವನ್ನು ಸೋಲಿನಿಂದ ಪಾರು ಮಾಡಲು ಹೋರಾಟ ನಡೆಸುತ್ತಿದ್ದರು ಎಂದು ಮೇಘಾಲಯ ತಂಡಕ್ಕಾಗಿ ಆಡುತ್ತಿರುವ ವಿಕೆಟ್​ ಕೀಪರ್​ ವಿವರಿಸಿದ್ದಾರೆ.

"ಆ ದಿನವನ್ನು ನೆನೆದರೆ ನಾನು ಇಂದಿಗೂ ಆಶ್ಚರ್ಯ ಪಡುತ್ತೇನೆ, ಏಕೆಂದರೆ ಆತ ಆ ಕ್ಷಣದಲ್ಲೂ ಮೈದಾನಕ್ಕೆ ಹೋಗುವ ಧೈರ್ಯವನ್ನು ಹೇಗೆ ಪಡೆದುಕೊಂಡಿದ್ದರು ಎಂಬುದು ಎಲ್ಲರ ಮನದಲ್ಲಿತ್ತು. ಆ ದುರಂತದಲ್ಲಿ ನಾವೆಲ್ಲರೂ ಮೌನವಾಗಿದ್ದೆವು. ಆದರೆ ಆ ಹುಡುಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೊರಗೆ ಹೋಗಿ ಬ್ಯಾಟ್ ಮಾಡಲು ಸಿದ್ಧನಾಗಿ ನಿಂತಿದ್ದನು" ಎಂದು ಅಂದಿನ ದೆಹಲಿಯ ಪ್ರಧಾನ ವಿಕೆಟ್‌ ಕೀಪರ್ ಹೇಳಿದ್ದಾರೆ.

ತಂದೆ ಅಂತಿಮ ಸಂಸ್ಕಾರ ಆಗಿರಲಿಲ್ಲ.. ಅಂದು ಕರ್ನಾಟಕದ ವಿರುದ್ಧ ದೆಹಲಿ ತಂಡ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಆದರೆ ಬ್ಯಾಟರ್ ಆಗಿ ಆತ ತನ್ನ ತಂಡ ಸೋಲುವುದನ್ನು ತಪ್ಪಿಸುವ ಸಲುವಾಗಿ ಕೊಹ್ಲಿ ವಾಪಸ್​ ಬಂದಿದ್ದರು. ನಿಮ್ಮ ಗಮನಕ್ಕಿರಲಿ. ಆ ವೇಳೆ ಅವರ ತಂದೆಯ ಅಂತಿಮ ಸಂಸ್ಕಾರ ಕೂಡ ಆಗಿರಲಿಲ್ಲ. ಕಠಿಣ ಸಂದರ್ಭದಲ್ಲಿ ಕೊಹ್ಲಿಯುನ್ನು ಕೋಚ್​ ಚೇತನ್​ ಚೌಹಾಣ್ ಮತ್ತು ನಾಯಕ ಮಿಥುನ್ ಮನ್ಹಾಸ್ ಕೊಹ್ಲಿಯನ್ನು ಮನೆಗೆ ಹೋಗುವಂತೆ ಸೂಚಿಸಿದ್ದರು.

ಅಂದು 17 ವರ್ಷದ ಯುವಕ ತಂದೆಯ ಸಾವಿನ ದುಃಖವನ್ನು ಹೇಗೆ ಸ್ವೀಕರಿಸುತ್ತಾನೆ ಮತ್ತು ಅದರಿಂದ ಹೇಗೆ ಹೊರ ಬರುತ್ತಾನೆ ಎನ್ನುವ ತಳಮಳ ನಮ್ಮೆಲ್ಲರಲ್ಲಿತ್ತು. ಆದರೆ ಕೊಹ್ಲಿ ಇಡೀ ದಿನ ಬ್ಯಾಟಿಂಗ್ ಮಾಡಿ ಸನ್ನಿವೇಶವನ್ನು ವಿಭಿನ್ನವಾಗಿಸಿದರು. ಅದಕ್ಕೆ ಇಂದು ಗ್ರೇಟ್ ಕೊಹ್ಲಿ ಎಂದು ನಾವೆಲ್ಲಾ ಮಾತನಾಡುತ್ತೇನೆ ಎಂದು ಬಿಶ್ತ್​​ ವಿವರಿಸಿದರು.

ಇದನ್ನೂ ಓದಿ:ಐಸಿಸಿ ಏಕದಿನ ಶ್ರೇಯಾಂಕ: 20ನೇ ಸ್ಥಾನಕ್ಕೆ ಬಡ್ತಿ ಪಡೆದ ಕೌರ್, ಟಾಪ್ 10ರಲ್ಲಿ ಮಿಥಾಲಿ-ಮಂಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.